Kannada NewsKarnataka NewsLatest

ಕಿತ್ತೂರು ಕ್ಷೇತ್ರದ ಅಭಿವೃದ್ಧಿಗೆ 2400ಕೋಟಿ ರೂ. ಅನುದಾನ ತಂದಿದ್ದೇನೆ- ಶಾಸಕ ಮಹಾಂತೇಶ ದೊಡಗೌಡರ್

ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು : 2023ರ ವಿಧಾನಸಭಾ ಚುನಾವಣೆಯಲ್ಲಿ ಜನರು ನನ್ನ ಅಭಿವೃದ್ಧಿ ಕಾರ್ಯಗಳನ್ನು ಗುರುತಿಸಿ, ಕ್ಷೇತ್ರದ ಸೇವೆಗೆ ಮತ್ತೊಮ್ಮೆ ಆಶೀರ್ವದಿಸಿದರೆ, ಮನೆಯ ಮಗನಂತೆ ಸೇವೆ ಮಾಡುವೆ ಎಂದು ಕಿತ್ತೂರು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.
ಇಲ್ಲಿನ ರಂಭಾಪುರಿ ವೀರಸೋಮೇಶ್ವರ ಕಲ್ಯಾಣ ಮಂಟಪದ ಬಳಿಯ ರಾಷ್ಟ್ರಿಯ ಹೆದ್ದಾರಿ-4ರ ಪಕ್ಕದಲ್ಲಿ ಶುಕ್ರವಾರ ಮಹಾಂತೇಶ ದೊಡಗೌಡರ ಗೆಳೆಯರ, ಅಭಿಮಾನಿಗಳ ಮತ್ತು ಕಾರ್ಯಕರ್ತರ ಬಳಗದಿಂದ ತಮ್ಮ 49ನೇ ಹುಟ್ಟುಹಬ್ಬದ ಪ್ರಯುಕ್ತ ನಡೆದ ಹುಟ್ಟುಹಬ್ಬದ ಅಭಿನಂದನಾ ಸಮಾರಂಭ ಹಾಗೂ ಉಚಿತ ಆರೋಗ್ಯ ಮತ್ತು ಕಣ್ಣು ತಪಾಸಣಾ ಹಾಗೂ ರಕ್ತದಾನ ಶಿಬಿರದಲ್ಲಿ ಅವರು ಶ್ರೀಗಳ ಆಶೀರ್ವಾದ, ಜನರ ಶುಭಹಾರೈಕೆ ಸ್ವೀಕರಿಸಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಆರೋಗ್ಯ, ಶಿಕ್ಷಣ, ರಸ್ತೆ, ಧಾರ್ಮಿಕ, ನೀರಾವರಿ ಮೂಲಸೌಕರ್ಯಗಳ ಕೊರತೆ ನೀಗಿಸಲು ಶ್ರಮಿಸುತ್ತಿದ್ದೇನೆ. ಸುಮಾರು 2400ಕೋಟಿ ರೂ. ಅನುದಾನವನ್ನು ಕಿತ್ತೂರು ಕ್ಷೇತ್ರದ ಅಭಿವೃದ್ಧಿಗೆ ತಂದಿರುವೆ ಎಂದರು
ಇಂಚಲದ ಡಾ. ಶಿವಾನಂದ ಭಾರತಿ ಸ್ವಾಮೀಜಿ ಮಾತನಾಡಿ, ಶಾಸಕ ಮಹಾಂತೇಶ ದೊಡಗೌಡರ ಸರಳ ಸ್ವಭಾವದವರು. ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು.
ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಕ್ಷೇತ್ರದ ಸಮಗ್ರ ಅಭಿವೃದ್ಧಿ ಜೊತೆಗೆ ಸುಮಾರು 500ವರ್ಷಗಳ ನಂತರ ಐತಿಹಾಸಿಕ ರಾಣಿ ಚನ್ನಮ್ಮನ ಕೋಟೆ ಮರುನಿರ್ಮಾಣಕ್ಕೆ ಮುಂದಾಗಿರುವ ಶಾಸಕ ಮಹಾಂತೇಶ ದೊಡಗೌಡರ ಅವರು ಕಿತ್ತೂರಿನ ಹೆಮ್ಮೆ ಎಂದರು.
ನಾಗನೂರು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ, ಕಾದರವಳ್ಳಿಯ ಅದೃಶ್ಯಾನಂದಾಶ್ರಮ ಸೀಮೀಮಠದ ಡಾ.ಪಾಲಾಕ್ಷ ಶಿವಯೋಗೀಶ್ವರರು, ಶ್ರೀರಾಮ ಮಂದಿರದ ಗುರುಪುತ್ರ ಮಹಾರಾಜರು, ಅರಳಿಕಟ್ಟಿಯ ಶಿವಮೂರ್ತಿ ಸ್ವಾಮೀಜಿ, ಮುತ್ನಾಳದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ದೇವರಶೀಗೀಹಳ್ಳಿ ಮಡಿವಾಳೇಶ್ವರ ಮಠದ ವೀರೇಶ್ವರ ಸ್ವಾಮೀಜಿ, ಬೈಲಹೊಂಗಲದ ನೀಲಕಂಠ ಸ್ವಾಮೀಜಿ ಸೇರಿದಂತೆ ಕಿತ್ತೂರು ಬೈಲಹೊಂಗಲ ತಾಲೂಕಿನ ಸುಮಾರು 67 ಪೂಜ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ್ ಕೋರೆ, ಮಾಜಿ ಎಂಎಲ್ಸಿ ಮಹಾಂತೇಶ ಕವಟಗಿಮಠ, ಸಂಸದೆ ಮಂಗಲ ಅಂಗಡಿ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಶಾಸಕರಾದ ದುರ್ಯೋಧನ ಐಹೋಳೆ, ಮಹಾದೇವಪ್ಪ ಯಾದವಾಡ, ಮಹಾಂತೇಶ ಕೌಜಲಗಿ, ಅನೀಲ ಬೆನಕೆ, ಅಭಯ ಪಾಟೀಲ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಹನುಮಂತ ನಿರಾಣಿ, ಮಾಜಿ ಶಾಸಕ ಜಗದೀಶ ಮೆಟಗುಡ್, ಅರವಿಂದ ಪಾಟೀಲ, ಶಂಕರಗೌಡ ಪಾಟೀಲ, ಮಲ್ಲಿಕಾರ್ಜುನ ತುಬಾಕಿ, ಚಿನ್ನಪ್ಪ ಮುತ್ನಾಳ, ಚನ್ನಬಸಪ್ಪ ಮೊಕಾಶಿ, ಪ್ರಕಾಶ ಮೂಗಬಸವ, ಶ್ರೀಕರ ಕುಲಕರ್ಣಿ, ಉಳವಪ್ಪ ಉಳಾಗಡ್ಡಿ, ಶಾಸಕ ಮಹಾಂತೇಶ ದೊಡಗೌಡರ ತಾಯಿ ಗಂಗಮ್ಮ ಬ. ದೊಡಗೌಡರ, ಪತ್ನಿ ಮಂಜುಳಾ ಮ ದೊಡಗೌಡರ, ಸಹೋದರ ನಿಂಗನಗೌಡ ದೊಡಗೌಡರ ಹಾಗೂ ಕುಟುಂಬಸ್ಥರು, ಗೆಳೆಯರ ಮತ್ತು ಅಭಿಮಾನಿ ಬಳಗ, ಬಿಜೆಪಿ ಪಕ್ಷದ ಜಿಲ್ಲಾ ಮತ್ತು ಕಿತ್ತೂರು ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಜನಸಾಗರವೇ ಕಾರ್ಯಕ್ರಮಕ್ಕೆ ಹರಿದು ಬಂದಿತ್ತು.
ಶ್ರೀಕರ ಕುಲಕರ್ಣಿ ಸ್ವಾಗತಿಸಿದರು. ಈಶ್ವರ ಉಳ್ಳಾಗಡ್ಡಿ ಪರಿಚಯ ಮಾಡಿದರು. ವೇದಿಕೆಯಲ್ಲಿ ಪದ್ಮಶ್ರೀ ಪಂ. ಬಾಳೇಶ ಭಜಂತ್ರಿ ಸೇರಿದಂತೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ವಿವಿಧ ಪಿಂಚಣಿ ಪ್ರಮಾಣ ಪತ್ರ, ಉಜ್ವಲ್ ಗ್ಯಾಸ್ ವಿತರಣೆ, ಭಾಗ್ಯಲಕ್ಷ್ಮೀ ಭಾಂಡ್ ಮತ್ತು ಸುಕನ್ಯಾ ಸಮೃದ್ಧಿ ಯೋಜನೆ ಸೇರಿ ಸರ್ಕಾರದ ವಿವಿಧ ಪ್ರಮಾಣ ಪತ್ರಗಳನ್ನು ಇದೇ ವೇಳೆ ಪಲಾನುಭವಿಗಳಿಗೆ ವಿತರಿಸಲಾಯಿತು.

 

ಉಚಿತ ಆರೋಗ್ಯ ಮತ್ತು ಕಣ್ಣು ತಪಾಸಣಾ ಹಾಗೂ ರಕ್ತದಾನ ಶಿಬಿರದಲ್ಲಿ 10ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡು ಶಿಬಿರದ ಸದುಪಯೋಗಪಡೆದುಕೊಂಡರು.
150ಕ್ಕೂ ಅಧಿಕ ನುರಿತ ತಜ್ಞವೈದ್ಯರು ಶಿಬಿರದಲ್ಲಿ ಪಾಲ್ಗೊಂಡಿದ್ದ ಜನರ ಸಮಸ್ಯೆಗಳನ್ನು ಆಲಿಸಿ, ಚಿಕಿತ್ಸೆ ನೀಡುವ ಮೂಲಕ ಮಾತ್ರೆ ವಿತರಿಸಿದರು. ಸಲಹೆ-ಸೂಚನೆ ನೀಡಿದರು. ಸುಮಾರು 220ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.

 

ದೇಹದಾನ:
ಡಾ. ಮಹಾಂತೇಶ ರಾಮಣ್ಣವರ ಅವರ ಸಮ್ಮುಖದಲ್ಲಿ ಬೈಲಹೊಂಗಲದ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಇವರ ಮೂಲಕ  ಕೆಎಲ್‍ಇ ಡಾ. ಪ್ರಭಾಕರ್ ಕೋರೆ ಆಸ್ಫತ್ರೆಯ ನೇತ್ರ ಹಾಗೂ ಚರ್ಮ ಭಂಡಾರ, ದೇಹದಾನ ಜವಾಹರಲಾಲ್ ನೆಹರೂ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಆರೋಗ್ಯ ಶಿಬಿರದಲ್ಲಿ 10ಜನ ದೇಹದಾನ, 27ಜನ ನೇತ್ರದಾನ, 10ಜನ ಚರ್ಮದಾನ ಹಾಗೂ 10 ಜನ ಅಂಗಾಂಗ ದಾನ ಮಾಡಿ ಮಾದರಿಯಾದರು.
7ಸಾವಿರ ಆಯುಷ್ಮಾನ ಕಾರ್ಡ್ ವಿತರಣೆ:
ಆರೋಗ್ಯ ಶಿಬಿರದ ಜೊತೆಗೆ ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವದ ಯೋಜನೆಯಾದ ಆಯುಷ್ಮಾನ ಭಾರತ ಆರೋಗ್ಯ ಕಾರ್ಡ್ ವಿತರಿಸಲಾಯಿತು. ಸುಮಾರು 7ಸಾವಿರ ಜನರಿಗೆ ಸ್ಥಳದಲ್ಲೇ ಆಯುಷ್ಮಾನ ಭಾರತ ಆರೋಗ್ಯ ಕಾರ್ಡ್ ವಿತರಿಸಲಾಯಿತು.

ಜನರ ಮಧ್ಯೆ ಬೆಳೆದ ಜನಸಾಮಾನ್ಯರ ಶಾಸಕ ಮಹಾಂತೇಶ ದೊಡ್ಡಗೌಡರ್

https://pragati.taskdun.com/%e0%b2%b0%e0%b2%be%e0%b2%9c%e0%b3%8d%e0%b2%af/mahantesh-doddagoudar-is-a-common-mans-mla-who-grew-up-among-the-people/

https://pragati.taskdun.com/karnataka-news/the-silent-worker-mahantesha-dodgowder/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button