Election NewsKannada NewsKarnataka NewsPolitics

ಶಾಸಕ ಅಭಯ ಪಾಟೀಲ್, ನಳೀನ್ ಕುಮಾರ ಕಟೀಲ್ ಗೆ ಪ್ರಮುಖ ಜವಾಬ್ದಾರಿ ಹಂಚಿಕೆ

ಪ್ರಗತಿವಾಹಿನಿ ಸುದ್ದಿ, ನವದೆಹಲಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಹಲವರಿಗೆ ಜವಾಬ್ದಾರಿಗಳನ್ನು ಹಂಚಿಕೆ ಮಾಡಿದೆ.

ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರಿಗೆ ತೆಲಂಗಾಣ ಚುನಾವಣೆಯ ಉಸ್ತುವಾರಿ ನೀಡಿ ಬಿಜೆಪಿ ಆದೇಶ ನೀಡಿದೆ. ಸಂಸದ ನಳೀನ್ ಕುಮಾರ ಕಟೀಲ್ ಅವರಿಗೆ ಕೇರಳ ಉಸ್ತುವಾರಿ ಹಾಗೂ ನಿರ್ಮಲ ಕುಮಾರ ಸುರಾನಾ ಅವರಿಗೆ ಮಹಾರಾಷ್ಟ್ರ ಚುನಾವಣೆಯ ಸಹ ಉಸ್ತುವಾರಿ ನೀಡಲಾಗಿದೆ.

ಶಾಸಕ ಅಭಯ ಪಾಟೀಲ ಈ ಹಿಂದೆ ಕೂಡ ಹಲವಾರು ಉತ್ತರ ಭಾರತದ ರಾಜ್ಯಗಳ ವಿಧಾನಸಭೆ ಚುನಾವಣೆ ಉಸ್ತುವಾರಿ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು.

Home add -Advt

Related Articles

Back to top button