Belagavi NewsBelgaum NewsKarnataka NewsLatest

*ಪ್ರಿಯತಮನ ಜೊತೆ ಸೇರಿ ಪತಿಯನ್ನೇ ಕೊಲೆಗೈದ ಪತ್ನಿ: ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆ ಮೂಡಲಗಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ವಡೇರಹಟ್ಟಿ ಗ್ರಾಮದ ಬನಸಿದ್ದೇಶ್ವರ ಗುಡಿಯ ಆವರಣದಲ್ಲಿ ಅಮವಾಸ್ಯೆ ದಿನದಂದು, ಪ್ರಿಯತಮನ ಜೊತೆ ಸೇರಿ ಗಂಡನನ್ನೆ ಕೊಲೆ ಮಾಡಿಸಿದ ಅಪರಾಧಕ್ಕಾಗಿ ಅಪರಾಧಿಗಳಿಗೆ ಗೋಕಾಕ್ 12ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ ಪ್ರಿಯಾಂಕಾ ಹಾಗೂ ಆಕೆಯ ಪ್ರಿಯಕರ ಶ್ರೀಧರ ತಳವಾರ ಇಬ್ಬರಿಗೂ ಕೋಕಾಕ್ ಕೋರ್ಟ್ ಕಠಿಣ ಜೀವಾವಧಿ ಶಿಕ್ಷೆ ಮತ್ತು 3 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

ಪ್ರಕರಣದ ಹಿನ್ನೆಲೆ: 21 ವರ್ಷದ ಪ್ರಿಯಾಂಕಾ ವಡೇರಟ್ಟಿ ಶಂಕರ ಜಗಮುತ್ತಿ (27) ಎಂಬಾತನನ್ನು ವಿವಾಹವಾಗಿದ್ದಳು. ಆದರೆ ಮದುವೆಗಿಂತ ಮೊದಲು ಶ್ರೀಧರ ತಳವಾರ ಬೈರನಹಟ್ಟಿ (21) ಈತನೊಂದಿಗೆ ಪ್ರೀತಿಸುತ್ತಿದ್ದಳು. ಇದೇ ಕಾರಣಕ್ಕಾಗಿಪ್ರಿಯಕರನೊಂದಿಗೆ ಸೇರಿ 2023, ಜುಲೈ 17ರಂದು ತನ್ನ ಗಂಡ ಶಂಕರನನ್ನು ಕೊಲೆ ಮಾಡಿಸಿದ್ದಳು.

2023ರ ರ ಜುಲೈ 17ರಂದು ಅಮವಾಸ್ಯೆ ದಿನದಂದು, ಮುಂಜಾನೆ 6 ಗಂಟೆಗೆ ಪ್ರಿಯಾಂಕಾ ತನ್ನ ಗಂಡನನ್ನು ಕರೆದುಕೊಂಡು ವಡೇರಹಟ್ಟಿ ಗ್ರಾಮದ ಶ್ರೀ ಬನಶಿದ್ದೇಶ್ವರ ದೇವಸ್ಥಾನಕ್ಕೆ ಹೋಗಿದ್ದುದ್ದಳು. ದೇವರ ದರ್ಶನ ಮುಗಿಸಿಕೊಂಡು ಹೋರಗೆ ಬಂದು, ಮರೆಯಲ್ಲಿ ನಿಂತಿದ್ದ ತನ್ನ ಪ್ರಿಯಕರ ಶ್ರೀಧರನಿಗೆ ಸನ್ನೆ ಮಾಡಿ, ತನ್ನ ಗಂಡನನ್ನು ಕೊಲ್ಲುವಂತೆ ಸೂಚಿಸಿದಾಳೆ. ಆತ ಓಡಿ ಬಂದು ಜಾಕೇಟಿನಲ್ಲಿದ್ದ ತಲವಾರವನ್ನು ಹೊರ ತಗೆದವನೆ, ಬೈಕ್ ಚಾಲು ಮಾಡುತ್ತಿದ್ದ ಪ್ರಿಯಾಂಕಾ ಪತಿ ಶಂಕರ ಜಗಮುತ್ತಿ ಕುತ್ತಿಗೆ ಮತ್ತು ತೆಲೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಹತ್ಯೆಗೈದು ಸ್ಥಳದಲ್ಲಿದ್ದವರಿಗೆ ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ. ಮೂಡಲಗಿ ಪೋಲಿಸ್ ಠಾಣೆಯಲ್ಲಿ ಪ್ರಕರನ ದಾಖಲಾಗಿತ್ತು.

ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೋಡ ಸಮಗ್ರ ತನಿಖೆ ನಡೆಸಿ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. 12ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ತಾರಕೇಶ್ವರಗೌಡ ಪಾಟೀಲ ಗೋಕಾಕ ರವರು ಅಭಿಯೋಜನೆ ಪರ ಹಾಜರುಪಡಿಸಿದ ಎಲ್ಲಾ ಸಾಕ್ಷಾಧಾರಗಳನ್ನು ಪರಿಗಣಿಸಿ, ಮೃತನ ಸಾವಿಗೆ ಆರೋಪಿಗಳೇ ಕಾರಣ ಎಂಬುದು ಸಾಭಿತ್ತಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ ಮತ್ತು ರೂ. 3 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಇದರಲ್ಲಿ 2.50.000 ರೂಪಾಯಿಗಳನ್ನು ಮೃತನ ಕುಟುಂಬಕ್ಕೆ ಪರಿಹಾರವಾಗಿ ನೀಡಲು ಆದೇಶಿಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button