Kannada NewsKarnataka NewsLatest

ಬೆಳಗಾವಿ – ಉತ್ತರ ಕನ್ನಡ ಗಡಿಯಲ್ಲಿ ಬೊಲೆರೋ ಅಪ್ಪಳಿಸಿ ಮೂವರು ಮಹಿಳೆಯರ ದಾರುಣ ಸಾವು

ಪ್ರಗತಿವಾಹಿನಿ ಸುದ್ದಿ, ಖಾನಾಪುರ:  ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗಳಿಗೆ ಬೊಲೇರೋ ವಾಹನ ಹಿಂಬದಿಯಿಂದ ಬಂದು ಜೋರಾಗಿ ಗುದ್ದಿದ ಪರಿಣಾಮ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲ್ಲೂಕಿನ ರಾಮನಗರ ಪಟ್ಟಣದ ಬಳಿ ಶುಕ್ರವಾರ ಸಂಜೆ ಘಟನೆ ನಡೆದಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

Home add -Advt

ಧಾರವಾಡದಿಂದ ರಾಮನಗರ ಮಾರ್ಗವಾಗಿ ಗೋವಾದತ್ತ ಹೊರಟಿದ್ದ ತಮಿಳುನಾಡು ರಾಜ್ಯದ ನೊಂದಣಿಯ ಬೊಲೇರೋ ವಾಹನ ಬೆಳಗಾವಿ-ಉತ್ತರ ಕನ್ನಡ ಜಿಲ್ಲೆಗಳ ಗಡಿಯ ರಾಮನಗರ ಗ್ರಾಮದ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡಿದ್ದರಿಂದ ಅತಿವೇಗದಿಂದ ಬಂದು ರಸ್ತೆ ಬದಿ ಸಾಗುತ್ತಿದ್ದ ನಾಲ್ವರು ಮಹಿಳೆರಿಗೆ ಮತ್ತು ಓರ್ವ ಪುರುಷನಿಗೆ ಹಿಂದಿನಿಂದ ಗುದ್ದಿದೆ.

ಆಕಸ್ಮಿಕವಾಗಿ ಸಂಭವಿಸಿದ ಅಪಘಾತದ ರಭಸಕ್ಕೆ ಐವರೂ ರಸ್ತೆಯ ಅಕ್ಕಪಕ್ಕದ ಪೊದೆಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದಾರೆ.
ಅಪಘಾತದ ತೀವ್ರತೆಗೆ ಖಾನಾಪುರ ತಾಲ್ಲೂಕು ಘಾರ್ಲಿ ಗ್ರಾಮದ ಮಹಿಳೆಯರಾದ ದುರ್ಗಾ ಭುಜಂಗ ಕಾಳಸೇಕರ (60), ತುಳಸಿ ತಮ್ಮಣ್ಣ ಗಾವಡೆ (50) ಮತ್ತು ಪಾರ್ವತಿ ಚೂಡಪ್ಪ ಗಾವಡೆ (55) ಸ್ಥಳದಲ್ಲೇ ಮೃತಪಟ್ಟರು ಎಂದು ಮೂಲಗಳು ತಿಳಿಸಿವೆ.

ಇವರ ಜೊತೆ ಹೊರಟಿದ್ದ ಘಾರ್ಲಿ ಗ್ರಾಮದ ಮಂಜುಳಾ ಚಂದ್ರಕಾಂತ ಕೋಳಸೇಕರ ಮತ್ತು ರಾಮನಗರದ ಬಿಪಿನ್ ದಳವಿ ಅವರಿಗೂ ಗಂಭೀರ ಗಾಯಗಳಾಗಿವೆ. ಇವರು ರಾಮನಗರ
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ಬಳಿಕ ಸ್ಥಳೀಯರು ಬೊಲೇರೋ ವಾಹನವನ್ನು ತಡೆದು ವಾಹನದಲ್ಲಿದ್ದ ಚಾಲಕ ಮತ್ತು
ಇತರೆ ಪ್ರಯಾಣಿಕರನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತರ ಶವಗಳನ್ನು ರಾಮನಗರ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ
ಕೈಗೊಂಡಿದ್ದಾರೆರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

*ಫಿಷ್ ಕಂಟೇನರ್ ವಾಹನದಲ್ಲಿ ಅಕ್ರಮ ಗೋವಾ ಮದ್ಯ ಮಾರಾಟ; ಬೆಳಗಾವಿಯಲ್ಲಿ ಆರೋಪಿ ಅರೆಸ್ಟ್*
https://pragati.taskdun.com/illegal-goa-liquorseizedaccued-arrestedbelagavi/

Related Articles

Back to top button