Kannada NewsNational

*ಸೆಕ್ಸ್ ಲೈವ್ ಸ್ಟ್ರೀಮ್ ಮಾಡುತ್ತಿದ್ದ ದಂಪತಿ ಅರೆಸ್ಟ್: ವಿಚಾರಣೆ ವೇಳೆ ಶಾಕಿಂಗ್ ವಿಚಾರ ಬಾಯ್ಬಿಟ್ಟ ಆರೋಪಿಗಳು*

ಪ್ರಗತಿವಾಹಿನಿ ಸುದ್ದಿ: ಸೆಕ್ಸ್ ಲೈವ್ ಸ್ಟ್ರೀಮ್ ಮಾಡುತ್ತಿದ್ದ ದಂಪತಿಯನ್ನು ಹೈದ್ರಾಬಾದ್ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ವಿಚಾರಣೆ ವೇಳೆ ದಂಪತಿಗಳು ಶಾಕಿಂಗ್ ಸುದ್ದಿ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.

ದಂಪತಿಗೆ ಇಬ್ಬರು ಹೆಣ್ಣುಮಕ್ಕಳು. ಮಕ್ಕಳಿಬ್ಬರೂ ಪ್ರತಿಭಾನ್ವಿತ ವಿದ್ಯಾರ್ಥಿಗಳು. ಪತಿ ಕ್ಯಾಬ್ ಡ್ರೈವರ್. ಪತ್ನಿ ಗೃಹಿಣಿ. ಆರ್ಥಿಕ ಸಂಕಷ್ಟದಿಂದಾಗಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುದು ಕಷ್ಟವಾಗುತ್ತಿತ್ತಾದರೂ ಮಕ್ಕಳನ್ನು ಓದಿಸಲೇಬೇಕು ಎಂಬ ಉದ್ದೇಶ ಅಲ್ಲದೇ ಪತಿಗೆ ಅನಾರೋಗ್ಯದ ಕಾರಣದಿಂದ ಚಿಕಿತ್ಸೆ ಪಡೆಯಲೂ ಹಣವಿರಲಿಲ್ಲ. ಸುಲಭವಾಗಿ ಹಣ ಮಾಡುವ ಉದ್ದೇಶಕ್ಕೆ ದಂಪತಿ 2000 ರೂಪಾಯಿಗೆ ಸೆಕ್ಸ್ ಲೈವ್ ಸ್ಟ್ರೀಮ್ ಮಾಡುತ್ತಿದ್ದರು ಎಂದು ವಿಚಾರಣೆ ವೇಳೆ ಹೇಳಿದ್ದಾರೆಂದು ವರದಿಯಾಗಿದೆ.

ಮಕ್ಕಳ ಕಾಲೇಜು ಶುಲ್ಕ ಪಾವತಿಸಲು ದಂಪತಿಗೆ ಕಷ್ಟವಾಗಿತ್ತಂತೆ. ಒಬ್ಬ ಮಗಳು ಬಿಟೆಕ್ ಓದುತ್ತಿದ್ದರೆ. ಮತ್ತೋರ್ವ ಮಗಳು ಇತ್ತೀಚೆಗೆ ನಡೆದ ಪರೀಕ್ಷೆಯಲ್ಲಿ 470ಕ್ಕೆ 468 ಅಂಕ ಗಳಿಸಿ ಕಾಲೇಜು ಪ್ರವೇಶಕ್ಕೆ ತಯಾರಿ ನಡೆಸಿದ್ದಳು. ಈ ನಡುವೆ ಚಾಲಕನಾಗಿದ್ದ ಪತಿ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯಲು ದುಡ್ದಿರಲಿಲ್ಲ. ಹೀಗಾಗಿ ಸುಲಭ ಹಣ ಗಳಿಸಲು ದಂಪತಿ ತಮ್ಮ ಲೈಂಗಿಕ ಕೃತ್ಯವನ್ನು ಲೈವ್ ಸ್ಟ್ರೀಮ್ ಮಾಡುತ್ತಿದ್ದರಂತೆ. ಇದಕ್ಕೆ 2000 ರೂ ಪಡೆಯುತ್ತಿದ್ದರೆ ರೆಕಾರ್ಡ್ ಮಾಡಿದ ಕ್ಲಿಪ್ ಗೆ 500 ರೂ ಪಡೆಯುತ್ತಿದ್ದರಂತೆ. ಪೋಷಕರ ಕೃತ್ಯದ ಬಗ್ಗೆ ಮಕ್ಕಳಿಗೆ ಯಾವುದೇ ಸುಳಿವೂ ಇರಲಿಲ್ಲ. ದಂಪತಿ ತಮ್ಮ ಗುರುತು ಮರೆಮಾಚಲು ಮಾಸ್ಕ್ ಧರಿಸಿ ಈ ಕೃತ್ಯ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

Home add -Advt

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಅಂಬರ್ ಪೇಟೆಯ ನಿವಾಸದಲ್ಲಿ ದಂಪತಿಯನ್ನು ಬಂಧಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 296 (ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲತೆ), ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 67(ಎ) ಅಡಿಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.


Related Articles

Back to top button