
ಪ್ರಗತಿವಾಹಿನಿ ಸುದ್ದಿ: ಅಮೇರಿಕಾದಲ್ಲಿ ಭಾರತ ಮೂಲದ ತಂದೆ ಮಗಳ ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮ 24 ವರ್ಷದ ಯುವತಿ ಊರ್ಮಿ ಹಾಗೂ ಆಕೆಯ ತಂದೆ ಪ್ರದೀಪ್ ಪಟೇಲ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ವ್ಯಕ್ತಿಯೊಬ್ಬ ಮದ್ಯ ಖರೀದಿಸಲು ಅಂಗಡಿಗೆ ಬಂದಿದ್ದನು. ಅಂಗಡಿ ರಾತ್ರಿ ಮುಚ್ಚಿರುವುದನ್ನು ತಿಳಿದು ಕೋಪಗೊಂಡ ಆರೋಪಿ ಇಬ್ಬರ ಮೇಲೆ ಗುಂಡು ಹಾರಿಸಿದ್ದಾನೆ. ಇನ್ನು ಗುಂಡು ಹಾರಿಸಿ ತಂದೆ ಮಗಳನ್ನ ಹತ್ಯೆ ಮಾಡಿದ ಆರೋಪಿದಡಿ ಜಾರ್ಜ್ ಫ್ರೀಜಿಯರ್ ಡೆವೊನ್ ವಾರ್ಟನ್ (44) ಎಂಬಾತನನ್ನು ಬಂಧಿಸಲಾಗಿದೆ.
ಪ್ರದೀಪ್ ಪಟೇಲ್, ಅವರ ಪತ್ನಿ ಹಂಸಾಬೆನ್ ಮತ್ತು ಮಗಳು ಊರ್ಮಿ ಗುಜರಾತ್‌ನ ಮೆಕ್ಸಾನಾ ಜಿಲ್ಲೆಯವರಾಗಿದ್ದು, ಆರು ವರ್ಷಗಳ ಹಿಂದೆ ಅಮೆರಿಕಕ್ಕೆ ತೆರಳಿ ಸಂಬಂಧಿ ಪರೇಶ್ ಪಟೇಲ್ ಒಡೆತನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು.