Kannada NewsKarnataka News

ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ ಬಂದು ಗಡಿ ಕ್ಯಾತೆ ತೆಗೆದರೆ ಕ್ರಾಂತಿ – ಕರವೇಯಿಂದ ಮಸಿ ಬಳಿಯುವ ಎಚ್ಚರಿಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ ಬಂದು ಗಡಿ ಕ್ಯಾತೆ ತೆಗೆದರೆ ಅವರಿಗೆ ಮಸಿ ಬಳಿಯುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಆರ್ ಅಭಿಲಾಷ್ ಎಚ್ಚರಿಸಿದ್ದಾರೆ

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರು ಇಲ್ಲಿ ಬಂದು ಅಭಿವೃದ್ಧಿ ವಿಷಯ ಮಾತನಾಡಿದರೆ ಅವರಿಗೆ ಕುಂದಾ ಕಳಿಸುತ್ತೇವೆ. ಅದನ್ನು ಬಿಟ್ಟು ಗಡಿ ವಿಚಾರ ಮಾತನಾಡಿದರೆ ರಾಜ್ಯಾದ್ಯಂತ ಕ್ರಾಂತಿಯಾಗಲಿದೆ ಎಂದು ಎಚ್ಚರಿಸಿದರು.

ರಾಜ್ಯಾಧ್ಯಕ್ಷ ಪ್ರವೀಣ ಶೆಟ್ಟಿ ಕೂಡ ಅಂದು ಬೆಳಗಾವಿಗೆ ಆಗಮಿಸಲಿದ್ದಾರೆ. ಮಹಾರಾಷ್ಟ್ರ ಸಚಿವರು ಕರ್ನಾಟಕದ ಮುಖ್ಯಮಂತ್ರಿಗಳ ಮನವಿಯನ್ನು ಮನ್ನಿಸಿ ಬೆಳಗಾವಿಗೆ ಬರುವದನ್ನು ಕೈ ಬಿಟ್ಟರೆ ಒಳ್ಳೆಯದು. ಇಲ್ಲವಾದಲ್ಲಿ ದೊಡ್ಡ ಕ್ರಾಂತಿಯಾಗಲಿದೆ. ನಾವು ಅವರಿಗೆ ಮಸಿ ಬಳಿಯುತ್ತೇವೆ ಎಂದು ಅವರು ಹೇಳಿದರು.

Home add -Advt

 

ಕನ್ನಡದ ಕೀರ್ತಿಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದ ಪುಟ್ಟಣ್ಣ ಕಣಗಾಲ್: ನಾಡೋಜ. ಡಾ.ಮಹೇಶ ಜೋಶಿ ಬಣ್ಣನೆ

https://pragati.taskdun.com/puttanna-kanagaljanuma-janumada-anubandhadr-mahesh-joshishreenath/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button