Belagavi NewsBelgaum NewsKannada NewsKarnataka News
ಅಕ್ರಮ ಗೋವುಗಳ ಸಾಗಾಟ ಪ್ರಕರಣ: ಬೆಳಗಾವಿಯಲ್ಲಿ 7 ಜನರ ಮೇಲೆ ಕೆಸ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಎರಡು ದಿನಗಳ ಹಿಂದೆ ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂದೆ ಅಕ್ರಮ ಗೋವುಗಳ ಸಾಗಾಟ ಮಾಡುವ ವೇಳೆ ಹಿಂದು ಕಾರ್ಯಕರ್ತರು ದಾಳಿ ಮಾಡಿ, ಲಾರಿ ಚಾಲಕ ಹಾಗೂ ಕ್ಲೀನರ್ ಮೇಲೆ ಹಲ್ಲೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನರ ಮೇಲೆ ದೂರು ದಾಖಲಾಗಿದೆ.
ಭಾನುವಾರ ರಾತ್ರಿ ಭಜರಂಗದಳ ಹಾಗೂ ಶ್ರೀರಾಮಸೇನೆ ಹಿಂದೂಸ್ತಾನ್ ಸಂಘಟನೆಗಳ ಕಾರ್ಯಕರ್ತರು, ಚಾಲಕನನ್ನು ಮನಬಂದಂತೆ ಥಳಿಸಿದ್ದರು. ಲಾರಿ ಮೇಲೆ ಕಲ್ಲು ತೂರಿದ್ದರು. ಪ್ರಕರಣ ಕುರಿತು ಹಿರೇಬಾಗೇವಾಡಿ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ಗೋವು ಸಾಗಣೆ ಸಂಬಂಧ ಕೇಸ್ ಹಾಕಿ, ಇಬ್ಬರು ಆರೋಪಿಗಳನ್ನು ಪತ್ತೆ ಮಾಡಿದ್ದೇವೆ. ಕಲ್ಲು ತೂರಾಟ, ದೊಂಬಿಗೆ ಸಂಬಂಧಿಸಿದಂತೆ ಸಂಘಟನೆಗಳ ಏಳು ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ತಿಳಿಸಿದ್ದಾರೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ