Kannada NewsKarnataka NewsLatest

ಮಹಾವೀರ ಬ್ಯಾಂಕ್ ನೂತನ ಕಟ್ಟಡದ ವಾಸ್ತು ಶಾಂತಿ ಹಾಗೂ ಉದ್ಘಾಟನಾ ಸಮಾರಂಭ

ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ;  ಪಟ್ಟಣದ ಶ್ರೀ ಮಹಾವೀರ ಸೌಹಾರ್ದ ಸಹಕಾರಿ ಬ್ಯಾಂಕಿನ ಬೆಳಗಾವಿ ಉದ್ಯಮಭಾಗ ಶಾಖೆಯ ನೂತನ ಕಟ್ಟಡದ ವಾಸ್ತು ಶಾಂತಿ ಹಾಗೂ ಉದ್ಘಾಟನಾ ಸಮಾರಂಭ ಶುಕ್ರವಾರ ದಿ ೬ರಂದು ಮುಂಜಾನೆ ೧೦.೩೦ಕ್ಕೆ ಮಠಾಧೀಶರ ಸಾನಿಧ್ಯದಲ್ಲಿ ಜರುಗಲಿದೆ.

ಬ್ಯಾಂಕಿನ ಅಧ್ಯಕ್ಷ ಮಹಾವೀರ ನಿಲಜಗಿ ಈ ವಿಷಯ ತಿಳಿಸಿದ್ದಾರೆ. ಪಟ್ಟಣದ ಮಹಾವೀರ ಬ್ಯಾಂಕಿನ ಸಭಾಭವನದಲ್ಲಿ ಮಾತನಾಡಿದ ಅವರು, ಸಹಕಾರಿ ಸಂಘವು ೧೨ ಶಾಖೆಗಳನ್ನು ಹೊಂದಿದ್ದು ಅದರಲ್ಲಿ ನಾಲ್ಕನೇಯ ಶಾಖೆಯ ಸ್ವಂತ ಕಟ್ಟಡ ಉದ್ಘಾಟನೆಗೊಳ್ಳುತ್ತಿದೆ, ಬೆಳಗಾವಿಯಲ್ಲಿಯೇ ಮೂರು ಶಾಖೆಗಳಿದ್ದು ಇನ್ನಿತರ ಶಾಖೆಗಳ ಸ್ವಂತ ಕಟ್ಟಡಕ್ಕಾಗಿ ಸೂಕ್ತ ಸ್ಥಳ ಗುರುತಿಸಲಾಗುತ್ತಿದೆ ಎಂದರು.

Home add -Advt

ಅಲ್ಪವಧಿಯಲ್ಲಿ ಗ್ರಾಹಕರ ಪ್ರೀತಿಗೆ ಪಾತ್ರವಾದ ಸಹಕಾರಿ ಸಂಘವು ಇಷ್ಟೊಂದು ಉನ್ನಿತಿಕರಣಕ್ಕೆ ಗ್ರಾಹಕರ ಸಹಕಾರ ಮುಖ್ಯವಾಗಿದೆ, ವ್ಯಾಪಾರಸ್ಥರಿಗೆ, ಗೃಹ ನಿರ್ಮಾಣಕ್ಕೆ, ಹೊಸ ವಾಹನ ಖರೀದಿಗಾಗಿ ರಿಯಾತಿ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ವಿತರಿಸಲಾಗುತ್ತಿದೆ, ಜನ ಸಮಾನ್ಯರಿಗೆ ನಿರಂತರವಾದ ಸೇವೆ ಮಾಡುವುದೇ ನಮ್ಮ ಸಹಕಾರಿ ತತ್ವದ ಮುಖ್ಯ ಗುರಿಯಾಗಿದೆ, ಎಲ್ಲ ಗ್ರಾಹಕರ ಉತ್ತಮ ವ್ಯವಹಾರದಿಂದಾಗಿ ೧.೩೦ ಕೋಟಿ ನಿವ್ವಳ ಲಾಭಗಳಿಸಿದ್ದು ಬ್ಯಾಂಕಿನ ಜೊತೆಗೆ ಶಿಕ್ಷಣ ಸಂಸ್ಥೆಯು ಕೂಡ ಕಾರ್ಯನಿರ್ವಸುತ್ತಿರುವುದು ಹೆಮ್ಮೆಯಾಗಿದೆ ಎಂದು ಹೇಳಿದರು.

Related Articles

Back to top button