Latest

ವಿಶೇಷ ಚೇತನ ಮಗುವಿಗೆ ವಿಮಾನ ಏರಲು ಬಿಡದ ಇಂಡಿಗೋ ಸಿಬ್ಬಂದಿ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ವಿಶೇಷ ಚೇತನ ಮಗು ವಿಮಾನ ಹತ್ತಲು ಬಿಡದ ಇಂಡಿಗೋ ವಿಮಾನಯಾನ ಸಂಸ್ಥೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ವೀಕೆಂಡ್ ಸಂಭ್ರಮಕ್ಕಾಗಿ ಮಗು ಕುಟುಂಬದೊಂದಿಗೆ ಬೇರೆ ಊರಿಗೆ ತೆರಳಬೇಕಿತ್ತು, ಆದರೆ ರಾಂಚಿ ವಿಮಾನ ನಿಲ್ದಾಣದಲ್ಲಿ ವಿಶೇಷ ಚೇತನ ಮಗುವಿಗೆ ಇಂಡಿಗೋ ವಿಮಾನ ಹತ್ತಲು ಬಿಟ್ಟಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ.

ನಾಗರಿಕ ವಿಮಾನಯಾನ ನಿರ್ದೇಶನಾಲಯದ ಪ್ರಧಾನ ನಿರ್ದೇಶಕರು ಈ ಬಗ್ಗೆ ಸ್ಪಷ್ಟನೆ ಕೇಳಿದ್ದು, ಇದಕ್ಕೆ ಉತ್ತರಿಸಿರುವ ಇಂಡಿಗೋ ಸಂಸ್ಥೆ, ಈ ಮಗು ಇತರ ಪ್ರಯಾಣಿಕರ ಸುರಕ್ಷತೆಗೆ ಆತಂಕ ಉಟುಮಾಡಿತ್ತು. ಪ್ರಯಾಣಿಕರ ಹಿತದೃಷ್ಟಿಯಿಂದ ವಿಶೇಷ ಚೇತನ ಮಗುವಿಗೆ ವಿಮಾನ ಏರಲು ಅವಕಾಶ ನಿರಾಕರಿಸಲಾಯಿತು. ಮಗು ತುಂಬಾ ಹೆದರಿತ್ತಿ. ಸಮಾಧಾನಪಡಿಸಲು ಕೊನೆಕ್ಷಣದವರೆಗೂ ಸಿಬ್ಬಂದಿಗಳು ಪ್ರಯತ್ನಿಸಿದರು ಆದರೆ ಸಾಧ್ಯವಾಗಲಿಲ್ಲ. ಎಲ್ಲರನ್ನೂ ಒಳಗೊಳ್ಳುವ ರೀತಿಯ ನಡವಳಿಕೆಯ ಧ್ಯೇಯವನ್ನು ನಮ್ಮ ಸಂಸ್ಥೆಹೊಂದಿದೆ. ಅದು ನಮಗೆ ಹೆಮ್ಮೆಯೂ ಹೌದು ಎಂದು ಸಿಬ್ಬಂದಿಗಳ ಕ್ರಮವನ್ನು ಸಮರ್ಥಿಸಿಕೊಂಡಿದೆ.

ವಿಮಾನಯಾನ ಸಂಸ್ಥೆಯ ನಡೆ ಬಗ್ಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅಸಮಾಧಾನ ವ್ಯಕ್ತಪಡಿಸಿದ್ದು, ಯಾವುದೇ ಒಬ್ಬ ಮನುಷ್ಯ ಇಂತಹ ಸಂದರ್ಭ, ಪರಿಸ್ಥಿತಿ ಎದುರಿಸಬಾರದು. ಈ ಬಗ್ಗೆ ನಾನೇ ಖುದ್ದು ವಿಚಾರಣೆ ನಡೆಸುತ್ತೇನೆ. ಬಳಿಕ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ಬಿಜೆಪಿ ಮುಖಂಡನಿಂದ ವಂಚನೆ; ಉದ್ಯಮಿ ಆತ್ಮಹತ್ಯೆಗೆ ಶರಣು

Home add -Advt

Related Articles

Back to top button