*77ನೇ ಸ್ವಾತಂತ್ರ್ಯೋತ್ಸವ: 10ನೇ ಬಾರಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ*

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಇಂದು ದೇಶಾದ್ಯಂತ 77ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ. ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯ ಮೇಲೆ 10ನೇ ಬಾರಿ ಧ್ವಜಾರೋಹಣ ಮಾಡಿದ್ದಾರೆ. ಈ ಮೂಲಕ ಮನಮೋಹನ್ ಸಿಂಗ್ ದಾಖಲೆಯನ್ನು ಮುರಿದಿದ್ದಾರೆ.
ಧ್ವಜಾರೋಹಣದ ಬಳಿಕ ದೇಶವನ್ನುದ್ದೇಶಿಸಿ ಮತನಾಡಿದ ಪ್ರಧಾನಿ ಮೋದಿ, ದೇಶವಾಸಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಷಯ ಕೋರಿದರು. ಹಲವರ ತ್ಯಾಗ, ಬಲಿದಾನದ ಫಲವಾಗಿ ಸ್ವತಂತ್ರ್ಯ ಸಿಕ್ಕಿತು. ಇಂದು ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಸ್ವತಂತ್ರ್ಯದ ಕನಸನ್ನು ಹೊತ್ತು ಬದುಕದ ಭಾರತೀಯರೇ ಇಲ್ಲ. ತ್ಯಾಗ, ತಪಸ್ಸಿನ ವ್ಯಾಪಕ ರೂಪ. ಹೊಸ ನಂಬಿಕೆಯನ್ನು ಜಾಗೃತಗೊಳಿಸಿದ ಆ ಕ್ಷಣ ಅಂತಿಮವಾಗಿ 1947ರಲ್ಲಿ ದೇಶವು ಸ್ವತಂತ್ರವಾಯಿತು.
1000 ವರ್ಷಗಳ ಗುಲಾಮಗಿರಿಯ ಸಮಯದಲ್ಲಿ ಪಾಲಿಸಿದ ಕನಸುಗಳು ನನಸಾಗುತ್ತಿರುವುದನ್ನು ದೇಶ ಕಂಡಿತು. ದೇಶದ ಮುಂದೆ ಮತ್ತೊಮ್ಮೆ ಅವಕಾಶ ಬಂದಿರುವುದನ್ನು ನಾನು ನೋಡುತ್ತಿದ್ದೇನೆ. ಇದು ಅಮೃತಕಾಲದ ಮೊದಲ ವರ್ಷ. ಎಲ್ಲರ ಕಲ್ಯಾಣ ಮತ್ತು ಎಲ್ಲರ ಸಂತೋಷಕ್ಕಾಗಿ ಕೆಲಸ ಮಾಡುತ್ತೇನೆ.
ಭಾರತ ಸಾವಿರ ವರ್ಷಗಳ ಗುಲಾಮಗಿರಿ ಮತ್ತು ಮುಂಬರುವ 1000 ವರ್ಷಗಳ ಭವ್ಯ ಹಂತದಲ್ಲಿ ನಿಂತಿದೆ. ಸಂದಿಗ್ಧತೆಯಲ್ಲಿ ಬದುಕಬೇಡಿ. ಕಳೆದು ಹೋದ ಪರಂಪರೆ ಬಗ್ಗೆ ಹೆಮ್ಮೆ ಪಡುತ್ತಾ ಏಳಿಗೆಯನ್ನು ಸಾಧಿಸುತ್ತಾ ಮುನ್ನಡೆಯಬೇಕು ಎಂದು ಹೇಳಿದರು.
ಪ್ರಪಂಚದಾದ್ಯಂತ ಭಾರತದ ಪ್ರಜ್ಞೆಯಲ್ಲಿ ಹೊಸ ಭರವಸೆ ಹುಟ್ಟಿಕೊಂಡಿದೆ. ಈ ಬೆಳಕಿನ ಕಿರಣಗಳ ಮೂಲಕ ಜಗತ್ತು ತನಗಾಗಿ ಬೆಳಕು ನೋಡುತ್ತಿದೆ. ನಮ್ಮಲ್ಲಿ ವೈವಿದ್ಯತೆ ಇದೆ. ಇಂದು 30 ವರ್ಷಕ್ಕಿಂತ ಕಿರಿಯರು ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಅದು ಭರತ ಮಾತೆಯ ಮಡಿಲಲ್ಲಿದೆ ಎಂದು ಹೇಳಬಹುದು ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ