Kannada NewsLatestNational

*ಕುವೈತ್ ನಲ್ಲಿರುವ ತಾಯಿಗೆ ಮೆಸೇಜ್ ಕಳುಹಿಸಿ ಮನೆಯಲ್ಲಿ ಆತ್ಮಹತ್ಯೆಗೆ ಶರಣಾದ ಯೂಟ್ಯೂಬರ್*

ಪ್ರಗತಿವಾಹಿನಿ ಸುದ್ದಿ: 21 ವರ್ಷದ ಯೂಟ್ಯೂಬರ್ ಬೋನು ಕೋಮಲಿ ತನ್ನ ಮನೆಯಲ್ಲಿಯೇ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.

ಬಿಎಸ್ ಸಿ ಪದವಿಧರೆಯೂ ಆಗಿರುವ ಬೋನು ಕೋಮಲಿ, ಹೈದರಾಬಾದ್ ನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಸಾವಿಗೂ ಮುನ್ನ ಕುವೈತ್ ನಲ್ಲಿರುವ ತನ್ನ ತಾಯಿಗೆ ಐ ಲವ್ ಯು ಎಂದು ಸಂದೇಶ ರವಾನಿಸಿದ್ದಾಳೆ ಎಂದು ತಿಳಿದುಬಂದಿದೆ.

ಆಂಧ್ರಪ್ರದೇಶದ ವಿಶಾಖಪಟ್ಟಣಂ ನಿವಾಸಿಯಾಗಿರುವ ಕೋಮಲಿ ಹೈದರಾಬಾದ್ ನ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದಳು. ಹೀಗಾಗಿ ಕಳೆದ 11 ತಿಂಗಳಿಂದ ಅಪಾರ್ಟ್ ಮೆಂಟ್ ವೊಂದರಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಕಳೆದ ಕೆಲ ತಿಂಗಳಿಂದ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದಳು. ಶಿಕ್ಷಣದ ಜೊತೆಗೆ ಯೂಟ್ಯೂಬ್ ನಲ್ಲಿ ಲೈಫ್ ಸ್ಟೈಲ್ ಹಾಗೂ ವೈಯಕ್ತಿಕ ವಿಷಯಗಳ ಬಗ್ಗೆ ಕಂಟೆಂಟ್ ಕ್ರಿಯೇಟ್ ಮಾಡುತ್ತಿದ್ದಳು.

ಕೋಮಲಿ ಸಾವಿಗೂ ಮುನ್ನ ಕುವೈತ್ ನಲ್ಲಿರುವ ತನ್ನ ತಾಯಿ ಸತ್ಯಾ ವರಲಕ್ಷ್ಮೀಗೆ ಮೆಸೇಜ್ ಕಳುಹಿಸಿದ್ದಾಳೆ. ತನ್ನ ಕಿರಿಯ ಸಹೋದರನ್ನು ಚನ್ನಗಿ ನೋಡಿಕೊಳ್ಳುವಂತೆ ಹೇಳಿದ್ದಾಳೆ. ಮೆಸೇಜ್ ಕಳುಹಿಸಿದ ತಕ್ಷಣ ಫೋನ್ ಸ್ವಿಚ್ ಆಫ್ ಮಾಡಿದ್ದಾಳೆ. ತಾಯಿ ಎಷ್ಟೇ ಕರೆ ಮಾಡಿದರೂ ಫೋನ್ ಸಂಪರ್ಕಕ್ಕೆ ಸಿಕ್ಕಿಲ್ಲ. ತಾಯಿ ತನ್ನ ಸ್ನೇಹಿತರಿಗೆ ವಿಷಯ ತಿಳಿಸಿ ಮನೆ ಬಳಿ ಹೋಗಿ ನೋಡುವಂತೆ ಕೇಳಿದ್ದಾರೆ.

Home add -Advt

ಮಗಳು ವಾಸವಿರುವ ಮನೆಯ ಬಳಿ ಸ್ನೇಹತರು ಬಂದು ಬಾಗಿಲು ಬಡಿದರೆ ಮನೆಯಿಂದ ಯಾವುದೆ ಪ್ರತಿಕ್ರಿಯೆ ಬಂದಿಲ್ಲ. ಬಾಗಿಲು ಒಡೆದು ನೋಡಿದಾಗ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡಿರುವುದು ಪತ್ತೆಯಾಗಿದೆ. ದೀರ್ಘ ಕಾಲದಿಂದ ಆಕೆ ಮಾನಸಿಕವಾಗಿ ಹಿಂಸೆ ಅನುಭವಿಸಿದ್ದಳು ಎನ್ನಲಾಗಿದೆ.

ಕೆಲ ಮಾಹಿತಿ ಪ್ರಕಾರ ಕಮೋಲಿ ಈ ಹಿಂದೆ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಳು. ಸದ್ಯ ಅನುಮಾನಾಸ್ಪದ ಸಾವು ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Related Articles

Back to top button