LatestSports

*ಐದನೇ ಟೆಸ್ಟ್ ನಲ್ಲಿ ಭರ್ಜರಿ ಜಯ ಗಳಿಸಿದ ಭಾರತ: ಸರಣಿ ಸಮಬಲ*

ಪ್ರಗತಿವಾಹಿನಿ ಸುದ್ದಿ: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಐದನೇ ಟೆಸ್ಟ್ ಪಂದ್ಯದಲ್ಲಿ ಮೋಹಮ್ಮದ ಶಿರಾಜ್ ಮಾರಕ ದಾಳಿಯಿಂದ ಆಂಗ್ಲರ ವಿರುದ್ಧ ಭಾರತ ಭರ್ಜರಿ ಗೆಲುವು ಸಾಧಿಸಿದೆ. 

ಇಂಗ್ಲೇಡದನಲ್ಲಿ ನಡೆದ ಒಟ್ಟು ಐದು ಪಂದ್ಯಗಳ ಈ ಟೆಸ್ಟ್ ಸರಣಿಯಲ್ಲಿ ಕೊನೆಯ ಪಂದ್ಯ ನಿರ್ಣಾಯಕ ಪಂದ್ಯವಾಗಿತ್ತು. ಉಭಯ ತಂಡಗಳಿಗೂ ಈ ಐದನೆ ಪಂದ್ಯ ಮಹತ್ವದ್ದಾಗಿತ್ತು. ಈ ನಿರ್ಣಾಯಕ ಪಂದ್ಯದಲ್ಲಿ ಭಾರತ ರೋಚಕ ಗೆಲುವು ಸಾಧಿಸಿದ್ದು ಸರಣಿಯಲ್ಲಿ ಸಮಬಲ ಸಾಧಿಸಿದೆ.

ಮೊದಲ ಟೆಸ್ಟ್ ಪಂದ್ಯ ಗೆದ್ದ ಭಾರತ ಎರಡು ಪಂದ್ಯಗಳನ್ನು ಸೋತಿತು. ಒಂದು ಪಂದ್ಯ ಡ್ರಾ ಆಗಿತ್ತು. ಹಾಗಾಗಿ ಈ ಪಂದ್ಯ ಭಾರತ ಗೆಲ್ಲಲೇ ಬೇಕಾಗಿತ್ತು.‌ಪಂದ್ಯ ಡ್ರಾ ಆದರೂ ಕೂಡಾ ಸರಣಿ ಇಂಗ್ಲೆಂಡ್ ಗೆಲ್ಲುತಿತ್ತು.‌ ಐದನೆ ಪಂದ್ಯ ಭಾರತ ಗೆಲ್ಲುವ ಮೂಲಕ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿ 2-2 ಅಂಕಗಳೊಂದಿದೆ ಡ್ರಾ ಆಗಿದೆ. 

ಇಂಗ್ಲೆಂಡ್ ನ ಓವನ್ ಮೈದಾನದಲ್ಲಿ ನಡೆದ 5ನೇ ಟೆಸ್ಟ್ ಪಂದ್ಯದಲ್ಲಿ ಭಾರತ 6 ರನ್ ಗಳ ಅಮೋಘ ಗೆಲುವು ಸಾಧಿಸಿ, ಆಂಗ್ಲರ್ ನೆಲದಲ್ಲಿ ಭಾರತ ಅತ್ಯುತಮ ಪ್ರದರ್ಶನ ನೀಡಿದೆ.‌

Home add -Advt

Related Articles

Back to top button