Latest

ಸಿಬಿಐ ಅಧಿಕಾರಿ ಆತ್ಮಹತ್ಯೆ; ಸುಳ್ಳು ಕೇಸು ದಾಖಲಿಸಲು ಒತ್ತಡ ಆರೋಪ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಸಿಬಿಐ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಿಬಿಐನ ಉಪ ಕಾನೂನು ಸಲಹೆಗಾರ ಜಿತೇಂದ್ರಕುಮಾರ್ ಎಂಬುವವರು ದಕ್ಷಿಣ ಹೊಸದಿಲ್ಲಿಯ ನಿವಾಸದಲ್ಲಿ ಕಳೆದ ಗುರುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

Home add -Advt

ಸುಳ್ಳು ಪ್ರಕರಣ ದಾಖಲಿಸಲು ಹೇರಲಾದ ಒತ್ತಡದ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ದೆಹಲಿ ಉಪಮುಖ್ಯಮಂತ್ರಿ ಮನಿಷ್ ಸಿಸೋಡಿಯಾ ಆರೋಪಿಸಿದ್ದಾರೆ.

ಆಪ್ ನ ಮುಖಂಡರೊಬ್ಬರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಅದನ್ನು ಕಾನೂನುಬದ್ಧವಾಗಿ ಸಮರ್ಥಿಸಲು ಒತ್ತಡ ಹೇರಿದ್ದರಿಂದ ಮನನೊಂದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಅವರು ದೂರಿದ್ದಾರೆ.

ಮದ್ಯದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ಸರ್ಕಾರದ ವಿರುದ್ಧ ಬಿಜೆಪಿ ಬಿಸಿ ಮುಟ್ಟಿಸಿ ‘ಸ್ಟಿಂಗ್ ವಿಡಿಯೋ’ ಬಿಡುಗಡೆ ಮಾಡಿದ ಬೆನ್ನಲ್ಲೇ ಸಿಸೋಡಿಯಾ ಸುದ್ದಿಗೋಷ್ಠಿ ನಡೆಸಿ ಈ ಆರೋಪ ಎಸಗಿದರು.

ಭಾರತದ ಅತಿ ದೊಡ್ಡ ಕಾರುಗಳ್ಳನ ಬಂಧನ: ಈತ ಕದ್ದ ಕಾರುಗಳೆಷ್ಟು ಗೊತ್ತೇ?

Related Articles

Back to top button