Kannada NewsLatest

*ಫಿಷ್ ಕಂಟೇನರ್ ವಾಹನದಲ್ಲಿ ಅಕ್ರಮ ಗೋವಾ ಮದ್ಯ ಮಾರಾಟ; ಬೆಳಗಾವಿಯಲ್ಲಿ ಆರೋಪಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿವಿಧ ರಿತಿಯ ಗೋವಾ ಮದ್ಯವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪಿಯನ್ನು ಬೆಳಗಾವಿ ಅಬಕಾರಿ ವಿಭಾಗದ ಪೊಲಿಸರು ಬಂಧಿಸಿದ್ದಾರೆ.

ಬೆಳಗಾವಿ ಶಹರದ ಚೆನ್ನಮ್ಮ ಸರ್ಕಲ್ ಹತ್ತಿರ ರಸ್ತೆಗಾವಲು ಮಾಡುತ್ತಿರುವಾಗ ಒಂದು ನೀಲಿ ಬಣ್ಣದ ಫಿಷ್ ಕಂಟೇನರ್ ಆರು ಚಕ್ರ ವಾಹನವನ್ನು ತಪಾಸಣೆ ಮಾಡಿದಾಗ ವಾಹನದಲ್ಲಿ ಮೀನುಗಳನ್ನು ತುಂಬುವ 8 ಖಾಲಿ ಕಂಟೇನರಗಳಿಂದ ಮರೆಮಾಚಿ ಗೋವಾ ರಾಜ್ಯದಲ್ಲಿ ಮಾರಾಟಕ್ಕೆಂದು ನಮೂದಿರುವ ವಿವಿಧ ನಮೂನೆಯ ಒಟ್ಟು 549 ಲೀಟರ ಗೋವಾ ಮದ್ಯವನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವಾಗ ಪತ್ತೆಯಾಗಿದೆ. ಅಕ್ರಮವಾಗಿ ಮದ್ಯಮಾರಾಟ ಮಾಡುತ್ತಿದ್ದ ಆರೋಪಿಯೋರ್ವನನ್ನು ಬಂಧಿಸಿ ಮದ್ಯವನ್ನು ಸೀಜ್ ಮಾಡಲಾಗಿದೆ.

ಬಂಧಿತ ಆರೋಪಿಯನ್ನು ಸನ್ನಿ ಶ್ರೀಪಾದ ಕೊರಗಾಂವಕರ(28) ಎಂದು ಗುರುತಿಸಲಾಗಿದ್ದು, ಆರೋಪಿ ಸೌಥ್ ಗೋವಾದ ಗಾಂವಕರವಾಡಾದವನೆಂದು ತಿಳಿದುಬಂದಿದೆ. ದಾಳಿಯಲ್ಲಿ 12,00,000 ರೂ ವಾಹನ ಹಾಗೂ 2,57,240 ರೂ ಮೌಲ್ಯದ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಪಿಷ್ ಕಂಟೇನರ್ ಆರು ಚಕ್ರ ವಾಹನದ ಮಾಲೀಕನ ಪತ್ತೆಗಾಗಿ ಶೋಧ ನಡೆಸಲಾಗುತಿದೆ.

ಕಾರ್ಯಾಚರಣೆಯನ್ನು ಡಾ:ವೈ ಮಂಜುನಾಥ ಅಬಕಾರಿ ಅಪರ ಆಯುಕ್ತರು ಕೇಂದ್ರ ಸ್ಥಾನ ಬೆಳಗಾವಿ, ಫೀರೋಜಖಾನ ಕಿಲ್ಲೇದಾರ ಅಬಕಾರಿ ಜಂಟಿ ಆಯುಕ್ತರು, (ಜಾ&ತ) ಬೆಳಗಾವಿ ವಿಭಾಗ, ಬೆಳಗಾವಿ, ಜಯರಾಮೇಗೌಡ, ಅಬಕಾರಿ ಉಪ ಆಯುಕ್ತರು, ಬೆಳಗಾವಿ (ದಕ್ಷಿಣ) ಜಿಲ್ಲೆ, ಬೆಳಗಾವಿರವರ ಮಾರ್ಗದರ್ಶನದಲ್ಲಿ ಹಾಗೂ ರವಿ ಎಂ ಮುರಗೋಡ, ಅಬಕಾರಿ ಉಪ ಅಧೀಕ್ಷಕರು ಬೆಳಗಾವಿ ಉಪ ವಿಭಾಗ, ಬೆಳಗಾವಿರವರ ನೇತೃತ್ವದಲ್ಲಿ ಮಂಜುನಾಥ ಗಲಗಲಿ ಅಬಕಾರಿ ನಿರೀಕ್ಷಕರು, ಬೆಳಗಾವಿ ಉಪ ವಿಭಾಗ, ಬೆಳಗಾವಿ ಇವರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಸದರಿ ದಾಳಿಯಲ್ಲಿ ಎ.ವ್ಹಿ.ರಾವಳ, ಅಬಕಾರಿ ಉಪ ನಿರೀಕ್ಷಕರು, ಸುನೀಲ ಪಾಟೀಲ, ಅಬಕಾರಿ ಪೇದೆ ಎಂ.ಎಫ್.ಕಟಗೆನ್ನವರ ಅಬಕಾರಿ ಪೇದೆ, ಬಿ.ಎಸ್.ಅಟಿಗಲ್, ಅಬಕಾರಿ ಪೇದೆ, ಪ್ರವೀಣ ಬೆಳಕೂಡ, ಅಬಕಾರಿ ಪೇದೆ ಉಪ ವಿಭಾಗ, ಬೆಳಗಾವಿರವರು ದಾಳಿಯಲ್ಲಿ ಪಾಲ್ಗೊಂಡಿದ್ದರು.

*ಜೊಲ್ಲೆ ಗ್ರೂಪ್ ವತಿಯಿಂದ ಆಲ್ ಇಂಡಿಯಾ ಎ ಗ್ರೇಡ್ ಕಬಡ್ಡಿ ಪಂದ್ಯ; ಮುನ್ನಡೆ ಕಾಯ್ದುಕೊಂಡ ಬಾರಾಮತಿ, ಹರಿಯಾಣ, ಮುಂಬೈ ತಂಡ*

https://pragati.taskdun.com/all-india-a-grade-kabaddi-matchesorganized-by-jolle-groupchikkodi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button