Kannada NewsKarnataka News

ಸಂಕಷ್ಟದ ಮಧ್ಯೆಯೂ ಕೊಟ್ಟ ವಚನ ಈಡೇರಿಸಿದ್ದೇನೆ, ಮತ್ತೊಮ್ಮೆ ಆಶಿರ್ವದಿಸಿ – ಲಕ್ಷ್ಮೀ ಹೆಬ್ಬಾಳಕರ್ ವಿನಂತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ​5 ವರ್ಷಗಳ ಹಿಂದೆ  ​ನಿ​​ಮ್ಮ ಮನೆ ಬಾಗಿಲಿಗೆ ಬಂದು, “ನನ್ನನ್ನು ಒಮ್ಮೆ ಆಯ್ಕೆ ಮಾಡಿ ಕಳುಹಿಸಿಕೊಡಿ, 25 ವರ್ಷಗಳ ಅಭಿವೃದ್ಧಿಯನ್ನು 5 ವರ್ಷದಲ್ಲಿ ಮಾಡಿ ನಿಮ್ಮ ಋಣವನ್ನು ತೀರಿಸುತ್ತೇನೆ” ಎಂದು ವಚನ ಕೊಟ್ಟಿ​ದ್ದೆ​. ಕಳೆದ 5 ವರ್ಷಗಳಲ್ಲಿ ಕೊರೋನಾ, ಪ್ರವಾಹದಂತಹ ಪ್ರಕೃತಿ ವಿಕೋಪದ ನಡುವೆಯೂ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡುವ ಮೂಲಕ ಕೊಟ್ಟ ವಚನವನ್ನು ​ಈಡೇರಿಸಿದ್ದೇನೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಸುಳೇಭಾವಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಅಳವಡಿಸಲಾದ ಫೇವರ್ಸ್ ನ್ನು ಶುಕ್ರವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.

 ಗ್ರಾಮೀಣ ವಿಧಾನಸಭಾ ಕ್ಷೇತ್ರದ ಸ್ವಾಭಿಮಾನವನ್ನು ಎತ್ತಿ ಹಿಡಿದು, ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಿದ್ದೇನೆ. ವಿರೋಧ ಪಕ್ಷದಲ್ಲಿದ್ದರೂ ಆಡಳಿತ ಪಕ್ಷದ ಶಾಸಕರೂ ಮಾಡಲಾಗದಷ್ಟು ಕೆಲಸಗಳನ್ನು ಅವರು ಶಕ್ತಿ ಮೀರಿ ಮಾಡಿದ್ದೇನೆ. ಸರಕಾರದ ಅನುದಾನವಲ್ಲದೆ ಸ್ವಂತ ಹಣವನ್ನೂ ನೀಡಿ ಬಡವರ ಕಣ್ಣೀರು ಒರೆಸಿದ್ದೇನೆ. ನನ್ನ ಸ್ವಂತ ಅನಾರೋಗ್ಯವನ್ನೂ ಲೆಕ್ಕಿಸದೆ, ವಿಶ್ರಾಂತಿಯನ್ನೂ ತೆಗೆದುಕೊಳ್ಳದೆ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದೇನೆ. ನನ್ನ ಜೊತೆಗೆ ನೀವೆಲ್ಲ ಕೈ ಜೋಡಿಸಿ ಸಹಕರಿಸಿದ್ದೀರಿ. ನಿಮ್ಮ ಮನೆ ಮಗಳೆಂದು ಕೈ ಹಿಡಿದು ವಿಕಾಸದ ಹಾದಿಯಲ್ಲಿ ಮುನ್ನಡೆಸಿದ್ದೀರಿ. ನಿಮ್ಮ ಸಹಕಾರ, ಪ್ರೀತಿ, ವಿಶ್ವಾಸವಿಲ್ಲದಿದ್ದರೆ ಇವೆಲ್ಲ ಸಾಧ್ಯವಾಗುತ್ತಿರಲಿಲ್ಲ ಎಂದು ಭಾವುಕರಾಗಿ ಅವರು ನುಡಿದರು.

ಕಳೆದ 5 ವರ್ಷದ ಅವಧಿಯಲ್ಲಿ ​ನಾನು ಎದುರಿಸಿದ ಸಂಕಷ್ಟಗಳು ಅಷ್ಟಿಷ್ಟಲ್ಲ. ಕೊರೋನಾ ಮಹಾಮಾರಿ ​ನಮ್ಮ​ ಇಡೀ ಕುಟುಂಬಕ್ಕೆ ಬಂದಿತ್ತು. ಆದರೆ ​ನಮ್ಮ ಕಷ್ಟದ ಮಧ್ಯೆಯೂ ಒಂದು ದಿನವೂ ಜನರನ್ನು ಮರೆಯದೆ, ​ನಾವು​ ಆಸ್ಪತ್ರೆಯಲ್ಲಿದ್ದರೂ ​ನಮಮ್​ ತಂಡದ ಮೂಲಕ ​ನಿ​​ಮಗೆಲ್ಲ​ ಸಾಧ್ಯವಾದಷ್ಟು​ ಸಹಾಯ ಮಾಡಿ​ದ್ದೇನೆ​. ಆಹಾರದ ಕಿಟ್ ಗಳನ್ನು ವಿತರಿ​ಸುವ ವ್ಯವಸ್ಥೆ ಮಾಡಿದ್ದೇನೆ​. ಮನೆ ಮನೆಗೆ ಔಷಧದ ಕಿಟ್ ಗಳನ್ನು ತಲುಪಿಸಿ​ದ್ದೇನೆ. ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ​ದ್ದೇನೆ​. ಅಂಬುಲನ್ಸ್ ವ್ಯವಸ್ಥೆ ಮಾಡಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿ​ಸುವ ವ್ಯವಸ್ಥೆ ಮಾಡಿದ್ದೇನೆ​. ಆಸ್ಪತ್ರೆಯಲ್ಲಿ ಸರಿಯಾದ ರೀತಿಯಲ್ಲಿ ಚಿಕಿತ್ಸೆ ಸಿಗುವಂತೆ ವ್ಯವಸ್ಥೆ ಮಾಡಿಸಿ​ದ್ದೇನೆ. ಕೊರೋನಾ ಸಂದರ್ಭದಲ್ಲಿ ದುರದೃಷ್ಟವಶಾತ್ ಸಾವಿಗೀಡಾದವರ ಕುಟುಂಬದ ​ನೆರವಿಗೆ ಬಂದಿದ್ದೇನೆ. ಪ್ರವಾಹದ ಸಂದರ್ಭದಲ್ಲಿ ಮನೆ ಕಳೆದುಕೊಂಡವರ ನೆರವಿಗೆ ನಿಂತಿ​ದ್ದೇನೆ​. ಹಾಗಾಗಿ ಮತ್ತೊಮ್ಮೆ ನನಗೆ ಮತ ನೀಡುವ ಮೂಲಕ ರಾಜ್ಯದಲ್ಲೇ ಅತ್ಯಂತ ಹೆಚ್ಚು ಮತಗಳ ಅಂತರದಿಂದ ಆಯ್ಕೆಯಾಗುವಂತೆ ಮಾಡಿ ಎಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ವಿಧಾನ ಪರಿಷತ್ ಸದಸ್ಯ​ ಚನ್ನರಾಜ ಹಟ್ಟಿಹೊಳಿ​, ದೇವಸ್ಥಾನದ ಟ್ರಸ್ಟ್ ಕಮೀಟಿಯವರು, ಮಹೇಶ ಸುಗಣೆನ್ನವರ, ಲಕ್ಷ್ಮಣ ಮಂಡು, ಶಂಕರಗೌಡ ಪಾಟೀಲ, ಬಸನಗೌಡ ಹುಂಕ್ರಿಪಾಟೀಲ, ದತ್ತಾ ಬಂಡಿಗಣಿ, ಸಂಭಾಜಿ ಯಮೋಜಿ, ತುಳಜಪ್ಪ ಯರಜರ್ವಿ, ಫಕೀರ ಕೋಲಕಾರ, ಲಕ್ಷ್ಮೀ ನಾರಾಯಣ ಕಲ್ಲೂರ, ತಿಪ್ಪಣ್ಣ ಲೋಕರೆ ಮುಂತಾದವರು ಉಪಸ್ಥಿತರಿದ್ದರು.

https://pragati.taskdun.com/karnaataka-vidhanasabha-electioncongress-candidate1st-list/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button