Belagavi NewsBelgaum NewsKannada NewsKarnataka NewsNationalPolitics

*ಗಾಂಜಾ ಮಾರುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ಬೆಳಗಾವಿ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದ ವಡಗಾಂವ -ಧಾಮನೆ ರೋಡ್ ಸಿದ್ದಾರೋಡ ಕಾಲನಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಳಗಾವಿಯ ಶಹಾಪುರ ಪೊಲೀಸರು ಬಂಧಿಸಿದ್ದಾರೆ. 

ಆರೋಪಿಗಳಾದ ಪ್ರಥಮೇಶ ಮಹೇಶ ಕಣಬರಕರ ಹಾಗೂ ಅನಿಕೇತ ಜ್ಞಾನೇಶ್ವರ ಪೋರೆ ಇವರನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಅಲ್ಲದೆ ಇಬ್ಬರೂ ಆರೋಪಿಗಳಿಂದ  50,550 ರೂ ಮೌಲ್ಯದ 1 ಕೆಜಿ 115 ಗ್ರಾಂ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ 50,000 ರೂ ಮೌಲ್ಯದ ಒಂದು ಬೈಕ್ ಜಪ್ತ ಮಾಡಾಲಾಗಿದೆ.

Home add -Advt

ಆರೋಪಿಗಳ ವಿರುದ್ಧ ಶಹಾಪುರ ಪೊಲೀಸ್ ಠಾಣೆಯಲ್ಲಿ 69/2025. ಕಲಂ120(b), (ii) (B) ಎನ್‌ಡಿಪಿಎಸ್ ಆ್ಯಕ್ಟ್ ನೇದ್ದರ ಪ್ರಕಾರ ಪ್ರಕರಣ ದಾಖಲಾಗಿಸಿಕೊಂಡು ಕಾನೂನು ಕ್ರಮ ಜರುಗಿಸಿ, ಪ್ರಕರಣದ ತನಿಖೆ ಮುಂದುವರೆಸಲಾಗಿದೆ. 

Related Articles

Back to top button