Latest

*ಶೈಕ್ಷಣಿಕ ಪ್ರವಾಸದ ವೇಳೆ ದುರಂತ; ವಿದ್ಯಾರ್ಥಿನಿ ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಹಾಸನ: ಶೈಕ್ಷಣಿಕ ಪ್ರವಾಸಕ್ಕೆಂದು ಶ್ರವಣ ಬೆಳಗೊಳಕ್ಕೆ ತೆರಳಿದ್ದಾಗ ಬೆಟ್ಟ ಹತ್ತುವಾಗ ಕಾಲು ಜಾರಿಬಿದ್ದು ಶಾಲಾ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ನಾಗಲಕ್ಷ್ಮಿ ಮೃತ ವಿದ್ಯಾರ್ಥಿನಿ. ಸಿರುಗುಪ್ಪ ತಾಲೂಕಿನ ಕೆ.ಬೆಳಗಲ್ ಸರಕಾರಿ ಪ್ರೌಢ ಶಾಲೆ ವಿದ್ಯಾರ್ಥಿನಿ. ಶಾಲೆಯಿಂದ ಶ್ರವಣಬೆಳಗೊಳಕ್ಕೆ ಪ್ರವಾಸಕ್ಕೆ ಹೋಗಿದ್ದಾಗ ಬೆಟ್ಟ ಹತ್ತುವ ವೇಳೆ ಕಾಲು ಜಾರಿಬಿದ್ದು ನಾಗಲಕ್ಷ್ಮಿ ತಲೆಗೆ ಗಂಭೀರವಾಗಿ ಗಾಯವಾಗಿತ್ತು. ಗಾಯಾಳು ವಿದ್ಯಾರ್ಥಿನಿಯನ್ನು ಹಾಸನ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Home add -Advt

ವಿದ್ಯಾರ್ಥಿನಿ ನಾಗಲಕ್ಷ್ಮಿ ಸಾವಿಗೆ ಸಹಪಾಠಿಗಳು, ಶಾಲಾ ಶಿಕ್ಷಕರು ಕಂಬನಿ ಮಿಡಿದಿದ್ದಾರೆ. ಶೈಕ್ಷಣಿಕ ಪ್ರವಾಸಕ್ಕೆ ಮಕ್ಕಳನ್ನು ಕರೆದೊಯ್ಯುವಾಗ ಶಿಕ್ಷಕರು ಜಾಗೃತರಾಗಿರುವ ಅಗತ್ಯವಿದೆ.

*ಡಿ.13ಕ್ಕೆ ನಮ್ಮನೆ ಹಬ್ಬ: ಸಂಗೀತ, ಯಕ್ಷ ರೂಪಕ, ಪ್ರಶಸ್ತಿ ಪ್ರದಾನ*

https://pragati.taskdun.com/nammane-habbasirsivishwashanti-seva-trust/

Related Articles

Back to top button