Belagavi NewsBelgaum NewsPolitics

*ಬೇರೆ ರಾಜ್ಯದಲ್ಲಿ ಚುನಾವಣೆಯಾದರೆ ಎಟಿಎಂ ಕೆಲಸ ಇಲ್ಲಿರುವ ಸರ್ಕಾರ ಮಾಡುತ್ತೆ: ಸಂಜಯ್ ಪಾಟೀಲ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೇರೆ ರಾಜ್ಯದಲ್ಲಿ ಚುನಾವಣೆಯಾದರೆ ಎಟಿಎಂ ಕೆಲಸ ಇಲ್ಲಿರುವ ಸರ್ಕಾರ ಮಾಡುತ್ತೆ‌. ತೆಲಂಗಾಣದಲ್ಲಿ ಚುನಾವಣೆ ನಡೆಯಬೇಕಾದರೆ ಇಲ್ಲಿಂದ ದುಡ್ಡು ಅಲ್ಲಿಗೆ ಹೋಗಿತ್ತು ಎಂದು ಮಾಜಿ ಶಾಸಕ ಸಂಜಯ್ ಪಾಟೀಲ್ ಅವರು ಆರೋಪಿಸಿಸಿದ್ದಾರೆ.‌

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗ್ಯಾರಂಟಿ ಹೆಸರಿನಲ್ಲಿ ನಮ್ಮ ರಾಜ್ಯದ ಜನರಿಗೆ ದ್ರೋಹ ಮಾಡುವ ಕೆಲಸ ಮಾಡುತ್ತಿದ್ದಾರೆ. ಈ ಕಾಂಗ್ರೆಸ್ ಸರ್ಕಾರ ಬಂದು ಎರಡು ವರ್ಷ ಆಗಿದೆ. ಎರಡು ವರ್ಷದಲ್ಲಿ ಈ ಸರ್ಕಾರ ಮುಡಾ ಹಗರಣ, ವಾಲ್ಮೀಕಿ ಹಗರಣ, ದಲಿತ ಹಣ ದುರುಪಯೋಗ ಮಾಡಿರುವ ಹಗರಣ ಆಗಿದೆ. ಇವರ ಅವಧಿಯಲ್ಲಿ ಎಷ್ಟು ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳು ಇದ್ದಾವೆ ಎಂದು ಆರೋಪಿಸಿದರು.

Home add -Advt

ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಿಗೆಟ್ಟು ಹೋಗಿದೆ. ಇಷ್ಟೆಲ್ಲ ಆಗಿದ್ರುನೂ ಸಿದ್ದರಾಮಯ್ಯ ಅವರು ಸಾಧನಾ ಸಮಾವೇಶ ಮಾಡಿದ್ದಾರೆ. ನಾವು ಯಾವ ತರಹ ಸಾಧನಾ ಸಮಾವೇಶ ಮಾಡುತ್ತಿದ್ದೇವೆ ಎಂದು ನಾಚಿಕೆ ಬಿಟ್ಟು ನಮ್ಮ ಮುಂದೆ ಅವರು ತೊರಿಸುತ್ತಿದ್ದಾರೆ. ಆದರೆ ಇದಕ್ಕೆಲ್ಲ ಬಿಜೆಪಿ ಪಕ್ಷದ  ವತಿಯಿಂದ ಹೋರಾಟ ಮಾಡುವ ಮೂಲಕ ಪ್ರಶ್ನೆ ಮಾಡಿದ್ದೇವೆ. ಆದರೆ ಈ ಸರ್ಕಾರ ಮೊಂಡು ಸರ್ಕಾರ ಇದೆ. ಎಷ್ಟೋ ಹೋರಾಟ ಮಾಡಿದರು ಐದು ವರ್ಷ ಹೇಗೆ ಆಡಳಿತ ನಡೆಸಬೇಕು ಎಂಬುದನ್ನು ಮಾತ್ರ ಚಿಂತೆ ಮಾಡುತ್ತಿದೆ ಎಂದರು.

Related Articles

Back to top button