ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಈ ಬಾರಿ ಮಳೆಯ ಅಭಾವದಿಂದ ಬೆಳಗಾವಿ ಜಿಲ್ಲೆಯ ೧೫ ತಾಲುಕೂಗಳನ್ನು ಬರ ಪೀಡಿತ ಪ್ರದೇಶಗಳೆಂದು ಸರ್ಕಾರ ಘೋಷಿಸಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗುವ ಸಾಧ್ಯತೆಗಳು ಇರುವುದರಿಂದ ಹಾಲಿ ಭತ್ತ, ಮೆಕ್ಕೆಜೋಳ ಮತ್ತು ಇತರೆ ಬೆಳೇಗಳ ಕಟಾವು ಮಾಡುವ ಹಂಗಾಮಿನಲ್ಲಿ ಭತ್ತದ ಹುಲ್ಲು ಮೇವನ್ನು ಹಾಳಾಗದಂತೆ ಕ್ರಮ ಅನುಸರಿಸಲು ರೈತರಿಗೆ ಸೂಚಿಸಲಾಗಿದೆ.
ಹೆಚ್ಚಿನ ಪ್ರಮಾಣದಲ್ಲಿ ಮೇವನ್ನು ಒಣಗಿಸಿ ಹುಲ್ಲು ಹಾಳಾಗದಂತೆ ಶೇಖರಣೆ ಮಾಡಬೇಕು ಹಾಗೂ ಅವಶ್ಯಕ ಕಂಡು ಬರುವ ಸಂದರ್ಭಗಳಲ್ಲಿ ರೈತರು ಸರ್ಕಾರಕ್ಕೆ ಮೇವನ್ನು ಮಾರಾಟ ಮಾಡಬಹುದಾಗಿರುತ್ತದೆ.
ರೈತರು ತಮ್ಮ ಜಮೀನಿನಲ್ಲಿರುವ ಮೇವನ್ನು ಸುಟ್ಟು ಹಾಕದೇ ಬಣವೆ ಹಾಕಿಕೊಂಡು ದಾಸ್ತಾನಿರಿಸಿಟ್ಟುಕೊಳ್ಳಬೇಕು. ಬೇಲಿಂಗ್ ಯಂತ್ರಗಳಿಂದ ಭತ್ತದ ಹುಲ್ಲು ಸುರಳಿ ಕಟ್ಟಿ ಹಾಳಾಗದಂತೆ ಶೇಖರಿಸಿಟ್ಟುಕೊಳಬೇಕಾಗಿದೆ. ತಮ್ಮ ಜಾನುವಾರುಗಳಿಗೆ ಮುಂದಿನ ಬೇಸಿಗೆಯಲ್ಲಿ ಸಾಕಾಗುವಷ್ಟು ಹೆಚ್ಚಿನ ಪ್ರಮಾಣದಲ್ಲಿ ಮೇವನ್ನು ದಾಸ್ತಾನಿಟ್ಟುಕೊಳ್ಳಬೇಕು.
ರೈತರು ಮೇವನ್ನು ಹೊರ ರಾಜ್ಯಗಳಿಗೆ ಅಥವಾ ಹೊರ ಜಿಲ್ಲೆಗಳಿಗೆ ಮಾರಾಟ ಅಥವಾ ಸಾಗಾಣಿಕೆಯನ್ನು ಮಾಡದೆ ಇರುವುದರಿಂದ ಜಿಲ್ಲೆಯ ರೈತರಿಗೆ ಅನುಕೂಲ ಕಲ್ಪಿಸಲು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಗಳಾದ ನಿತೇಶ್ ಕೆ. ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ