Latest

ದತ್ತ ಭಕ್ತರ ಮೇಲೆ ಜಿಹಾದಿಗಳ ಆಕ್ರಮಣಕ್ಕೆ ಖಂಡನೆ; ಸಲ್ಮಾನ್‌ ಖುರ್ಷಿದ ವಿವಾದಿತ ಪುಸ್ತಕ ನಿಷೇಧಕ್ಕೆ ಆಗ್ರಹ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹಿಂದೂ ಜನಜಾಗೃತಿ ಸಮಿತಿ ಮತ್ತು ಶ್ರೀರಾಮ ಸೇನೆಯ ವತಿಯಿಂದ ಕೋಲಾರದಲ್ಲಿ ದತ್ತ ಭಕ್ತಾದಿಗಳ ಮೇಲೆ ಮತಾಂಧರ ಆಕ್ರಮಣ ಖಂಡಿಸಿ ಮತ್ತು ಸಲ್ಮಾನ್ ಖುರ್ಷಿದ್ ಇವರು ಹಿಂದೂತ್ವವನ್ನು ಇಸ್ಲಾಮಿಕ್ ಭಯೋತ್ಪಾದನೆಗೆ ಹೋಲಿಕೆ ಮಾಡಿದ ವಿವಾಧಿತ ಪುಸ್ತಕ ನಿಷೇಧ ಮಾಡಲು ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಇವರಿಗೆ ಮನವಿಯನ್ನು ಬೆಂಗಳೂರು ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ನೀಡಲಾಯಿತು. ಮನವಿಯನ್ನು ಎಡಿಸಿ ಅನಿತಾಲಕ್ಷ್ಮೀ ಅವರು ಸ್ವೀಕಾರ ಮಾಡಿದರು.

ಮನವಿಯಲ್ಲಿ ಕೋಲಾರದಲ್ಲಿ ದತ್ತ ಭಕ್ತಾದಿಗಳ ಮೇಲೆ ನೂರಾರು ಮತಾಂಧರು ನಡೆಸಿದ ಮಾರಣಾಂತಿಕ ಹಲ್ಲೆ ಒಂದು ವ್ಯವಸ್ಥಿತ ಷಡ್ಯಂತ್ರ್ಯ ವಾಗಿದೆ. ಗೋದ್ರಾ ಮಾದರಿಯಲ್ಲಿ ದತ್ತ ಭಕ್ತರ ನರಮೇಧ ಮಾಡುವ ಕುತಂತ್ರವಾಗಿತ್ತು. ಹಾಗಾಗಿ ಎಲ್ಲಾ ಅಪರಾಧಿಗಳ ಮೇಲೆ ಕೂಡಲೇ ಕಠಿಣ ಕ್ರಮವನ್ನು ಜರುಗಿಸಬೇಕು ಎಂದು ಒತ್ತಾಯಿಸಲಾಯಿತು.

Home add -Advt

ಅಲ್ಲದೇ ಸಲ್ಮಾನ್ ಖುರ್ಷಿದ್ ಇವರಿಗೆ ನಿಜವಾಗಿಯೂ ಹಿಂದೂ ಧರ್ಮದ ಮೇಲೆ ಪ್ರೀತಿ ಇದ್ದರೆ, ಅವರು ತಮ್ಮ ಪುಸ್ತಕವನ್ನು ಹಿಂಪಡೆಯಬೇಕು ಮತ್ತು ಹಿಂದೂ ಸಮಾಜದ ಬಳಿ ಕ್ಷಮೆ ಕೇಳಬೇಕು. ಭಾರತದಲ್ಲಿ ಡಾ-ವಿನ್ಸಿ ಕೋಡ್, ಸೆಟಾನಿಕ್ ವರ್ಸಸ್ ಈ ಇತರ ಧರ್ಮದವರ ನಿಷೇಧಿಸಬಹುದಾದರೆ ಸಲ್ಮಾನ್ ಖುರ್ಷಿದ್ ಅವರ ಪುಸ್ತಕ ‘ಸನ್‌ರೈಸ್ ಓವರ್ ಅಯೋಧ್ಯಾ : ನೇಷನ್‌ಹುಡ್ ಇನ್ ಅವರ್ ಟೈಮ್ಸ್’ ಅನ್ನು ಸಹ ನಿಷೇಧಿಸಬೇಕೆಂದು ಆಗ್ರಹ ಮಾಡಲಾಯಿತು.

ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ನಾ.ರಾ ಜಯಂತ, ಶ್ರೀರಾಮ‌ಸೇನೆಯ ಬೆಂಗಳೂರು ಅದ್ಯಕ್ಷ ಶ್ರೀ ಚಂದ್ರಶೇಖರ್, ಸುಂದ್ರೇಶ, ಅಮರ್, ಹಿಂದೂತ್ವವಾದಿ ಗುರುಪ್ರಸಾದ ಮುಂತಾದವರು ಉಪಸ್ಥಿತರಿದ್ದರು.
ಬಿಟ್ ಕಾಯಿನ್ ಬಡಿದಾಟ; ಕಾಂಗ್ರೆಸ್ ವಿರುದ್ಧ ಆರ್.ಅಶೋಕ್ ವಾಗ್ದಾಳಿ

Related Articles

Back to top button