Latest

*ಸಿಎಂ ಸಿದ್ದರಾಮಯ್ಯ ಆಪ್ತ ಎಂದು ಹೇಳಿಕೊಂಡು DHOಗೆ ವಂಚನೆ*

ಪ್ರಗತಿವಾಹಿನಿ ಸುದ್ದಿ: ಸಿಎಂ ಸಿದ್ದರಾಮಯ್ಯ ಅವರ ಆಪ್ತ ಎಂದು ಹೇಳಿಕೊಂಡು ವ್ಯಕ್ತಿಯೋರ್ವ ಬಾಗಲಕೋಟೆ ಆರೋಗ್ಯಾಧಿಕಾರಿಗೆ 7 ಲಕ್ಷರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ಜಯಶ್ರೀ ವಂಚನೆಗೊಳಗಾದ ಆರೋಗ್ಯಾಧಿಕಾರಿ. ರಾಮಯ್ಯ ವಂಚಕ. 2023ರ ಸೆಪ್ಟೆಂಬರ್ ನಲ್ಲಿ ಬಾಗಲಕೋಟೆ ಜಿಲ್ಲಾ ಆರೋಗ್ಯಾಧಿಕಾರಿ ಹುದ್ದೆಗೆ ಜಿಲ್ಲಾ ಆರೋಗ್ಯಾಧಿಕಾರಿ ಜಯಶ್ರೀ ಹಾಗೂ ಶಾಸಕ ಹೆಚ್ ವೈ ಮೇಟಿ ಅಳಿಯ ರಾಜಕುಮಾರ್ ಯರಗಲ್ ನಡುವೆ ಪೈಪೋಟಿ ನಡೆದಿತ್ತು.

ಏಕಾಏಕಿ ರಾಜಕುಮಾರ್ ಯರಗಲ್ ಜಯಶ್ರೀ ಅವರ ಕುರ್ಚಿಯಲ್ಲಿ ಒಂದುದಿನ ಕುಳಿತಿದ್ದರಂತೆ ಅಂದು ಜಯಶ್ರೀ ತಮ್ಮ ಕುರ್ಚಿಯಿಂದ ಏಳುವಂತೆ ಸೂಚಿಸಿದಾಗ ಇಂದಿನಿಂದ ತಾನೇ ಜಿಲ್ಲಾ ಆರೋಗ್ಯಾಧಿಕಾರಿ ಎಂದು ರಾಜಕುಮಾರ್ ತಿಳಿಸಿದ್ದರಂತೆ. ತಮ್ಮ ವರ್ಗಾವಣೆಗೆ ತಡೆ ಕೋರಿ ಜಯಶ್ರೀ, ಬೆಂಗಳೂರಿಗೆ ಅಧಿಕಾರಿಗಳ ಭೇಟಿಗೆ ಬಂದಿದ್ದರಂತೆ. ಅಂದು ವಿಧಾನಸೌಧದಲ್ಲಿ ರಾಮಯ್ಯ ಎಂಬಾತ, ತಾನು ಸಿಎಂ ಸಿದ್ದರಾಮಯ್ಯ ಆಪ್ತ. ಕೆಎ ಎಸ್ ಅಧಿಕಾರಿ ಎಂದು ಹೇಳಿಕೊಂಡು ಪರಿಚಯಿಸಿಕೊಂಡಿದ್ದನಂತೆ.

Home add -Advt

ನಿಮ್ಮ ಸಮಸ್ಯೆ ಬಗೆಹರಿಸುತ್ತೇನೆ ಎಂದು ಆರಂಭದಲ್ಲಿ 50 ಸಾವಿರ ಹಣ ಪದೆದಿದ್ದ ರಾಮಯ್ಯ, ಬಳಿಕ ಹಂತ ಹಂತವಾಗಿ 7 ಲಕ್ಷ ಹಣ ಪಡೆದು ವಂಚಸಿದ್ದಾನೆ ಎನ್ನಲಾಗಿದೆ. ಇದೀಗ ಈ ಬಗ್ಗೆ ಜಯಶ್ರೀ ಬೆಂಗಳೂರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ.


Related Articles

Back to top button