ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಭಾರತದಲ್ಲೇ ಅತಿ ದೊಡ್ಡ ಕಾರುಗಳ್ಳ ಎಂದು ಗುರುತಿಸಲಾದ ಆರೋಪಿಯನ್ನು ದೆಹಲಿ ಪೊಲೀಸರು ಸೋಮವಾರ ಸೆರೆಹಿಡಿದಿದ್ದಾರೆ.
ಅನಿಲ ಚೌಹಾಣ್ ಎಂಬಾತ ಬಂಧಿತ. ಈತ ದೇಶದ ಆಟೊಮೊಬೈಲ್ ಕಳ್ಳತನ ಜಾಲದ ಕಿಂಗ್ ಪಿನ್ ಎಂದು ಪೊಲೀಸರು ತಿಳಿಸಿದ್ದಾರೆ.
1998ರಲ್ಲಿ ತನ್ನ ಕಳುವಿನ ಕೈಚಳಕ ಆರಂಭಿಸಿದ ಈತ ದೇಶಾದ್ಯಂತ 5 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಕಳುವು ಮಾಡಿದ್ದಾನೆ ಎನ್ನಲಾಗಿದೆ.
ಈತನ ಬಳಿಯಿಂದ ಅಕ್ರಮ ಬಂದೂಕುಗಳು ಹಾಗೂ ಮದ್ದುಗುಂಡುಗಳನ್ನು ಸಹ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ಈತನ ಕಳ್ಳತನದ ಲೀಲೆ ಇಷ್ಟಕ್ಕೇ ಮುಗಿಯುವುದಿಲ್ಲ. ಘೇಂಡಾಮೃಗಗಳ ಕೊಂಬುಗಳ ಕಳ್ಳಸಾಗಣೆ, ಕೊಲೆ ಸೇರಿದಂತೆ ಸುಮಾರು 180 ಕ್ರಿಮಿನಲ್ ಪ್ರಕರಣಗಳಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದ.
ಸುರೇಬಾನ್ ಸುತ್ತಮುತ್ತ ಮಳೆಯ ಅಬ್ಬರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ