Cancer Hospital 2
Bottom Add. 3

*ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿದ್ದ ಇಂಡಿಗೋ ವಿಮಾನ ಬೆಂಗಳೂರಿಗೆ ವಾಪಾಸ್*

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳಿದ್ದ ಇಂಡಿಗೋ ವಿಮಾನ ಹವಾಮಾನ ವೈಪರಿತ್ಯದಿಂದಾಗಿ ಮತ್ತೆ ಬೆಂಗಳೂರು ಏರ್ ಪೋರ್ಟ್ ಗೆ ವಾಪಾಸ್ ಆದ ಘಟನೆ ನಡೆದಿದೆ.

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದು ಮುಂಜಾನೆ 5:50ಕ್ಕೆ ಹುಬ್ಬಳ್ಳಿಗೆ ಹೊರಟಿದ್ದ 6E7227 ಇಂಡಿಗೋ ವಿಮಾನ ಮೋಡಕವಿದ ವಾತಾವರಣ, ಮಂಜಿನಿಂದಾಗಿ ಹುಬ್ಬಳ್ಳಿ ಏರ್ ಪೋರ್ಟ್ ನಲ್ಲಿ ಲ್ಯಾಂಡ್ ಮಾಡಲಾಗದೇ ಮತ್ತೆ ವಾಪಸ್ ಬೆಂಗಳೂರು ಕೆಐಎ ಗೆ ಬಂದಿದೆ.

ಇದರಿಂದಾಗಿ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿ ತೆರಳಿದ್ದ ಪ್ರಯಾಣಿಕರು ಪರದಾಟ ನಡೆಸುವಂತಾಗಿದೆ ಎಂದು ತಿಳಿದುಬಂದಿದೆ. ಮೋಡಕವಿದ ವಾತಾವರಣ ಅಥವಾ ಹವಾಮಾನ ವೈಪರಿತ್ಯದಂತಹ ಸಂದರ್ಭದಲ್ಲಿ ವಿಮಾನವನ್ನು ಲ್ಯಾಂಡ್ ಮಾಡುವುದು ಕಷ್ಟಸಾಧ್ಯ ಈ ಹಿನ್ನೆಲೆಯಲ್ಲಿ ವಿಮಾನ ಬೆಂಗಳೂರಿಗೆ ರಿಟರ್ನ್ ಆಗಿದೆ. ಇತ್ತೀಚೆಗೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ವಿಮಾನಕ್ಕೂ ಇಂತದ್ದೇ ಸನ್ನಿವೇಶ ಎದುರಾದ ಹಿನ್ನಲೆಯಲ್ಲಿ ಶಿವಮೊಗ್ಗದಲ್ಲಿ ಇಳಿಯದೇ ಬೆಂಗಳೂರಿಗೆ ವಾಪಾಸ್ ಆಗಿತ್ತು.


Bottom Add3
Bottom Ad 2

You cannot copy content of this page