*ಸಿಎಂ ಹಾಗೂ ಸಂಪುಟ ವಿಚಾರ ನಾನು ಮಾತನಾಡಲ್ಲ: ಗೃಹ ಸಚಿವ ಪರಮೇಶ್ವರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಜಯಪುರ ಹಾಗೂ ಬೆಳಗಾವಿ ಪ್ರವಾಸ ಕೈಗೊಂಡ ಗೃಹ ಸಚಿವ ಪರಮೇಶ್ವರ ಅವರು, ರಾಜ್ಯ ರಾಜಕಾರಣದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಇಂದು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಿಶೇಷವಾಗಿ ಮುಖ್ಯಮಂತ್ರಿ ವಿಚಾರ, ಸಂಪುಟ ವಿಸ್ತರಣೆಯ ಬಗ್ಗೆ ಸಾಕಷ್ಟು ಮಾತನಾಡಿದ್ದೇನೆ. ಈಗ ನಾನೇನು ಮಾತನಾಡುವುದಿಲ್ಲ ಎಂದಿದ್ದಾರೆ
ಬೆಳಗಾವಿಯಲ್ಲಿ ಡಿ.8 ರಂದು ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಹೆಚ್ಚು ಪ್ರತಿಭಟನೆಗಳು ಆಗುತ್ತದೆ. ಅವರಿಗೆ ಆ ಬಗ್ಗೆ ಮುಂಜಾಗ್ರತಾ ಕ್ರಮ ಹಾಗೂ ಯಾವ ರೀತಿ ಅವಕಾಶ ಮಾಡಿಕೊಡಬೇಕು ಎಂದು ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸುವೆ ಎಂದರು.
ಪ್ರತಿಭಟನೆ ನಡೆಯುವಾಗ ಯಾವುದೇ ಕಾನೂನು ದೃಷ್ಟಿಯಿಂದ ತೊಂದರೆಯಾದರೆ ಯಾವ ರೀತಿ ನಿಭಾಯಿಸಿಕೊಂಡು ಹೋಗಬೇಕು ಎಂದು ಅಧಿಕಾರಿಗಳ ಜೊತೆಗೆ ಪರಿಶೀಲನೆ ನಡೆಸುವೆ ಎಂದರು.
ರಾಜ್ಯದಲ್ಲಿ ಪರಮೇಶ್ವರ ದಲಿತ ಸಿಎಂ ಆಗುತ್ತಾರೆ ಎಂಬ ಮಾಧ್ಯಮಗಳ ಪ್ರಶ್ನಗೆ, ಥ್ಯಾಂಕ್ಯೂ ಎಂದು ಹೇಳಿದ ಅವರು, ವಿಜಯಪುರ ಜಿಲ್ಲೆಗೆ ತೆರಳಿದರು.



