Kannada NewsKarnataka NewsLatest
ಬೆಳಗಾವಿ ಗ್ರಾಮೀಣ ಕ್ಷೇತ್ರದ 23 ಗ್ರಾಮಗಳಲ್ಲಿ ನೂರಕ್ಕೆ ನೂರು ವ್ಯಾಕ್ಸಿನೇಶನ್: ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅಮೋಘ ಸಾಧನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ 23 ಗ್ರಾಮಗಳಲ್ಲಿ ನೂರಕ್ಕೆ ನೂರರಷ್ಟು ಮೊದಲ ಡೋಸ್ ವ್ಯಾಕ್ಸಿನೇಶನ್ ಪೂರ್ಣಗೊಂಡಿದ್ದು, ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅಮೋಘ ಸಾಧನೆ ಮಾಡಿದಂತಾಗಿದೆ.

ಇನ್ನುಳಿದ ಗ್ರಾಮಗಳಲ್ಲಿ ಕೂಡ ಶೇ.90ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಲಸಿಕಾಕರಣವಾಗಿದೆ. ಆ ಎಲ್ಲ ಗ್ರಾಮಗಳಲ್ಲಿ ಇನ್ನು ಒಂದೆರಡು ವಾರದಲ್ಲಿ ಸಂಪೂರ್ಣ ಲಸಿಕಾಕರಣ ಮಾಡುವ ಗುರಿಯನ್ನು ಹೆಬ್ಬಾಳಕರ್ ಹಾಕಿಕೊಂಡಿದ್ದಾರೆ.
ಅಲ್ಲದೆ, ಕ್ಷೇತ್ರ ವ್ಯಾಪ್ತಿಯಲ್ಲಿ 2ನೇ ಡೋಸ್ ಕೂಡ ಶೇ. 26ಕ್ಕಿಂತ ಹೆಚ್ಚಾಗಿದ್ದು, 84 ದಿನ ಪೂರ್ಣವಾಗುತ್ತಿದ್ದಂತೆ ಎಲ್ಲರಿಗೂ 2ನೇ ಡೋಸ್ ಲಸಿಕೆ ನೀಡಲಾಗುತ್ತಿದೆ.
ಕ್ಷೇತ್ರದಲ್ಲಿ ನೂರಕ್ಕೆ ನೂರರಷ್ಟು ವ್ಯಾಕ್ಸಿನೇಶನ್ ಹಾಕಿಸುವ ಗುರಿ ಹಾಕಿಕೊಂಡು ದೊಡ್ಡ ಅಭಿಯಾನವನ್ನೇ ಹಮ್ಮಿಕೊಂಡಿರುವ ಲಕ್ಷ್ಮಿ ಹೆಬ್ಬಾಳಕರ್, ಇದಕ್ಕಾಗಿ ತಮ್ಮ ಕಾರ್ಯಕರ್ತರ ಪಡೆಯನ್ನೇ ರಚಿಸಿದ್ದಾರೆ. ತಾಲೂಕು ಆರೋಗ್ಯಾಧಿಕಾರಿ ಡಾ.ಮಾಸ್ತಿಹೊಳಿ ಅವರ ನೇತೃತ್ವದ ಆರೋಗ್ಯ ಇಲಾಖೆಯ ಸಿಬ್ಬಂದಿಯ ಸಹಕಾರ ಹಾಗೂ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ಬೇರೆಲ್ಲೂ ಆಗದಂತಹ ದೊಡ್ಡ ಸಾಧನೆಯನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ