ಪ್ರಗತಿವಾಹಿನಿ ಸುದ್ದಿ, ಮುಂಬೈ: ಕುಡಿತದ ಚಟದಿಂದ ಬಳಲುತ್ತಿರುವ ಬಗ್ಗೆ ನಟಿ ಪೂಜಾ ಭಟ್ “ನಾನು ಬಹಿರಂಗವಾಗಿ ಮದ್ಯಪಾನ ಮಾಡಿದ್ದೇನೆ, ಆದ್ದರಿಂದ ಕ್ಲೋಸೆಟ್‌ನಲ್ಲಿ ಏಕೆ ಚೇತರಿಸಿಕೊಳ್ಳಬೇಕು?” ಎಂದು ಪ್ರಶ್ನಿಸಿದ್ದಾರೆ.
ಬಿಗ್ ಬಾಸ್ OTT ಸೀಸನ್ 2ರಲ್ಲಿ ಈ ವಿಷಯ ಹಂಚಿಕೊಂಡಿರುವ ಅವರು, ಪೂಜಾ ಭಟ್ ಅವರು ತಮ್ಮ 44 ನೇ ವಯಸ್ಸಿನಲ್ಲಿ ಮದ್ಯಪಾನ ವ್ಯಸನದಿಂದ ಹೊರಬರುವ ತಮ್ಮ ಪ್ರಯತ್ನಗಳ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
“ಸಮಾಜವು ಪುರುಷರಿಗೆ ಪರವಾನಗಿ ನೀಡುತ್ತದೆ ಮತ್ತು ಹೀಗಾಗಿ ಅವರು ವ್ಯಸನ ಮತ್ತು ಮದ್ಯಪಾನದಿಂದ ಚೇತರಿಸಿಕೊಳ್ಳುವ ಬಗ್ಗೆ ಬಹಿರಂಗವಾಗಿ ಮಾತನಾಡಬಹುದು. ಆದರೆ ಮಹಿಳೆಯರು ಬಹಿರಂಗವಾಗಿ ಕುಡಿಯುವುದಿಲ್ಲ. ಆದ್ದರಿಂದ ಅವರು ಬಹಿರಂಗವಾಗಿ ಚೇತರಿಸಿಕೊಳ್ಳುವುದಿಲ್ಲ” ಎಂದು ಅವರು ಹೇಳಿದರು.
“ನನಗೆ ಕುಡಿತದ ಸಮಸ್ಯೆ ಇತ್ತು. ನಾನು ನನ್ನ ಚಟವನ್ನು ಒಪ್ಪಿಕೊಂಡಂತೆ ತ್ಯಜಿಸುವ ನಿರ್ಧಾರವನ್ನೂ ಮಾಡಿದೆ. ಜನರು ನನ್ನನ್ನು ಮದ್ಯವ್ಯಸನಿ ಎಂದು ಕರೆಯುತ್ತಿದ್ದರು ಆದರೆ ನಂತರ ನಾನು ಚೇತರಿಸಿಕೊಳ್ಳುತ್ತಿರುವ ಮದ್ಯವ್ಯಸನಿ” ಎಂದು ಅವರು ಹೇಳಿದರು.
ಪೂಜಾ ಈ ಹಿಂದೆ ಸಂದರ್ಶನವೊಂದರಲ್ಲೂ ತಮ್ಮ ಕುಡಿತದ ಚಟದ ಬಗ್ಗೆ ಹೇಳಿಕೊಂಡಿದ್ದರು. “ನಾನು ಕುಡಿದಾಗ ಯಥೇಚ್ಛವಾಗಿ ಕುಡಿದೆ. ಆಲ್ಕೋಹಾಲ್ ನಮ್ಮ ದೇಹದ ಮೇಲೆ ಭೀಕರವಾದ ಪರಿಣಾಮಗಳನ್ನು ಮಾಡುವುದಲ್ಲದೆ ನಮ್ಮ ಮನಸ್ಸನ್ನು ಅಸ್ತವ್ಯಸ್ತಗೊಳಿಸುತ್ತದೆ” ಎಂದು ಹೇಳಿಕೊಂಡಿದ್ದರು.
16ನೇ ವಯಸ್ಸಿನಲ್ಲಿ ಕುಡಿತ ಹಾಗೂ 23ನೇ ವಯಸ್ಸಿನಲ್ಲಿ ಸಿಗರೇಟ್ ಚಟಕ್ಕೆ ಒಳಗಾಗಿದ್ದ ಪೂಜಾ ಭಟ್ ತಮ್ಮ ವೈವಾಹಿಕ ಜೀವನ ಮುಗಿಸಿದಾಗ ತಮಗೆ ಸ್ನೇಹಿತನಂತೆ ಸಾಥ್ ನೀಡಿದ್ದು ಮದ್ಯ ಎಂದು ಹೇಳಿಕೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ