Latest

*PWD ಮುಖ್ಯ ಕಚೇರಿಯಲ್ಲಿಯೇ ಕಳ್ಳತನ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಲೋಕೋಪಯೋಗಿ ಇಲಾಖೆಯ ಮುಖ್ಯ ಕಚೇರಿಯಲ್ಲಿಯೇ ಕಳ್ಳತನ ನಡೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕರ ಕಚೇರಿಯಲ್ಲಿದ್ದ ಕಡತಗಳು, ಕಂಪ್ಯೂಟರ್ ಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಕಚೇರಿಯಲ್ಲಿ ಮೂರು ಕಬೋರ್ಡ್ ಗಳಲ್ಲಿ ಇದ್ದ ಕಡತಗಳೇ ನಾಪತ್ತೆಯಾಗಿವೆ. ಅಲ್ಲದೇ ಹೊಸದಾಗಿ ಅಳವಡಿಸಲಾಗಿದ್ದ ಮೂರು ಕಂಪ್ಯೂಟರ್ ಗಳನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ.

ರಜೆಯ ಕಾರಣದಿಂದಾಗಿ ಲೋಕೋಪಯೋಗಿ ಕಚೇರಿಗೆ ಸಿಬ್ಬಂದಿಗಳು ಯಾರೂ ಬಂದಿರಲಿಲ್ಲ. ಈ ವೇಳೆ ಕಳ್ಳರು ಕೈಚಳಕ ತೋರಿದ್ದಾರೆ. ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅನಂತ್ ಅವರು ವಿಧಾನಸೌಧ ಠಾಣೆಯಲ್ಲಿ ದೂರು ನೀಡಿದ್ದಾರೆ.

*ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ 6 ಜನ ಸಜೀವ ದಹನ*

Home add -Advt

https://pragati.taskdun.com/telangaatdp-leaderhomefire/

Related Articles

Back to top button