Kannada NewsKarnataka NewsNational
*ಪ್ರಿಯಕರನ ಜೊತೆ ಪತ್ನಿಗೆ ಮದುವೆ ಮಾಡಿಸಿದ ಪತಿ* *ಪತ್ನಿಯ ಬಳಿ ಇಟ್ಟ ಏಕೈಕ ಬೇಡಿಕೆ ಏನು ಗೊತ್ತೇ?*

ಪ್ರಗತಿವಾಹಿನಿ ಸುದ್ದಿ: ಪತ್ನಿಯ ಅಕ್ರಮ ಸಂಬಂಧ ತಿಳಿದು ಅವಳ ಪ್ರಿಯಕರನೊಂದಿಗೆ ಆಕೆಗೆ ಪತಿಯೇ ಮುಂದೆ ನಿಂತು ಮದ್ಯೆ ಮಾಡಿಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಬಬಲೂ ಮತ್ತು ರಾಧಿಕಾ 2017ರಲ್ಲಿ ಮದುವೆಯಾಗಿ ಎರಡು ಮಕ್ಕಳನ್ನು ಹೊಂದಿದ್ದಾರೆ. ಬಬಲೂ, ಸಂಸಾರದ ಬಂಡಿ ಸಾಗಿಸಲು ಮನೆಯಿಂದ ದೂರ ಹೋಗಿ ದುಡಿಯುತ್ತಿರುವಾಗ ರಾಧಿಕಾಗೆ ಅದೇ ಊರಿನಲ್ಲಿ ಒಬ್ಬನ ಜೊತೆ ಪ್ರೇಮಾಂಕುರವಾಗಿ ಅವನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಾಳೆ.
ಇದನ್ನು ಬಗೆಹರಿಸಲು ಬಬಲೂ ಪತ್ನಿ ಮನವೊಲಿಸಲು ಪ್ರಯತ್ನಿಸಿ ಸೋತು ಕೊನೆಗೆ ಪತ್ನಿ ಪ್ರಿಯಕರನೊಂದಿಗೆ ವಿವಾಹ ಮಾಡಿಸಿದ್ದಾನೆ. ಇಷ್ಟೆಲ್ಲಾ ಮಾಡಿದ ಪತಿ ಕೊನೆಗೆ ಪತ್ನಿ ರಾಧಿಕಾಗೆ ನೀನು ಅವನನ್ನು ಮದುವೆಯಾಗಿದ್ದೀಯಾ, ಇಬ್ಬರೂ ಚೆನ್ನಾಗಿರಿ. ಆದ್ರೆ ನನ್ನ ಎರಡೂ ಮಕ್ಕಳನ್ನು ನನ್ನ ಬಳಿಯೇ ಬಿಡು. ಕಷ್ಟವೋ ಸುಖವೋ ಅವೆರಡನ್ನು ನಾನು ಸಾಕಿಕೊಳ್ಳುತ್ತೇನೆ. ಇದೊಂದೇ ನಾನು ನಿನ್ನಲ್ಲಿ ಬೇಡಿಕೊಳ್ಳುವ ಕೊನೆಯ ಬೇಡಿಕೆ ಎಂದು ಕೇಳಿಕೊಂಡಾಗ ಇದಕ್ಕೆ ರಾಧಿಕಾ ಒಪ್ಪಿ ತನ್ನ ಪ್ರಿಯಕರನೊಂದಿಗೆ ಮದುವೆಯಾಗಿದ್ದಾಳೆ.