Latest

ಐಎಂಎ ವಂಚನೆ; ಐಪಿಎಸ್ ಅಧಿಕಾರಿಗೆ ಸಿಬಿಐ ನೋಟೀಸ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್ ಅಧಿಕಾರಿ ಅಜಯ್ ಹಿಲೋರಿಗೆ ಸಿಬಿಐ ಅಧಿಕಾರಿಗಳು ನೋಟೀಸ್ ನೀಡಿದ್ದಾರೆ.

ಐಎಂಎ ಹಗರಣದಲ್ಲಿ ವಂಚಿತರ ಸಂಕಷ್ಟ ಆಲಿಸದೇ ಆರೋಪಿ ಮನ್ಸೂರ್ ಖಾನ್ ಗೆ ಸಹಕರಿಸಿದ್ದಾರೆ. ಅಲ್ಲದೇ ಕಿಕ್ ಬ್ಯಾಕ್ ಪಡೆದುಕೊಂದಿದ್ದಾರೆ ಎಂಬ ಆರೋಪ ಅಜಯ್ ಹಿಲೋರಿ ವಿರುದ್ಧ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಿವಂತೆ ಸಿಬಿಐ ಹಿಲೋರಿಗೆ ನೋಟೀಸ್ ನೀಡಿದೆ.

ಈ ಹಿಂದೆ ರಾಜ್ಯ ಸರ್ಕಾರ ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್, ಅಜಯ್ ಹಿಲೋರಿ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನೀಡಿತ್ತು. ಇದೀಗ ಸಿಬಿಐ ಹಿಲೋರಿಗೆ ನೋಟೀಸ್ ನೀಡಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button