Kannada NewsKarnataka News

ಪ್ರಮುಖ ಸುದ್ದಿಗಳು

ಜೂನ್ ೧೨ ರಂದು ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆ, ವಿವಿಧ ಇಲಾಖೆಗಳು, ಕಾರ್ಮಿಕ ಸಂಘಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯ ಪ್ರಯುಕ್ತ ಜಾಗೃತಿ ರಥಕ್ಕೆ ಚಾಲನೆ ನೀಡುವ ಕಾರ್ಯಕ್ರಮ ಶುಕ್ರವಾರ (ಜೂನ್ ೧೨) ಬೆಳಿಗ್ಗೆ ೧೦.೩೦ ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಆರ್.ಜೆ.ಸತೀಶ ಸಿಂಗ್ ನೆರವೆರಿಸಲಿದ್ದಾರೆ. ಜಿಲ್ಲಾಧಿಕಾರಿ ಡಾ. ಎಸ್.ಬಿ ಬೊಮ್ಮನಹಳ್ಳಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ನಗರ ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ ಕುಮಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ವಿಜಯ ದೇವರಾಜ ಅರಸ, ಜಿಲ್ಲಾ ಪಂಚಾಯತ ಸಿಇಓ ಡಾ. ರಾಜೇಂದ್ರ ಕೆ.ವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಮಹಾನಗರ ಪಾಲಿಕೆಯ ಆಯುಕ್ತರಾದ ಜಗದೀಶ ಕೆ.ಎಚ್, ಉಪ ಕಾರ್ಮಿಕ ಆಯುಕ್ತರಾದ ವೆಂಕಟೇಶ ಶಿಂದಿಹಟ್ಟಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಎ.ಬಿ.ಪುಂಡಲಿಕ, ಮಹಿಳಾ ಮತ್ತು ಮಕ್ಕಳ ಅಭಿದ್ಧಿ ಇಲಾಖೆಯ ಉಪ ನಿರ್ದೇಶಕಾರ ಬಿ.ವಿ ವರವಟ್ಟಿ, ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆಯ ಉಪ ನಿರ್ದೇಶಕರಾದ ಎಮ್.ಎನ್ ಮಹಾದೇವ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕಾರದ ಗುರುನಾಥ ಕಡಬೂರ ಅವರು ಆಗಮಿಸಲಿದ್ದಾರೆ.
ಪ್ರತಿ ವರ್ಷ ಜೂನ್ ೧೨ ರಂದು ವಿಶ್ವ ಬಾಲಕಾರ್ಮಿಕ ವಿರೋಧಿ ದಿನವನ್ನು ಜಿಲ್ಲೆಯಾದ್ಯಂತ ಆಚರಿಸಲಾಗುತ್ತಿದೆ. ಆದರೆ ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐ.ಎಲ್.ಓ) ಈ ವರ್ಷ COVID – 19: Protect Children from Child Labour, now more than ever  ಎಂಬ ಆಶಯವನ್ನು ಹೊಂದಿದೆ. ಕೋವಿಡ್-೧೯ ಸಾಂಕ್ರಾಮಿಕ ರೋಗದ ಪರಿಣಾಮವಾಗಿ ಆರ್ಥಿಕ ಮತ್ತು ಕಾರ್ಮಿಕ ಮಾರುಕಟ್ಟೆಯ ಆಘಾತವು ಜನರ ಜೀವನ, ಜೀವನೋಪಾಯದ ಮೇಲೆ ಬಿರುತ್ತಿದ್ದು ದುರ್ಬಲ ಮಕ್ಕಳನ್ನು ಬಾಲ್ಯಾವಸ್ಥೆಯ, ಕಿಶೋರಾವಸ್ಥೆಯ ಕಾರ್ಮಿಕ ಪದ್ಧತಿಗೆ ತಳ್ಳಬಹುದಾಗಿದೆ.
ಆದ್ದರಿಂದ ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆಯ ಮಕ್ಕಳು ಕೆಲಸಕ್ಕೆ ನೇಮಕವಾಗದಂತೆ ಕ್ರಮಗಳನ್ನು ಕೈಗೊಳ್ಳಲು ಜೂನ್ ೧೨ ರಂದು ಯಾವುದೇ ಕಾರ್ಯಕ್ರಮಗಳನ್ನು ಆಯೋಜನೆ ಮಾಡದೇ ಬಿತ್ತಿ ಪತ್ರ ಹಂಚುವುದು, ಆಟೋ ಪ್ರಚಾರ, ಗೋಡೆ ಬರಹ, ಬೀದಿ ನಾಟಕಗಳನ್ನು ಪ್ರದರ್ಶನ ಮಾಡುವ ಮೂಲಕ ಸರಳವಾಗಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಆಯೋಜನೆ ಮಾಡಲಾಗುತ್ತಿದೆ.
ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಜಾಗೃತಿ ರಥವು ಬೆಳಗಾವಿ ನಗರ ಪ್ರದೇಶ ಮತ್ತು ಬೆಳಗಾವಿ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಜೂನ್ ೧೨ ರಿಂದ ೧೫ ರವರೆಗೆ ಸಂಚಾರ ಮಾಡಿ ಜಾಗೃತಿ ಮೂಡಿಸುತ್ತದೆ ಎಂದು ಸಹಾಯಕ ಕಾರ್ಮಿಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೇಕಾರರ ಸಾಲಮನ್ನಾ ಯೋಜನೆ ವಿಸ್ತರಣೆ

 

ರಾಜ್ಯದ ನೇಕಾರರು ನೇಕಾರಿಕೆ ಉದ್ದೇಶಕ್ಕಾಗಿ ಸಹಕಾರ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು, ಪಟ್ಟಣ ಸಹಕಾರಿ ಬ್ಯಾಂಕುಗಳು, ಕೃಷಿಯೇತರ ಪತ್ತಿನ ಸಹಕಾರಿ ಸಂಘಗಳು, ವಿವಿದೋದ್ದೇಶ ಸಹಕಾರಿ ಸಂಘಗಳು, ಕೈಗಾರಿಕಾ ಸಹಕಾರಿ ಬ್ಯಾಂಕುಗಳು, ಇತರೆ ಸಹಕಾರಿ ಬ್ಯಾಂಕುಗಳು, ಸೌಹಾರ್ಧ ಸಹಕಾರಿ ಸಂಘ/ ಸೌಹಾರ್ಧ ಸಹಕಾರಿ ಬ್ಯಾಂಕ್, ಕೃಷಿ ಪತ್ತಿನ ಸಹಕಾರಿ ಸಂಘಗಳಿಂದ ಸಾಲ ಪಡೆದು ಜನೆವರಿ ೧ ರಿಂದ ಮಾರ್ಚ್ ೩೧ ರ ಅವಧಿಯೊಳಗೆ ಪಾವತಿಸಿದಂತಹ ನೇಕಾರರಿಗೂ ಸಹ ರೂ.೧ ಲಕ್ಷಗಳ ವರೆಗಿನ (ಅಸಲು ಮತ್ತು ಬಡ್ಡಿ ಸೇರಿ) ಸಾಲಮನ್ನಾ ಯೋಜನೆಯನ್ನು ವಿಸ್ತರಿಸಿ ಪಾವತಿ ಮಾಡಿದಂತಹ ಸಾಲದ ಮೊತ್ತವನ್ನು ಮರುಪಾವತಿಸಲು ಆದೇಶ ಹೊರಡಿಸಲಾಗಿದೆ.

ಈಗಾಗಲೇ ವೆಬ್ ಐ.ಡಿ ಹೊಂದಿದ ಸಂಸ್ಥೆ/ ಬ್ಯಾಂಕುಗಳು dht2019.ucbcs.in ವೆಬ್ ಪೊರ್ಟಲ್‌ಗೆ ತಮ್ಮ ಸಂಸ್ಥೆ/ ಬ್ಯಾಂಕುಗಳ ಸಾಲಮನ್ನಾ ಬಿಲ್ಲುಗಳನ್ನು ಜೂನ್ ೧೭ ರೊಳಗಾಗಿ ಅಪ್‌ಲೋಡ್ ಮಾಡಿ, ಈ ಕಛೇರಿಗೆ ಹಾರ್ಡಕಾಪಿಯನ್ನು ಸಲ್ಲಿಸಲು ಕೊರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಸಾಮರ್ಥ್ಯ ಸೌಧ ಅನಗೋಳ ಇವರ ಕಛೇರಿಗೆ ಭೇಟಿ ನೀಡಿ ಸಂಪರ್ಕಿಸಬೇಕು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಡತನ ರೇಖೆಗಿಂತ ಕೆಳಗಿರುವ ಕ್ಷೌರಿಕರಿಗೆ ಪರಿಹಾರ ಧನ

ಕೋವಿಡ್-೧೯ ಹಿನ್ನೆಲೆಯಲ್ಲಿ ೧೮ ರಿಂದ ೬೫ ವರ್ಷದೊಳಗಿನ ಕ್ಷೌರಿಕ/ಅಗಸ ವೃತ್ತಿಯನ್ನು ನಿರ್ವಹಿಸುತ್ತಿರುವ ಬಡತನ ರೇಖೆಗಿಂತ ಕೆಳಗಿರುವ ಅಸಂಘಟಿತ ವಲಯದ ಕಾರ್ಮಿಕರಿಗೆ ಪರಿಹಾರವಾಗಿ ರೂ.೫೦೦೦ ಗಳನ್ನು ಪಡೆಯಲು ಅರ್ಹ ಅಹ್ವಾನಿಸಲಾಗಿದೆ.
ಫಲಾನುಭವಿಗಳು ತಾವು ಕೆಲಸ ನಿರ್ವಹಿಸುತ್ತಿರುವ ವ್ಯಾಪ್ತಿಯ ಸೇವಾ ಸಿಂಧು ಕೇಂದ್ರದ ಸೇವಾ ಸಿಂಧು ಪೋರ್ಟಲ್‌ನಲ್ಲಿ ನಿಗಧಿತ ಅರ್ಜಿಯಲ್ಲಿ ಮಾಹಿತಿ ಭರ್ತಿ ಮಾಡಿ, ಬ್ಯಾಂಕ್ ಖಾತೆಯೊಂದಿಗೆ ಜೋಡನೆಯಾಗಿರುವ ಆಧಾರ ಕಾರ್ಡ, ವಿಳಾಸ ದೃಢೀಕರಣದ ಪಡಿತರ ಚೀಟಿ/ಚುನಾವಣಾ ಗುರುತಿನ ಚೀಟಿ, ಮೋಬೈಲ್ ಸಂಖ್ಯೆ, ಸ್ವಯಂ ಘೋಷಣಾ ಪತ್ರ, ಉದ್ಯೋಗ ಪ್ರಮಾಣ ಪತ್ರ ಹಾಗೂ ತಮ್ಮ ಛಾಯಾ ಚಿತ್ರವನ್ನು ಅಪಲೋಡ್ ಮಾಡಬೇಕು.
ಕ್ಷೌರಿಕ/ಅಗಸ ವೃತ್ತಿಯನ್ನು ನಿರ್ವಹಿಸುತ್ತಿರುವ ಕುರಿತು ಉದ್ಯೋಗ ಪ್ರಮಾಣ ಪತ್ರ, ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಯ ಕಂದಾಯ ಅಧಿಕಾರಿ/ಕಂದಾಯ ನಿರೀಕ್ಷಕರು, ಹಾಗೂ ತಾಲೂಕು ಮಟ್ಟದಲ್ಲಿ ತಹಶೀಲ್ದಾರರು, ಉಪತಹಶೀಲ್ದಾರರು, ಕಂದಾಯ ನಿರೀಕ್ಷಕರು, ಕಂದಾಯ ಅಧಿಕಾರಿಗಳು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ. ಕಾರ್ಮಿಕ ಇಲಾಖೆಯ ನಿರೀಕ್ಷಕರು, ಕಾರ್ಮಿಕ ಅಧಿಕಾರಿಗಳು, ಸಹಾಯಕ ಕಾರ್ಮಿಕ ಆಯುಕ್ತರು, ಯಾವುದಾದರೊಂದು ಅಧಿಕಾರಿಯಿಂದ ದೃಢೀಕರಿಸಿ ಮೂಲ ಪ್ರತಿಯನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕಾಗಿರುತ್ತದೆ.
ಒಂದು ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಜನ ವೃತ್ತಿಯಲ್ಲಿ ತೊಡಗಿದ್ದಲ್ಲಿ ಒಬ್ಬರು ಮಾತ್ರ ಪರಿಹಾರ ಧನವನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಉಪ ಕಾರ್ಮಿಕ ಆಯುಕ್ತ ವೆಂಕಟೇಶ ಶಿಂದಿಹಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೋವಿಡ್-೧೯: ಜೂನ್ ೧೩ ರಂದು ಚೆಕ್ ವಿತರಣಾ ಕಾರ್ಯಕ್ರಮ

ಕೋವಿಡ್-೧೯ ಮಹಾಮಾರಿ ವಿರುದ್ಧ ಹೋರಾಡುತ್ತಿರುವ ಕರೋನಾ ವಾರಿಯರ್ಸ್‌ಗಳಾದ ಜಿಲ್ಲೆಯ ಆಶಾ ಕಾರ್ಯಕರ್ತೆಯರನ್ನು ಪ್ರೋತ್ಸಾಹಿಸುವ ಸಲುವಾಗಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ.೨೫ ಲಕ್ಷ ರೂಪಾಯಿ ಪ್ರೋತ್ಸಾಹಧನ ನೀಡಲು ಜೂನ್ ೯ ರಂದು ಜರುಗಿದ ಆಡಳಿತ ಮಂಡಳಿ ಸಭೆಯು ತೀರ್ಮಾನಿಸಿದೆ.
ಪ್ರೋತ್ಸಾಹ ಧನದ ಚೆಕ್ ವಿತರಣೆಯ ಮೊದಲನೇಯ ಕಾರ್ಯಕ್ರಮವನ್ನು ಜೂನ್ ೧೩ ರಂದು ಬೆಳಿಗ್ಗೆ ೧೦ ಗಂಟೆಗೆ ರಾಯಬಾಗ ಪಟ್ಟಣದ ಸ್ಟೇಷನ್ ಹಿಲ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೂನ್ ೧೩ ರಂದು ವಿದ್ಯುತ್ ನಿಲುಗಡೆ

ಹುಬ್ಬಳ್ಳಿ ವಿದ್ಯುತ್ ಕಂಪನಿ ವತಿಯಿಂದ ಮೊದಲನೇಯ ತ್ರೈಮಾಸಿಕ ಹಾಗೂ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಜೂನ್ ೧೩ ರಂದು ಬೆಳಿಗ್ಗೆ ೯ ಘಂಟೆಯಿಂದ ಸಾಯಂಕಾಲ ೪ ಘಂಟೆಯವರೆಗೆ ವಿದ್ಯುತ್ ನೀಲುಗಡೆ ಆಗಲಿದೆ.

೧೧೦ ಕೆ.ವ್ಹಿ. ಬೀಡಿ ಉಪಕೇಂದ್ರದಿಂದ ಸರಬರಾಜು ಆಗುವ ಹಿಂಡಲಗಿ, ಮಂಗ್ಯಾನಕೊಪ್ಪ, ಕೇರವಾಡ, ಬೀಡಿ, ಕಕ್ಕೇರಿ, ಚುಂಚವಾಡ, ರಾಮಾಪೂರ, ಸುರಪೂರ, ಗೋಲಿಹಳ್ಳಿ, ಭುರುಣಕಿ, ಕರಿಕಟ್ಟಿ, ಗಸ್ತೋಳ್ಳಿದಡ್ಡಿ, ಗಸ್ತೊಳ್ಳಿ, ಹೊಸೆಟ್ಟಿ, ಶಿವಾಜಿ ನಗರ, ಹಾಲಜುಂಜವಾಡ, ಚನ್ನಕ್ಕೇಬೈಲ, ಮಾಸ್ಕ್ಯಾನಟ್ಟಿ, ಹಲಸಾಳ, ಪಾದಲವಾಡಿ, ಅನಗಡಿ, ಕರಂಜಲ, ಪೋತೋಳಿ, ಕಾಪೋಲಿ, ಶಿವಠಾಣ, ಶಿಂಧೋಳ್ಳಿ ಬಿ.ಕೆ, ಶಿಂಧೋಳ್ಳಿ ಕೆ.ಎಚ್, ಗೋಸೆ ಬಿ.ಕೆ, ಗೋಸೆ ಕೆ.ಎಚ್, ಮಡವಾಲ, ಗೋಟಗಾಳಿ, ದೇವರಾಯಿ, ಜಂಬೇಗಾಳಿ, ನಂಜನಕೊಡಲ, ಸುಳೇಗಾಳಿ, ಹತ್ತರವಾಡ, ಮೇರ್ಡಾ, ಕಾರಜಗಿ, ಬಸ್ತವಾಡ, ಹಲಗಾ, ಹಂದೂರ, ಹುಲಿಕೊತ್ತಲ, ನವೋದಯ ನಗರ, ಕಸಮಳಗಿ, ಮುಗಳಿಹಾಳ, ಕಡತನಬಾಗೇವಾಡಿ, ಬಿಳಕೆ, ಅವರೊಳ್ಳಿ, ಚಿಕದಿನಕೊಪ್ಪ, ಕೊಡಚವಾಡ, ದೇಮಿನಕೊಪ್ಪ, ವಡ್ಡೇಬೈಲ, ಸುರಪುರ ಕೆರವಾಡ, ಚಿಕ್ಕಅಂಗ್ರೊಳ್ಳಿ, ಕುಣಕಿಕೊಪ್ಪ, ಬೇಕವಾಡ, ಬಂಕಿ, ಬಸರಿಕಟ್ಟಿ, ಜುಂಜವಾಡ ಕೆ.ಎನ್, ಗರ್ಬಾನಟ್ಟಿ, ನಂಜನಕೊಡಲ, ಸಗರೆ, ದೊಡ್ಡೇಬೈಲ, ಚನ್ನೇವಾಡಿ, ಭುತೇವಾಡಿ, ಹಲಶಿ, ಗುಂಡಪಿ,
ಬಿಜಗಣ , ಬಂಬರಡಾ ಹಾಗೂ ಮೆಂಡಗಾಳಿ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಕಾರ್ಯನಿರ್ವಾಹಕ ಇಂಜಿನೀಯರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯುತ್ ನಿಲುಗಡೆ

 

ಹುಬ್ಬಳ್ಳಿ ವಿದ್ಯುತ್ ಕಂಪನಿ ವತಿಯಿಂದ ಹೆಚ್.ಟಿ ಮಾರ್ಗಗಳ ಬಲವರ್ಧನೆ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಜೂನ್ ೧೨ ರಿಂದ ೧೪ ರ ವರೆಗೆ ಪ್ರತಿದಿನ ಬೆಳಿಗ್ಗೆ ೧೦ ಘಂಟೆಯಿಂದ ಸಾಯಂಕಾಲ ೬ ಘಂಟೆಯವರೆಗೆ ವಿದ್ಯುತ್ ನೀಲುಗಡೆ ಆಗಲಿದೆ.
೧೧೦ ಕೆ.ವ್ಹಿ. ವಡಗಾಂವ ಉಪಕೇಂದ್ರದಿಂದ ಸರಬರಾಜು ಆಗುವ ಧಾಮನೆ, ಕುರುಬರಹಟ್ಟಿ, ಮಾಸ್ಗ್ಯಾನಟ್ಟಿ, ದೇವಗ್ಯಾನಟ್ಟಿ, ಔಚಾರಟ್ಟಿ, ಯರಮಾಳ, ಯಳ್ಳೂರ, ಸುಳಗಾ, ರಾಜಹಂಸಗಡ, ದೇಸೂರ ಹಾಗೂ ನಂದಿಹಳ್ಳಿ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಅದೆ ರೀತಿ ಜೂನ್ ೧೨ ರಿಂದ ೧೪ ರ ವರೆಗೆ ಪ್ರತಿದಿನ ಬೆಳಿಗ್ಗೆ ೧೦ ಘಂಟೆಯಿಂದ ಸಾಯಂಕಾಲ ೬ ಘಂಟೆಯವರೆಗೆ ಹುಬ್ಬಳ್ಳಿ ವಿದ್ಯುತ್ ಕಂಪನಿ ವತಿಯಿಂದ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ೧೧೦ ಕೆ.ವ್ಹಿ. ಮಚ್ಛೆ ಉಪಕೇಂದ್ರದಿಂದ ಸರಬರಾಜು ಆಗುವ ಬೆಳಗಾವಿ ತಾಲೂಕಿನ ಜಾನೇವಾಡಿ, ಬಾದರವಾಡಿ, ರಣಕುಂಡೆ, ಕರ್ಲೇ, ಕಿನಯೇ, ತೀರ್ಥಕುಂಡೆ ಹಾಗೂ ಖಾನಾಪೂರ ತಾಲೂಕಿನ ಉಚವಡಾ, ಕುಸಮಳಿ, ಬೈಲೂರ, ಮೊರಬ, ಜಾಂಬೋಟಿ, ಓಲಮನಿ, ವಡಗಾಂವ, ದಾರೋಳಿ, ಚಾಪೋಲಿ, ಕಾಪೋಲಿ, ಮುಡವಿ, ಹಬ್ಬಾನಟ್ಟಿ, ದೇವಾಚಿಹಟ್ಟಿ, ತೋರಾಳಿ, ಗೋಲ್ಯಾಳಿ, ಬೆಟಗೇರಿ, ತಳೇವಾಡಿ, ಅಮಟೆ, ಕಾಲಮನಿ, ಚಿಕಲೆ, ಕಣಕುಂಬಿ, ಗವಸೆ, ಅಮಗಾಂವ, ಬೇಟ್ನೆ, ಪಾರವಾಡ, ಚಿಗುಳೆ, ಮಾನ, ಸಡಾ, ಚೋರ್ಲಾ, ಹಳೆ ಹಾಗೂ ಹೊಸ ಹುಳಂದ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಕಾರ್ಯನಿರ್ವಾಹಕ ಇಂಜಿನೀಯರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button