ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಸತತ ಎಂಟು ದಶಕಗಳ ಕಾಲ ಭಾರತೀಯ ವಾಯು ಸೇನಾಪಡೆಗೆ ಸೇವೆ ನೀಡಿದ್ದ ಮಿಗ್ -21 ಬೈಸನ್ ಯುದ್ಧ ವಿಮಾನ ಸೇವೆ ಸ್ಥಗಿತಗೊಂಡಿದ್ದು ಇನ್ನು ಮುಂದೆ ಈ ಮಾದರಿ ವಿಮಾನ ಕೇವಲ ಮರೆಯಲಾಗದ ನೆನಪಾಗಿ ಉಳಿಯಲಿದೆ.
ಮಿಗ್- 21 ಬೈಸನ್ ವಿಮಾನಗಳನ್ನು ಮಂಗಳವಾರದಿಂದ ಅಧಿಕೃತವಾಗಿ ಸೇವೆಯಿಂದ ಹಿಂಪಡೆದಿರುವುದಾಗಿ ಭಾರತೀಯ ಸೇನಾಪಡೆ ಹೇಳಿದೆ.
70ರ ದಶಕದಲ್ಲಿ ಎದುರಾಳಿ ಸೇನೆಯ ಹುಟ್ಟಡಗಿಸಿದ್ದ ಭಾರತೀಯ ವಾಯುಪಡೆಯ ಮಿಗ್-21 ಬೈಸನ್ ಯುದ್ಧ ವಿಮಾನಗಳು ಈಗ ಹಳೆಯದಾಗಿದ್ದು ಇವುಗಳ ಜಾಗವನ್ನು ಎಚ್‌ಎಎಲ್ ನಿರ್ಮಿಸಿರುವ ದೇಶೀಯ ಎಲ್‌ಸಿಎ ‘ತೇಜಸ್ ಮಾರ್ಕ್ 1ಎ’ ಆಕ್ರಮಿಸಿದೆ.
1960ರಲ್ಲಿ ಭಾರತೀಯ ವಾಯುಪಡೆ ಸೇವೆ ಆರಂಭಿಸಿದ್ದ ಮಿಗ್ 21 ವಿಮಾನಗಳು 1971ರಲ್ಲಿ ನಡೆದ ಯುದ್ಧದ ವೇಳೆ ಪಾಕಿಸ್ತಾನದ ಹಲವು ನಗರಗಳ ಮೇಲೆ ಬಾಂಬ್ ದಾಳಿ ಮಾಡಿ ಮೂಲಕ ವಿಶ್ವದ ಗಮನ ಸೆಳೆದಿದ್ದವು. ಹಿಂದಿನ ಸೋವಿಯತ್ ಒಕ್ಕೂಟ (Soviet Union)ಮಿಖೋಯೆನ್ ಗುರ್ವಿಚ್ ಕಂಪನಿ 1959ರಲ್ಲಿ ಮೊದಲ ಬಾರಿ ಮಿಗ್ 21 ಬೈಸನ್ ವಿಮಾನಗಳನ್ನು ತಯಾರಿಸಿತ್ತು. ಈವರೆಗೆ ಈ ಮಾದರಿಯ 11,496 ವಿಮಾನಗಳನ್ನು ತಯಾರಿಸಲಾಗಿದ್ದು, ಜಗತ್ತಿನ ನಾನಾ ದೇಶಗಳ ಸೇನಾಪಡೆಗಳಲ್ಲಿ ಬಳಸಲಾಗುತ್ತಿದೆ.
ಭಾರತದಲ್ಲಿ ಮಹಾರಾಷ್ಟ್ರದ ನಾಸಿಕ್‌ನಲ್ಲಿ 840 ವಿಮಾನಗಳನ್ನು ತಯಾರಿಸಲಾಗಿತ್ತು. ಪ್ರಸ್ತುತ 50 ವಿಮಾನಗಳು ಭಾರತೀಯ ವಾಯುಪಡೆಯ ಸೇವೆಯಲ್ಲಿದ್ದವು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ