
ಪ್ರಗತಿವಾಹಿನಿ ಸುದ್ದಿ: ಆಸ್ಟ್ರೇಲಿಯಾದಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಭಾರತದ ಟೆಕ್ಕಿ 8 ತಿಂಗಳ ಗರ್ಭಿಣಿ ಸಾವನ್ನಪ್ಪಿದ್ದಾರೆ.
ಸಮನ್ವಿತಾ ಧಾರಕೇಶ್ವರ್ (33) ಮೃತ ಮಹಿಳೆ. ಸಮನ್ವಿತಾ ತಮ್ಮ ಪತಿ ಹಾಗೂ ಮೂರು ವರ್ಷದ ಮಗನೊಂದಿಗೆ ಜರ್ಜ್ ಸೇಂಟ್ ಇನ್ ಹಾರ್ನಸ್ಬಿ ಬಳಿ ರಸ್ತೆ ದಾಟುತ್ತಿದ್ದ ವೇಳೆ ಅಪಘಾತಕ್ಕೀಡಾಗಿದ್ದಾರೆ.
ರಸ್ತೆ ದಾಟುತ್ತಿದ್ದ ಕುಟುಂಬಕ್ಕೆ ಕಿಯಾ ಕಾರು ಡಿಕ್ಕಿಯಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಸಮನ್ವಿತಾ ಆಸ್ಪತ್ರೆಗೆ ದಾಖಲಾಗಿದ್ದರು. ೮ ತಿಂಗಳ ಗರ್ಭಿಣಿಯಾಗಿದ್ದ ಅವರಿಗೆ ಅಪಘಾತದಲ್ಲಿ ಹೊಟ್ಟೆಯಲ್ಲಿಯೇ ಮಗು ಸಾವನ್ನಪ್ಪಿತ್ತು. ಚಿಕಿತ್ಸೆ ಫಲಿಸದೇ ಸಮನ್ವಿತಾ ಕೂಡ ಮೃತಪಟ್ಟಿದ್ದಾರೆ.
ಸಮನ್ವಿತಾ ಅಲಸ್ಕೋ ಯುನಿಫಾರ್ಮ್ಸ್ ಕಂಪನಿಯಲ್ಲಿ ಐಟಿ ಸಿಸ್ಟಂ ಅನಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು.



