Kannada NewsKarnataka NewsLatest

ಮೇ 29 ರಿಂದ ಲಕ್ಷ್ಮೀದೇವಿ ನೂತನ ದೇವಸ್ಥಾನ ಉದ್ಘಾಟನೆ

ಪ್ರಗತಿವಾಹಿನಿ ಸುದ್ದಿ, ಮೂಡಲಗಿ: ಪಟ್ಟಣದ ಗಾಂಧಿ ಚೌಕ ಬಳಿಯ ಢವಳೇಶ್ವರ ಓಣಿಯಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಲಕ್ಷ್ಮೀದೇವಿ ದೇವಸ್ಥಾನ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಹಾಗೂ ಜಾತ್ರಾ ಮಹೋತ್ಸವ ಮೇ 29ಮತ್ತು 30 ರಂದು ಹಮ್ಮಿಕೊಳ್ಳಲಾಗಿದೆ ಎಂದು ಜಾತ್ರಾ ಕಮಿಟಿ ತಿಳಿಸಿದೆ.

29 ರಂದು ಬೆಳಗ್ಗೆ ಪಟ್ಟಣದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಿಂದ ಸಕಲ ವಾದ್ಯಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪೂರ್ಣಕುಂಭ ಮೆರವಣಿಗೆ ನಡೆಯುವುದು. ನಂತರ ಹೋಮ-ಹವನದೊಂದಿಗೆ ಶ್ರೀ ಲಕ್ಷ್ಮೀದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ಮಧ್ಯಾಹ್ನ ಮಹಾಪ್ರಸಾದ ಜರುಗಲಿದೆ.

ಸಮಾರಂಭದ ಸಾನ್ನಿಧ್ಯವನ್ನು ಪಟ್ಟಣದ ಶ್ರೀ ದತ್ತಾತ್ರೇಯ ಬೋಧ ಸ್ವಾಮೀಜಿ, ಶ್ರೀಧರಭೋಧ ಸ್ವಾಮೀಜಿ ಮತ್ತು ಸುಣಧೋಳಿಯ ಶ್ರೀ ಶಿವಾನಂದ ಸ್ವಾಮೀಜಿ ವಹಿಸುವರು, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಷ ಢವಳೇಶ್ವರ ಉದ್ಘಾಟಿಸುವರು. ಅಂದು ರಾತ್ರಿ 9 ಘಂಟೆಗೆ ಹಳ್ಳೂರ, ರಾಜಾಪುರ ತಂಡದಿಂದ ಡೊಳ್ಳಿನ ಪದಗಳು ಜರುಗುವವು.

ಮೇ.30 ರಂದು ಬೆಳಗ್ಗೆ 8 ಕ್ಕೆ ಶ್ರೀ ಲಕ್ಷ್ಮೀದೇವಿ ಗೆ ಅಭಿಷೇಕ, ನಂತರ ಉಡಿ ತುಂಬುವುದು ಮತ್ತು ಮಧ್ಯಾಹ್ನ ಮಹಾಪ್ರಸಾದ ಜರುಗಲಿದೆ.

Home add -Advt
https://pragati.taskdun.com/i-have-instructed-the-authorities-to-ensure-that-water-problem-does-not-arise-mla-shashikala-jolla/

https://pragati.taskdun.com/lakshmi-hebbalkar-is-another-name-for-achievement-chalenge-and-party-loyalty-2/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button