ಕೆಲವೇ ಹೊತ್ತಿನಲ್ಲಿ ಹೈ ವೋಲ್ಟೇಜ್ ಪಂದ್ಯ: ವಿಶ್ವಾದ್ಯಂತ ಕುತೂಹಲ; ಬೇಕಿತ್ತೇ ಎಂದ ನೆಟ್ಟಿಗರು

ಪ್ರಗತಿವಾಹಿನಿ ಸುದ್ದಿ, ದುಬೈ – ಪ್ರಪಂಚದಾದ್ಯಂತ ಕ್ರಿಕೆಟ್ ಪ್ರಿಯರ ಎದೆಬಡಿತ ಹೆಚ್ಚಿಸುವ ಭಾರತ- ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಇಂದು ಸಾಕ್ಷಿಯಾಗಲಿದೆ.

ಟಿ-೨೦ ವಿಶ್ವ ಕಪ್‌ನ ಭಾರತ- ಪಾಕಿಸ್ತಾನ ನಡುವಿನ ಹಣಾಹಣಿ ಇಂದು ಸಂಜೆ ೭.೩೦ರಿಂದ ದುಬೈ ಸ್ಟೇಡಿಯಂನಲ್ಲಿ ಪ್ರಾರಂಭವಾಗಲಿದೆ.

Home add -Advt

ಟೆಸ್ಟ್ ಕ್ರಿಕೇಟ್ ಉಚ್ಚ್ರಾಯ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಆಶಸ್ ಸರಣಿ ಅತ್ಯಂತ ಹೈ ವೋಲ್ಟೇಜ್ ಪಂದ್ಯ ಎಂದು ಬಿಂಬಿತವಾಗುತ್ತಿತ್ತು. ಆದರೆ ಒನ್ ಡೆ, ಬಳಿಕ ಟಿ-೨೦ ಕ್ರಿಕೇಟ್ ಪಂದ್ಯಗಳು ಹೆಚ್ಚು ಜನಪ್ರಿಯಗೊಂಡಂತೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳು ಕ್ರಿಕೇಟ್ ಪ್ರಿಯರನ್ನು ಅಕ್ಷರಶಃ ಭಾವೋದ್ವೇಗಗೊಳಿಸುತ್ತಿವೆ. ಎರಡೂ ದೇಶದ ನಡುವಿನ ರಾಜಕೀಯ ವೈಮನಸ್ಯ ಸೇರಿದಂತೆ ಹಲವು ಕಾರಣಗಳಿಗಾಗಿ ಈ ಪಂದ್ಯಗಳಿಗೆ ಎಲ್ಲಿಲ್ಲದ ಮಹತ್ವವಿದೆ. ಇಂದೂ ಸಹ ಜಗತ್ತಿನ ಬದ್ಧ ವೈರಿಗಳ ನಡುವಿನ ಪಂದ್ಯವನ್ನು ವೀಕ್ಷಿಸಲು ಪ್ರಪಂಚದಾದ್ಯಂತ ಕ್ರಿಕೆಟ್ ಪ್ರಿಯರು ತುದಿಗಾಲಮೇಲೆ ನಿಂತಿದ್ದಾರೆ.

ಭಾರತದ್ದೇ ಮೇಲುಗೈ

ಒನ್ ಡೆ ವಿಶ್ವ ಕಪ್ ಮತ್ತು ಟಿ-೨೦ ವಿಶ್ವಕಪ್ ಇತಿಹಾಸದಲ್ಲಿ ಭಾರತ -ಪಾಕಿಸ್ತಾನದ ಹಣಾಹಣಿಯಲ್ಲಿ ಈವರೆಗೆ ಭಾರತವೇ ಮೇಲುಗೈ ಸಾಧಿಸುತ್ತ ಬಂದಿದೆ. ೨೦೦೭ರಲ್ಲಿ ನಡೆದ ಮೊದಲ ಟಿ-೨೦ ವಿಶ್ವಕಪ್‌ನಲ್ಲಿ ಭಾರತ ವಿಶ್ವಕಪ್ ಗೆದ್ದಿತ್ತು. ಅಂದಿನಿಂದ ಈವರೆಗೆ ಪಾಕಿಸ್ತಾನದೆದುರು ಟಿ-೨೦ ವಿಶ್ವಕಪ್‌ನಲ್ಲಿ ಭಾರತ ಅಜೇಯವಾಗಿ ಉಳಿದಿದೆ. ಇದು ಪಾಕ್‌ನ ಕ್ರಿಕೇಟ್ ಪ್ರೇಮಿಗಳಿಗೆ ನುಂಗಲಾರದ ತುತ್ತಾಗಿದೆ. ಪ್ರಸ್ತುತ ಭಾನುವಾರ ನಡೆಯುವ ಪಂದ್ಯದಲ್ಲಿ ಭಾರತ ತನ್ನ ಗೆಲುವಿನ ನಾಗಾಲೋಟ ಮುಂದುವರೆಸುವ ಹಂಬಲದಲ್ಲಿದ್ದರೆ ಪಾಕಿಸ್ತಾನ ಸೋಲಿನ ಸರಣಿಯನ್ನು ಮುರಿಯುವ ಕನಸು ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಇಂದಿನ ಪಂದ್ಯ ಮತ್ತಷ್ಟು ರೋಚಕವಾಗುವ ಸಾಧ್ಯತೆ ಹೆಚ್ಚಿದೆ.

ಅಸಮಧಾನದ ನಡುವೆ

ಕಾಶ್ಮೀರದಲ್ಲಿ ಪಾಕಿಸ್ತಾನ ಉಗ್ರಗಾಮಿಗಳಿಗೆ ಕುಮ್ಮಕ್ಕು ನೀಡುತ್ತಿರುವ ಕಾರಣಕ್ಕೆ ಪಾಕ್ ಜೊತೆಗೆ ಕ್ರಿಕೆಟ್ ಪಂದ್ಯ ಬೇಡ ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ. ಹಾಗಾಗಿ ಈ ಪಂದ್ಯದ ಬಗ್ಗೆ ಅನೇಕ ಭಾರತೀಯರಲ್ಲಿ ಅಸಮಧಾನವೂ ಇದೆ.

ಇನ್ನು ೨೦೦೭ರಲ್ಲಿ ವಿಶ್ವ ಕಪ್ ಗೆದ್ದ ತಂಡದ ನಾಯಕ ಧೋನಿ ಈ ಪಂದ್ಯದಲ್ಲಿ ಮೆಂಟರ್ ಆಗಿ ಮತ್ತು ವಿರಾಟ್ ಕೋಹ್ಲಿ ನಾಯಕನಾಗಿರುವ ಹಿನ್ನೆಲೆಯಲ್ಲಿ ಭಾರತದ ತಂಡ ಅತ್ಯಂತ ಸಶಕ್ತವಾಗಿದ್ದು ಪಂದ್ಯ ಗೆಲ್ಲುವ ಫೆವರಿಟ್ ಎನಿಸಿಕೊಂಡಿದೆ.

https://pragati.taskdun.com/bs-sport/former-captain-kapil-dev-had-a-heart-attack-treatment-of-angio-plasty/

Related Articles

Back to top button