Kannada NewsKarnataka NewsLatest
ಇಡೀ ಕ್ಷೇತ್ರ ನನ್ನ ಮನೆ ಎಂದು ಪರಿಗಣಿಸಿ ಕೆಲಸ ಮಾಡುತ್ತಿದ್ದೇನೆ – ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ - ಬೆಕ್ಕಿನಕೇರಿ ಗ್ರಾಮದ ಗವಳಿ ಗಲ್ಲಿಯಲ್ಲಿ ಸುಮಾರು ಏಳು ಲಕ್ಷ ರೂ.ಗಳ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯ ನಿರ್ಮಾಣದ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸೋಮವಾರ ಅಧಿಕೃತವಾಗಿ ಚಾಲನೆಯನ್ನು ನೀಡಿದರು.

ಕಾಮಗಾರಿಯ ಚಾಲನೆಯ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಯುವರಾಜ ಕದಂ, ನೂತನವಾಗಿ ಆಯ್ಕೆಗೊಂಡ ಗ್ರಾಮ ಪಂಚಾಯತ್ ಸದಸ್ಯರು, ಲಕ್ಷ್ಮೀ ಗವಡೆ, ಚಬ್ಬುಬಾಯ್ ಕಾಂಬಳೆ, ಮಲಪ್ರಭಾ, ಮಾರುತಿ, ಗಜಾನನ ಮೋರೆ, ಕಲ್ಲಪ್ಪ, ಜೈವಂತ ಸಾವಂತ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ