
ಪ್ರಗತಿವಾಹಿನಿ ಸುದ್ದಿ: ಎರಡು ಹೆಣ್ಣು ಮಕ್ಕಳು ಹೆತ್ತಿದ್ದ ದಂಪತಿಗೆ ಮೂರುನೆ ಮಗು ಕೂಡಾ ಹೆಣ್ಣು ಮಗು ಆಗಿದ್ದಕ್ಕೆ ಬೇಸರಗೊಂಡ ಪತಿರಾಯ ಪ್ರೀತಿಸಿ ಮದುವೆಯಾದ ಹೆಂಡತಿಯನ್ನೇ ಬಿಟ್ಟು ಪರಾರಿಯಾಗಿದ್ದಾನೆ.
ಈ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಘಟನೆ ಸಂಬಂಧ ದೂರು ದಾಖಲಾಗಿದೆ. ಹರೀಶ್ ಎಂಬಾತ ಈಗ ತನ್ನ ಪ್ರೀತಿಯ ಪತ್ನಿಗೆ ಕೈಕೊಟ್ಟು ಎಸ್ಕೆಪ್ ಆಗಿದ್ದಾನೆ. ಈತ ರಾಜಸ್ಥಾನದವನಾಗಿದ್ದು, ಬೆಂಗಳೂರಲ್ಲಿ ಕೆಲಸ ಮಾಡಿಕೊಂಡಿದ್ದ. ಈ ಸಮಯದಲ್ಲಿ ವರಲಕ್ಷ್ಮೀ ಜತೆ ಪ್ರೇಮವಾಗಿದೆ. ನಂತರ ಎರಡೂ ಕುಟುಂಬದವರು ಒಪ್ಪಿ ಮದುವೆ ಮಾಡಿಸಿದ್ದಾರೆ.
ಘಟನೆ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ವರಲಕ್ಷ್ಮೀ, ನಮಗೆ ಮೂವರೂ ಹೆಣ್ಣು ಮಕ್ಕಳು ಎಂದು ಜರಿದು ನನ್ನನ್ನು ಬಿಟ್ಟು ಈಗ ಬೇರೆ ಯಾರೋ ಮಹಿಳೆ ಜತೆ ನನ್ನ ಗಂಡ ಜೀವನ ಮಾಡುತ್ತಿದ್ದಾನೆ. ನನಗೆ ಈಗ ಜೀವನ ತುಂಬಾ ಕಷ್ಟಕರವಾಗಿದೆ. ಮಕ್ಕಳನ್ನು ಓದಿಸಲು ಆಗುತ್ತಿಲ್ಲ, ಆರೈಕೆ ಸಹ ಮಾಡಲು ಆಗುತ್ತಿಲ್ಲ ಎಂದು ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ.
ವಿಷಯವೇನೆಂದರೆ ಈ ದೂರನ್ನು ಒಂದು ತಿಂಗಳ ಹಿಂದೆಯೇ ಈ ಮಹಿಳೆ ದಾಖಲು ಮಾಡಿದ್ದಾಳಂತೆ. ಆದರೆ ಈ ಬಗ್ಗೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ತಿಳಿದುಬಂದಿದೆ.


