Kannada NewsKarnataka NewsLatest

*ಪತ್ನಿಯ ಬೆರಳನ್ನೇ ಕಚ್ಚಿ ತಿಂದ ಪತಿಮಹಾಶಯ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪತಿ-ಪತ್ನಿ ನಡುವಿನ ಜಗಳ ವಿಕೋಪಕ್ಕೆ ತಿರುಗಿ ಪತಿ ಮಹಾಶಯನೊಬ್ಬ ತನ್ನ ಪತ್ನಿಯ ಬೆರಳನ್ನೇ ಕಚ್ಚಿ ತಿಂದಿರುವ ಭಯಂಕರ ಘಟನೆ ಬೆಂಗಳೂರಿನ ಕೋಣನಕುಂಟೆಯಲ್ಲಿ ನಡೆದಿದೆ.

ಪುಷ್ಪಾ ಎಂಬ ಮಹಿಳೆ ಪತಿಯ ಕಾಟಕ್ಕೆ ಬೇಸತ್ತು ಪತಿಯಿಂದ ದೂರವಾಗಿ ಮಗನೊಂದಿಗೆ ಬೇರೆ ಮನೆಯಲ್ಲಿ ವಾಸವಾಗಿದ್ದಳು. ಆದರೂ ಗಂಡನ ಕಾಟ ಮಾತ್ರ ತಪ್ಪಿರಲಿಲ್ಲ. ಮನೆಗೆ ಬಂದು ಪತಿ ಜಗಳವಾಡಿದ್ದಾನೆ. ಗಲಾಟೆ ನಡುವೆ ಪತ್ನಿಯ ಕೈಹಿಡಿದೆಳೆದು ಆಕೆಯ ಬೆರಳನ್ನೇ ಕಚ್ಚಿ ತಿಂದಿದ್ದಾನೆ. ಅಷ್ಟೇ ಅಲ್ಲ, ನಿನ್ನನ್ನೂ ಇದೇ ರಿತಿ ಕೊಂದು ತಿನ್ನುವುದಾಗಿ ಬೆದರಿಕೆ ಹಾಕಿದ್ದಾನಂತೆ ರಾಕ್ಷಸ ಪತಿ.

ಪುಷ್ಪಾ ಹಾಗೂ ವಿಜಯ್ ಕುಮಾರ್ ವಿವಾಹವಾಗಿ 23 ವರ್ಷಗಳು ಕಳೆದಿವೆ. ಮದುವೆಯಾದ ಕೆಲ ವರ್ಷಗಳಲ್ಲೇ ಪತಿ ವಿಜಯ್ ಕುಮಾರ್ ಪತ್ನಿಗೆ ಮಾನಸಿಕ ಕಿರುಕುಳ, ದೈಹಿಕ ಹಿಂಸೆ ನೀಡುತ್ತಿದ್ದನಂತೆ. ಪತಿಯ ಹಿಂಸೆ ತಾಳಲಾರದೇ ಪುಷ್ಪಾ ಮಗನೊಂದಿಗೆ ಬೇರೆ ಮನೆ ಮಾಡಿ ವಾಸವಾಗಿದ್ದರಂತೆ. ಆಗಾಗ ಪತ್ನಿ ಮನೆ ಬಳಿ ಹೋಗಿ ವಿಜಯ್ ಕುಮಾರ್ ಜಗಳವಾಡುತ್ತಿದ್ದನಂತೆ. ನಿನ್ನೆಯೂ ಇದೇ ರೀತಿ ಮಾಡಿದ್ದಾನೆ. ಜಗಳವಾಡುತ್ತಾ ಪತ್ನಿಯ ಬೆರಳನ್ನೇ ಕಚ್ಚಿ ತಿಂದಿದ್ದಾನೆ.

ಪತ್ನಿ ಪುಷ್ಪಾ ಪತಿಯ ವಿರುದ್ದ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ವಿಜಯ್ ಕುಮಾರ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

Related Articles

Back to top button