Belagavi NewsBelgaum NewsKannada NewsKarnataka NewsLatest
*ಭಾರತ ಹಾಗೂ ನ್ಯೂಜಿಲೆಂಡ್ ಟಿ-20 ವರ್ಲ್ಡ್ ಕಪ್ ಫೈನಲ್: ಭಾರತ ಜಯಗಳಿಸಲೆಂದು ಗಣೇಶನಿಗೆ ಕರವೇ ವತಿಯಿಂದ ವಿಶೇಷ ಪೂಜೆ*

ಪ್ರಗತಿವಾಹಿನಿ ಸುದ್ದಿ: ಇಂದು ನಡೆಯಲಿರುವ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಟಿ-20 ವರ್ಲ್ಡ್ ಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಯಾವುದೇ ವಿಘ್ನಗಳು ಬಾರದಂತೆ ಭರ್ಜರಿ ಜಯ ಸಾಧಿಸಿ ಇತಿಹಾಸ ನಿರ್ಮಿಸಲಿ ಎಂದು ಕರವೇ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಚನ್ನಮ್ಮ ವೃತ್ತದಲ್ಲಿರುವ ಗಣೇಶ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಲಾಯಿತು.
ಈ ಸಂದರ್ಭದಲ್ಲಿ ದೀಪಕ ಗುಡಗನಟ್ಟಿ, ಸುರೇಶ ಗವನ್ನವರ, ಮಹಾಂತೇಶ ರಣಗಟ್ಟಿಮಠ, ಗಣೇಶ್ ರೋಖಡೆ, ಹೊಳೆಪ್ಪ ಸುಲದಾಳ, ಅಡಿವೆಪ್ಪ ತಳ್ಳೋರಿ,
ಸತೀಶ್ ಗುಡದವರ, ಲೋಕೆಶ ರಾಠೋಡ್, ಅರ್ಜುನ ಕಾಂಬಳೆ, ಕಾರ್ತಿಕ ಪಾಟೀಲ, ನಾಗರಾಜ ಲಕ್ಕಪ್ಪಗೊಳ,
ಸಂತೋಷ ಚಕ್ರಯಿ ಉಪಸ್ಥಿತರಿದ್ದರು.



