
ಪ್ರಗತಿವಾಹಿನಿ ಸುದ್ದಿ: ಫ್ರಾನ್ಸ್ ನ ರಾಜಧಾನಿ ಪ್ಯಾರಿಸ್‌ನಲ್ಲಿ ಚೇತನರಿಗೆ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಗೇಮ್ಸ್‌ನಲ್ಲಿ ಭಾರತ ಒಂದು ಚಿನ್ನ ಎರಡು ಬೆಳ್ಳಿ, ಹಾಗೂ ನಾಲ್ಕು ಕಂಚಿನ ಪದಕಗಳೊಂದಿಗೆ ಒಟ್ಟು 7 ಪದಕಗಳನ್ನು ಬಾಚಿಕೊಳ್ಳುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ..
ಇದೀಗ ಈ ಪಟ್ಟಿಗೆ ಮತ್ತೆರಡು ಪದಕಗಳು ಲಭಿಸಿದೆ. ಒಲಿಂಪಿಕ್ಸ್ ನ ನಾಲ್ಕನೇ ದಿನವನ ಸೆಪ್ಟೆಂಬರ್ 1 ರಂದು ಭಾರತ ತನ್ನ ಪದಕದ ಬೇಟೆಯನ್ನು ಮುಂದುವರೆಸಿದ್ದು, ಕ್ರೀಡಾಪಟುಗಳು ತಮ್ಮ ಶಕ್ತಿ ಸಾಮರ್ಥ್ಯ ಪ್ರದರ್ಶಿಸಿ ಭಾರತಕ್ಕೆ 7 ನೇ ಪದಕವನ್ನು ಗೆದ್ದಿದ್ದಾರೆ.
ಮಹಿಳೆಯ ವಿಭಾಗದ 200 ಮೀಟರ್ ಓಟದ (ಟಿ35) ಸ್ಪರ್ಧೆಯಲ್ಲಿ ಅಥೀಟ್ ಪ್ರೀತಿ ಪಾಲ್ 30.01 ಸೆಕೆಂಡುಗಳಲ್ಲಿ ಓಟವನ್ನು ಪೂರ್ಣಗೊಳಿಸುವ ಮೂಲಕ ಕಂಚಿನ ಪದಕಕ್ಕೆ ಮುತ್ತಿಕ್ಕುವ ಹೊಸ ದಾಖಲೆಯನ್ನು ಬರೆದಿದ್ದಾರೆ.
ಹಾಲಿ ಪ್ಯಾರಾ ಒಲಿಂಪಿಕ್ಸ್ ನಲ್ಲಿ 23 ವರ್ಷದ ಪ್ರೀತಿ ಪಾಲ್ ಕಳೆದ ಶುಕ್ರವಾರ ಮಹಿಳೆಯ ವಿಭಾಗದ 100 ಮೀಟರ್ (ಟಿ35) ವಿಭಾಗದಲ್ಲೂ ಕಂಚಿನ ಪದಕ ಗೆದ್ದಿದ್ದರು.
ಇದೀಗ 200 ಮೀಟರ್ ಓಟದಲ್ಲಿ ಮತ್ತೊಂದು ಪದಕ ಗೆಲ್ಲುವ ಮೂಲಕ ಪ್ರೀತಿ, ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಎರಡು ಪದಕ ಗೆದ್ದ ಭಾರತ ಮೊದಲ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನು ಪುರುಷರ ಹೈಜಂಪ್ ಟಿ-47 ವಿಭಾಗದಲ್ಲಿ ನಿಶಾದ್ ಕುಮಾರ್ ಬರೋಬ್ಬರಿ 2.04 ಮೀಟರ್ ನಷ್ಟು ಎತ್ತರ ಜಿಗಿಯುವ ಮೂಲಕ ಬೆಳ್ಳಿ ಪದಕಕ್ಕೆ ಭಾಜನರಾದರು.
ಪ್ರಧಾನಿ ನರೇಂದ್ರ ಮೋದಿ ಈ ಕುರಿತು ಟ್ವಿಟ್ ಮಾಡಿ ಪದಕ ವಿಜೇತರನ್ನು ಅಭಿನಂದಿಸಿದ್ದಾರೆ. ಜೊತೆಗೆ ಪ್ರೀತಿ ಪಾಲ್ ದೇಶದ ಎಲ್ಲಾ ಜನತೆಗೆ ಸ್ಪೂರ್ತಿದಾಯಕ ಯುವತಿಯಾಗಿದ್ದಾರೆ. ಕ್ರೀಡೆಯೊಂದಿಗೆ ಅವರ ಬಾಂಧವ್ಯ ಎಲ್ಲರಿಗೂ ಸಹ ಸ್ಪೂರ್ತಿ ನೀಡುವಂತಿದೆ ಎಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ