ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಭಾರತೀಯ ರೈಲ್ವೇಸ್ ನ ಪ್ರಯಾಣಿಕರ ಕಾಯ್ದಿರಿಸುವಿಕೆ ವ್ಯವಸ್ಥೆಯು (ಪಿಆರ್ ಎಸ್) ಮುಂದಿನ 7 ದಿನಗಳ ಕಾಲ ಕಡಿಮೆ ವಹಿವಾಟು ಸಮಯವಾದ ರಾತ್ರಿಯ ಸಮಯದಲ್ಲಿ 6 ಗಂಟೆಗಳ ಕಾಲ ಲಭ್ಯವಿರುವುದಿಲ್ಲ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ನವೆಂಬರ್ 21ರವರೆಗೆ ಪಿಆರ್ ಎಸ್ ರಾತ್ರಿ ಸಮಯದಲ್ಲಿ ಲಭ್ಯವಿರುವುದಿಲ್ಲ. ಪ್ರಯಾಣಿಕರ ಸೇವೆಗಳನ್ನು ಹಂತಹಂತವಾಗಿ ಕೋವಿಡ್ ಪೂರ್ವದ ಮಟ್ಟಕ್ಕೆ ಸಹಜ ಸ್ಥಿತಿಗೆ ತರುವ ರೈಲ್ವೆ ಪ್ರಯತ್ನಗಳ ಭಾಗವಾಗಿ ಸಿಸ್ಟಮ್ ಡೇಟಾವನ್ನು ನವೀಕರಿಸಲು ಮತ್ತು ಹೊಸ ರೈಲು ಸಂಖ್ಯೆಗಳ ನವೀಕರಣ ಸಕ್ರಿಯಗೊಳಿಸಲು ಇದನ್ನು ಮಾಡಲಾಗುತ್ತಿದೆ.
ರಾತ್ರಿ ವೇಳೆ ಕಡಿಮೆ ವ್ಯವಹಾರ ನಡೆಸುವ ಸಮಯದಲ್ಲಿ 6 ಗಂಟೆಗಳ ಕಾಲ ಮುಂದಿನ 7 ದಿನಗಳ ವರೆಗೆ ಸ್ಥಗಿತಗೊಳಿಸಲಾಗುತ್ತದೆ. ಟಿಕೆಟ್ ಕಾಯ್ದಿರಿಸುವಿಕೆ, ಕರೆಂಟ್ ಬುಕಿಂಗ್, ರದ್ದತಿ ಮತ್ತು ವಿಚಾರಣೆ ಸೇವೆಗಳಂತಹ PRSವ್ಯವಸ್ಥೆ ಬಳಸಿಕೊಳ್ಳುವ ಸೇವೆಗಳು 23:30 ಗಂಟೆಗಳಿಂದ 5:30 ಗಂಟೆಗಳವರೆಗೆ ಲಭ್ಯವಿರುವುದಿಲ್ಲ. ಸಿಸ್ಟಮ್ ಡೇಟಾ ನವೀಕರಣ ಹಾಗೂ ಹೊಸ ರೈಲು ಸಂಖ್ಯೆಗಳನ್ನು ನವೀಕರಿಸಲು ಅನುವು ಮಾಡಿಕೊಡುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ