Kannada NewsKarnataka NewsLatestPoliticsUncategorized

*ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಖಡಕ್ ತಿರುಗೇಟು ನೀಡಿದ ಸಚಿವ ಎಂ.ಬಿ.ಪಾಟೀಲ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಚಿವ ಎಂ.ಬಿ.ಪಾಟೀಲ್ ಅವರ ಖಾತೆ ಚಿಲ್ಲರೆ ಖಾತೆ ಎಂದು ವ್ಯಂಗ್ಯವಾಡಿದ್ದ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಸಚಿವರು ತಿರುಗೇಟು ನೀಡಿದ್ದು, ಬೃಹತ್ ಕೈಗಾರಿಕಾ ಖಾತೆ ಚಿಲ್ಲರೆ ಖಾತೆಯೇ ಎಂದು ಪ್ರಧಾನಿ ಮೋದಿಯವರನ್ನು ಕೇಳಿ ಎಂದು ಟಾಂಗ್ ನೀಡಿದ್ದಾರೆ.

Home add -Advt

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್, ಪ್ರತಾಪ್ ಸಿಂಹ ಅವರ ಮನ:ಸ್ಥಿತಿ ನೋಡಿ ಪಾಪ ಅನಿಸುತ್ತದೆ. ನಾನು ಅಪ್ಪಿತಪ್ಪಿಯೂ ಬ್ರಾಹ್ಮಣ ಸಮುದಾಯಕ್ಕೆ ಬೈದಿಲ್ಲ. ಆದರೂ ಬ್ರಾಹ್ಮಣ ಸಮುದಾಯವನ್ನು ಯಾಕೆ ಬೈಯ್ಯುತ್ತೀರಿ ಎಂದು ಪ್ರಶ್ನಿಸಿದ್ದಾರೆ. 90% ಬ್ರಾಹ್ಮಣ ಸಮುದಾಯದವರು ನನ್ನನ್ನು ಬೆಂಬಲಿಸಿ ವೋಟ್ ಹಾಕಿದ್ದಾರೆ. ಬಿಎಲ್ ಡಿ ಸಂಸ್ಥೆಯ ರಿಜಿಸ್ಟ್ರಾರ್ ರಾಘವೇಂದ್ರ ಕುಲ್ಕರ್ಣಿ ಬ್ರಾಹ್ಮಣರು. ನಮ್ಮ ಸಂಸ್ಥೆಯ ಶಿಕ್ಷಕರು ಬ್ರಾಹ್ಮಣರೇ. ಸಂಸದ ಪ್ರತಾಪ್ ಸಿಂಹ ವಿಜಯಪುರಕ್ಕೆ ಭೇಟಿ ನೀಡಿ ಸ್ವಲ್ಪ ತಿಳಿದು ಮಾತನಾಡಲಿ ಎಂದು ಗುಡುಗಿದ್ದಾರೆ.

ನಾನು ಸಿದ್ದರಾಮಯ್ಯನವರ ಚೇಲಾ ಎಂದು ಹೇಳಿದ್ದಾರೆ. ನಾನು ಯಾರ ಚೇಲಾನೂ ಅಲ್ಲ, ಸಿದ್ದರಾಮಯ್ಯನವರಿಗಿಂತ ಮೊದಲೇ ನಾನು ಕಾಂಗ್ರೆಸ್ ನಲ್ಲಿದ್ದವನು. 6 ಬಾರಿ ಶಾಸಕ, ಒಂದು ಭಾರಿ ಸಂಸದನಾಗಿ ಕೆಲಸ ಮಾಡಿದ ಅನುಭವವಿದೆ. ಪ್ರತಾಪ್ ಸಿಂಹಗೆ ಚೇಲಾ ಕೆಲಸ ಮಾಡಿ ಅನುಭವವಿರಬೇಕು ಅದಕ್ಕೆ ಹೇಳುತ್ತಿದ್ದಾರೆ ಎಂದು ಛೇಡಿಸಿದರು.

ಪ್ರತಾಪ್ ಸಿಂಹ ಇಂತಹ ಮನಸ್ಥಿತಿ ಎಲ್ಲಿ ಕಲಿತಿದ್ದಾರೋ ಗೊತ್ತಿಲ್ಲ. ಅವರ ಸಂಸದ ಸ್ಥಾನದ ಅವಧಿ ಕೇವಲ ಹತ್ತು ತಿಂಗಳು ಇದೆ. ದಿನವೆಲ್ಲ ಅವರ ಪ್ರಶ್ನೆಗೆ ಉತ್ತರ ಕೊಡುತ್ತಿರಲು ಆಗಲ್ಲ ಎಂದು ಕಿಡಿಕಾರಿದ್ದಾರೆ.

Related Articles

Back to top button