Latest

*JDS ಎಂಎಲ್ ಸಿ ಕಾರಿನ ನಂಬರ್ ಬಳಸಿ ಕದ್ದ ಕಾರು ಮಾರಾಟಕ್ಕೆ ಯತ್ನ; ಪ್ರತಿಷ್ಠಿತ ಶೋ ರೂಂ ಮಾಲೀಕ ವಶಕ್ಕೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಎಂಎಲ್ ಸಿ ಕಾರಿನ ನಂಬರ್ ಬಳಸಿ ಕದ್ದ ಕಾರನ್ನು ಮಾರಾಟಕೆ ಇಟ್ಟಿದ್ದ ಪ್ರತಿಷ್ಠಿತ ಶೋ ರೂಂ ಮಾಲೀಕನನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕದ್ದ ಕಾರಿಗೆ ಜೆಡಿಎಸ್ ಎಂಎಲ್ ಸಿ ಭೋಜೇಗೌಡ ಅವರ ಕಾರಿನ ನಂಬರ್ ಬಳಸಿ ಕಾರನ್ನು ಶೋ ರೂಂ ನಲ್ಲಿ ಮಾರಾಟಕ್ಕಿಡಲಾಗಿತ್ತು. ಕೆಪಿಸಿಸಿ ಕಚೇರಿಯ ಬಳಿಯ ಪ್ರತಿಷ್ಠಿತ ಶೋ ರೂಂ ಎದುರು ಎಂಎಲ್ ಸಿ ಭೋಜೇಗೌಡರ ಕಾರು ನಿಂತಿರುವುದನ್ನು ಗಮನಿಸಿದ ಭೋಜೇಗೌಡರ ಪಿಎ ಮಾದೇಶ ಅವರು ಶಾಕ್ ಆಗಿದ್ದಾರೆ.

Home add -Advt

ತಕ್ಷಣ ಶೋ ರೂಂ ಗೆ ಹೋಗಿ ಕಾರಿನ ಬಗ್ಗೆ ವಿಚಾರಿಸಿದಾಗ ಶೋ ರೂಂ ಮಾಲೀಕ ಕಾರು ಮಾರಾಟಕ್ಕಿಟ್ಟಿರುವುದಾಗಿ ತಿಳಿಸಿದ್ದಾರೆ. ಕೂಡಲೇ ಮಾದೇಶ ಅವರು ಹೈಗ್ರೌಂಡ್ಸ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು, ಮಾಲೀಕರನ್ನು ವಿಚರಿಸಿದಾಗ ಕದ್ದ ಕಾರಿನ ನಂಬರ್ ಬದಲಿಸಿ ಕಾರುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ತಿಳಿದುಬಂದಿದೆ. ಶೋ ರೂಂ ಮಾಲೀಕ ಶಹಬಾಜ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

19 ವರ್ಷದ ಯುವತಿ ಮೇಲೆ ಒಂದು ವರ್ಷದಿಂದ ಅತ್ಯಾಚಾರ ನಡೆಸಿದ ಆನ್ ಲೈನ್ ಫ್ರೆಂಡ್

Related Articles

Back to top button