Wanted Tailor2
Cancer Hospital 2
Bottom Add. 3

ವಿವಿಧ ಪ್ರಮುಖ ಸುದ್ದಿಗಳು


ಬೀದಿ ಬದಿ ಮಕ್ಕಳ ರಕ್ಷಣಾ ಕಾರ್ಯಚರಣೆ
ಬೆಳಗಾವಿ
: ಬೆಳಗಾವಿ ನಗರ ಹಾಗೂ ಜಿಲ್ಲಾ ವ್ಯಾಪ್ತಿಯ ಮಕ್ಕಳನ್ನು ಬಾರ್ ಮತ್ತು ರೆಸ್ಟೊರೆಂಟ್, ಗ್ಯಾರೆಜ್, ಹೊಟೇಲ್ ಗಳು, ಧಾಬಾಗಳು ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ನಿಯೊಜಿಸಿದ್ದು ಕಂಡು ಬಂದಲ್ಲಿ ಅಂತಹ ಮಾಲಿಕರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಗುರುವಾರ (ಅ.೧೨) ಬೀದಿ ಬದಿ ಮಕ್ಕಳ (ಆಪರೇಷನ ಮುಸ್ಕಾನ್) ರಕ್ಷಣಾ ಕಾರ್ಯಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತೇಶ ಭಜಂತ್ರಿ ಅವರು ಜಿಲ್ಲಾಧಿಕಾರಿಗಳವರ ಮಾರ್ಗದರ್ಶನದಲ್ಲಿ ಜಿಲ್ಲೆಯ ವಿವಿಧ ನಗರಗಳಲ್ಲಿ ಮಕ್ಕಳನ್ನು ಬಾರ್ ಮತ್ತು ರೆಸ್ಟೊರೆಂಟ್, ಗ್ಯಾರೆಜ್, ಹೊಟೇಲ್ ಗಳು, ಧಾಬಾಗಳು, ಬೀದಿ ಬದಿ ವ್ಯಾಪಾರದಲ್ಲಿ ತೊಡಗಿದ ಮಕ್ಕಳು, ಬೀಕ್ಷಾಟನೆಯಲ್ಲಿ ತೊಡಗಿದ ಮಕ್ಕಳು ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಮಕ್ಕಳನ್ನು ರಕ್ಷಣೆ ಮಾಡಿ ಸೂಕ್ತ ಶಿಕ್ಷಣ ನೀಡಿ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದು ಹೇಳಿದರು.
ಈ ಕಾರ್ಯಾಚರಣೆಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಹಾಗೂ ಕಾರ್ಮಿಕ ಕಲ್ಯಾಣ ಇಲಾಖೆ, ಪೋಲಿಸ್ ಇಲಾಖೆ, ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆ, ಶಿಕ್ಷಣ ಇಲಾಖೆ, ಅಬಕಾರಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಯೋಜನಾ ನಿರಾಶ್ರಿತರ ಪುನರವಸತಿ ಕೇಂದ್ರ ಮಚ್ಚೆ, ಸ್ಪಂದನಾ ಸೇವಾ ಸಂಸ್ಥೆ, ಮಹಿಳಾ ಕಲ್ಯಾಣ ಸಂಸ್ಥೆ ಇವರುಗಳ ಸಹಯೊಗದೊಂದಿಗೆ ಕಾರ್ಯಾಚರಣೆ ನಡೆಸಲಾಯಿತು.
ನಗರದ ಗಾಂಧಿನಗರ, ಹೊಸ ತರಕಾರಿ ಮಾರುಕಟ್ಟೆ, ಕೇಂದ್ರ ಬಸ್ ನಿಲ್ದಾಣ, ಪೋರ್ಟ ರೋಡ್, ಶನಿ ಮಂದಿರ, ಖಡೇ ಬಜಾರ , ಕಂಬಳಿ ಕೂಟ, ಮಾರುತಿ ಗಲ್ಲಿ, ಬೋಗಾರವೇಸ್, ಸಮಾದೇವಿ ಗಲ್ಲಿ, ಕಾಕತಿವೇಸ್, ಚನ್ನಮ್ಮ ಸರ್ಕಲ್, ರಾಮದೇವ ಹೋಟೆಲ, ಕೆ.ಎಲ್.ಇ. ಸದಾಶಿವ ನಗರ, ನೆಹರು ನಗರ, ಎ.ಪಿ.ಎಂ.ಸಿ.ರೊಡ್, ಹನುಮಾನ ನಗರ, ಹಿಂಡಲಗಾ, ಗಣಪತಿ ಕ್ರಾಸ್, ರೇಲ್ವೆ ನಿಲ್ದಾಣ, ನಗರದ ಮೊದಲಾದ ಪ್ರದೇಶಗಳಲ್ಲಿ ಚಿಂದಿ ಆಯುತ್ತಿರುವ, ಶಿಕ್ಷಣ ವಂಚಿತ ಗುಡಿಸಲುಗಳಲ್ಲಿರುವ ಬಾಲ ಭಿಕ್ಷುಕರು, ಬಾಲಕಾರ್ಮಿಕರು, ವ್ಯಾಪಾರದಲ್ಲಿ ತೊಡಗಿರುವ ಮಕ್ಕಳ ಸೇರಿ ಬೆಳಗಾವಿ ನಗರದಲ್ಲಿ ಒಟ್ಟು ೪೫ ಮಕ್ಕಳನ್ನು ಕ್ಷೀಪ್ರ ಕಾರ್ಯಾಚರಣೆಯ ಮೂಲಕ ರಕ್ಷಣೆ ಮಾಡಿ ಎಲ್ಲ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಯಿತು.
ಅಂತಹ ಮಕ್ಕಳ ಪಾಲಕರಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ, ಬಾಲಕಾರ್ಮಿಕ ನಿಷೇದ ಕಾಯ್ದೆ, ಬಾಲ್ಯವಿವಾಹ , ಪೋಕ್ಸೋ ಕಾಯ್ದೆ, ಬಾಲನ್ಯಾಯ (ಮಕ್ಕಳ ರಕ್ಷಣೆ ಮತ್ತು ಪೋಷಣೆ) ಕಾಯ್ದೆಗಳ ಬಗ್ಗೆ ಅರಿವು ಮೂಡಿಸಿ ಅಗತ್ಯ ಕ್ರಮ ವಹಿಸಲಾಯಿತು.
ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಮಹಾಂತೇಶ ಭಜಂತ್ರಿ, ಹಿರಿಯ ಕಾರ್ಮಿಕ ನಿರಿಕ್ಷಕರಾದ ಮಂಜುನಾಥ, ಸಂಜೀವ ಬೋಸಲೆ, ರಮೇಶ ಕೆಸರೂರ, ರಾಜೇಶ ಅಸ್ನೋಟಕರ, ಎಮ್. ಎಸ್, ಜೋಗೂರ ಕಾರ್ಮಿಕ ಅಧಿಕಾರಿ, ಕುಮಾರಿ ಜ್ಯೋತಿ ಕಾಂತೆ, ಯೋಜನಾ ನಿರ್ದೇಶಕರು, ಬಾಲಕಾರ್ಮಿಕ ಶಾಖೆ, ಡಾ. ರಮೇಶ, ದುಂಡಗಿ, ತಾಲೂಕಾ ಆರೋಗ್ಯಧಿಕಾರಿಗಳು, ಆಯ್, ಡಿ, ಹಿರೇಮಠ, ರೂಪಾ ಶಿರೋಳ, ಅಬಕಾರಿ ಇಲಾಖೆ, ಮಕ್ಕಳ ಸಹಾಯವಾಣಿಯ ಮಲ್ಲೇಶ ಕುಂದರಗಿ, ಮಹೇಶ ಕುರವತ್ತಿಮಠ ಎ,ಎಸ್,ಆಯ್, ಮಹಿಳಾ ಪೋಲಿಸ್ ಠಾಣೆ ಬೆಳಗಾವಿ, ಎಫ್. ಬಿ. ಮುನಸಿ, ಪಿ.ಎಸ್.ಆಯ್. ಮಹಿಳಾ ಪೋಲಿಸ್ ಠಾಣೆ ಬೆಳಗಾವಿ ನಗರ, ಆರ್. ಬಿ. ಹೊಸಳ್ಳಿ, ಅಬಕಾರಿ ನಿರೀಕ್ಷಕರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು, ಮೇಲ್ವಿಚಾರಕಿಯರು, ಶಿಶು ಅಭಿವೃದ್ದಿ ಯೋಜನೆ, ಹಾಗೂ ಮತ್ತಿತರು ಉಪಸ್ಥಿತರಿದ್ದರು,ಮೋಟರ್ ರೀವೈಂಡಿಂಗ್ ೩೦ ದಿನಗಳ ತರಬೇತಿ

ಬೆಳಗಾವಿ : ಬೆಳಗಾವಿಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ವತಿಯಿಚಿದ ನಗರದ ಗ್ರಾಮೀಣ ಪ್ರದೇಶದ ಯುವಕರಿಗೆ ಮತ್ತು ನಿರುದ್ಯೋಗಿಗಳಿಗೆ ಮೋಟರ ರೀವೈಂಡಿಂಗ್ ಪಂಪಸೆಟ್ ರೀಪೆರಿಯ ೩೦ ದಿನಗಳ ತರಬೇತಿ ನೀಡಲಾಗುವುದು.
ಅರ್ಹತೆಗಳು: ೧೮ ರಿಂದ ೪೫ ವಯಸ್ಸಿನವರಾಗಿರಬೇಕು, ಗ್ರಾಮೀಣ ಪ್ರದೇಶದವರಾಗಿರಬೇಕು ಹಾಗೂ ಃPಐ ಕಾರ್ಡ ಹೊಂದಿರಬೇಕು.
ದಾಖಲಾತಿಗಳು : ಃPಐ ಕಾರ್ಡ, ನರೇಗಾ ಜಾಬ್ ಕಾರ್ಡ, ಆಧಾರ ಕಾರ್ಡ, ಬ್ಯಾಂಕ್ ಪಾಸ್ ಬುಕ್, ೨ ಭಾವಚಿತ್ರಗಳುನ್ನು ಲಗತ್ತಿಸಬೇಕು.
ತರಬೇತಿಯಲ್ಲಿ ಊಟ, ವಸತಿ ಸಂಪೂರ್ಣ ಉಚಿತವಾಗಿರುತ್ತದೆ.
ಅ.೧೭ ೨೦೨೩ ರಂದು ಅರ್ಜಿ ಸ್ವೀಕರಿಸುವ ಕೊನೆಯ ದಿನಾಂಕವಾಗಿದ್ದು, ಅರ್ಜಿಯನ್ನು ಸಂಸ್ಥೆಯ ಅರ್ಜಿ ನಮೂನೆಯಲ್ಲಿ ಅಥವಾ ಬಿಳಿಹಾಳಿಯಲ್ಲಿ ನೇರವಾಗಿ ಕಾರ್ಯಾಲಯಕ್ಕೆ, ಅಥವಾ ಪೋಸ್ಟ್ ಮುಖಾಂತರ ಸಲ್ಲಿಸಬಹುದಾಗಿದೆ.
ಸಂಸ್ಥೆಯ ವಿಳಾಸ : ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (ಸಿಬಿ ಆರ್‌ಸೆಟಿ), ಪ್ಲಾಟ ನಂ. ಸಿಎ -೦೩ (ಪಾರ್ಟ) ಕಣಬರ್ಗಿ ಇಂಡಸ್ತ್ರಿಯಲ್ ಎರಿಯಾ, ಆಟೋ ನಗರ. ಬೆಳಗಾವಿ-೫೯೦೦೧೫ ಅಥವಾ ದೂರವಾಣಿ ಸಂಖ್ಯೆ ೦೮೩೧-೨೪೪೦೬೪೪, ೮೨೯೬೭೯೨೧೬೬, ೯೮೪೫೭೫೦೦೪೩, ೮೦೫೦೪೦೬೮೬೬, ೮೮೬೭೩೮೮೯೦೬, ೯೪೪೯೮೬೦೫೬೪ ಗೆ ಬೆಳಿಗ್ಗೆ ೯.೩೦ ರಿಂದ ಸಂಜೆ ೬ ವರೆಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಕಿತ್ತೂರು ತಾಲೂಕಿನ ವಿವಿಧೆಡೆ ಮಧ್ಯ ಮಾರಾಟ ನಿಷೇಧ
ಬೆಳಗಾವಿ
: ಕಿತ್ತೂರು ಉತ್ಸವ ಅ.೨೩ ರಿಂದ ಅ.೨೫ ೨೦೨೩ ವರೆಗೆ ಆಚರಿಸಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕಿತ್ತೂರು, ಎಂ.ಕೆ ಹುಬ್ಬಳ್ಳಿ ಪಟ್ಟಣ ಹಾಗೂ ಹೊಸಕಾದರವಳ್ಳಿ ಗ್ರಾಮದಲ್ಲಿ ಯಾವುದೇ ಅಹೀತಕರ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಕಿತ್ತೂರು ತಾಲೂಕಿ ವಿವಿಧೆಡೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಅ.೨೨ ಸಂಜೆ ೬ ಗಂಟೆಯಿಂದ ಅ. ೨೬ ಬೆಳಿಗ್ಗೆ ೬ ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ನಿತೇಶ್ ಪಾಟೀಲ್ ಅವರು ಆದೇಶ ಹೊರಡಿಸಿರುತ್ತಾರೆ.
ಸಾರ್ವಜನಿಕ ಶಾಂತತೆಯನ್ನು ಕಾಯ್ದುಕೊಂಡು ಬರುವ ಹಿತದೃಷ್ಟಿಯಿಂದ ಅಬಕಾರಿ ಜಂಟಿ ಆಯುಕ್ತರು, ಬೆಳಗಾವಿ ಅಬಕಾರಿ ಉಪ ಆಯುಕ್ತರು, ಹಾಗೂ ಉಪ ವಿಭಾಗ ಅಬಕಾರಿ ಅಧೀಕ್ಷಕರಿಗೆ ಕರ್ನಾಟಕ ಅಬಕಾರಿ ಕಾಯ್ದೆ ೧೯೬೫ರ ಕಲಂ ೨೧(೨) ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆ ೧೯೬೩ ಕಲಂ ೩೧ ರ ಪ್ರಕಾರ ಅವಶ್ಯಕತೆ ಕಂಡುಬಂದಲ್ಲಿ ಶಾಂತಿಪಾಲನೆಗಾಗಿ ಸೂಕ್ತ ಕ್ರಮ ಕೈಗೊಳ್ಳಲು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಆದೇಶವನ್ನು ಉಲ್ಲಂಘನೆಯಾದಲ್ಲಿ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಆದೇಶದಲ್ಲಿ ತಿಳಿಸಿದ್ದಾರೆ.ಆಕ್ರಮ ನಳಸಂಪರ್ಕಗಳನ್ನು ಸಕ್ರಮ ಸಂಪರ್ಕಗೊಳಿಸಲು ಸೂಚನೆ
ಬೆಳಗಾವಿ
: ಬೆಳಗಾವಿ ನಗರದಲ್ಲಿ ಸರಬರಾಜು ಮಾಡುತ್ತಿರುವ ಕುಡಿಯುವ ನೀರಿನ ನಳ ಸಂಪರ್ಕಕ್ಕೆ ಸಂಬಂಧಿಸಿದಂತೆ, ನಗರದಲ್ಲಿ ಕೆಲವು ಸಾರ್ವಜನಿಕರು ಅಕ್ರಮವಾಗಿ ನಳ ಸಂಪರ್ಕ ಪಡೆದಿದ್ದು, ಅಂತಹ ಗ್ರಾಹಕರು ನೀರಿನ ಕರ ಭರಣಾ ಮಾಡದೇ ಉಳಿಸಿಕೊಂಡಿರುವುದು ಮಹಾನಗರ ಪಾಲಿಕೆಯ ಗಮನಕ್ಕೆ ಬಂದಿದ್ದು, ನಿಗದಿಪಡಿಸಿದ ಸಂಪರ್ಕ ವೆಚ್ಚ ಪಾವತಿಸಿ ನಳದ ಸಂಪರ್ಕವನ್ನು ಸಕ್ರಮಗೊಳಿಸಿಕೊಳ್ಳಬೇಕು ಎಂದು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಕುಸ್ಸೆಂಪ್, ಯೋಜನಾ ಅನುಷ್ಟಾನ ಘಟಕದ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.
ನಾಗರಿಕರಿಗೆ ನೀರು ಸರಬರಾಜು ಮಾಡುವಲ್ಲಿ ವ್ಯಥೆಯುಂಟಾಗುತ್ತಿದೆ. ಅಕ್ರಮವಾಗಿ ನಳ ಸಂಪರ್ಕ ಪಡೆಯುವುದು ಅಕ್ಷಮ್ಯ ಅಪರಾಧವಾಗಿದ್ದು, ಆದ್ದರಿಂದ ಅಕ್ರಮ ನಳ ಸಂಪರ್ಕ ಪಡೆದ ಗ್ರಾಹಕರು ೧೫ ನೇ ನವಂಬರ್-೨೦೨೩ ರೊಳಗಾಗಿ ಮೇ/.ಎಲ್ & ಟಿ ಕಂ ಪ್ರೈ.ಲಿ ಬೆಳಗಾವಿ, ರವರ ಗ್ರಾಹಕ ಸೇವಾ ಕೇಂದ್ರಕ್ಕೆ ಸಂಪರ್ಕಿಸಿ ಸೂಕ್ತ ದಾಖಲಾತಿಗಳಾದ (ಆಧಾರ ಪ್ರತಿ, ಎರಡು ಪೋಟೋ, ಆಸ್ತಿ ದಾಖಲೆ ಪ್ರತಿ ಮತ್ತು ರೂ. ೧೦೦/-ರ ಇಂಡೆಮಿನಿಟಿ ಬಾಂಡ್‌ಗಳೊಂದಿಗೆ) ಅರ್ಜಿ ಸಲ್ಲಿಸಿ, ನಿಗದಿಪಡಿಸಿದ ಸಂಪರ್ಕ ವೆಚ್ಚ ಪಾವತಿಸಿ, ನಳದ ಸಂಪರ್ಕವನ್ನು ಸಕ್ರಮಗೊಳಿಸಿಕೊಳ್ಳಬೇಕು.
ಒಂದು ವೇಳೆ ನಿಗದಿತ ಅವಧಿಯೊಳಗಾಗಿ ನಳದ ನೀರಿನ ಸಂಪರ್ಕವನ್ನು ಸಕ್ರಮಗೊಳಿಸಿಕೊಳ್ಳಲು ವಿಫಲವಾದಲ್ಲಿ ನೋಟಿಸ್ ನೀಡಿ ಅಂತಹ ನಳ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಹಾಗೂ ನೀರಿನ ಕರ ಬಾಕಿ ಉಳಿಸಿಕೊಂಡ ಗ್ರಾಹಕರು ನಿಗದಿತ ಅವಧಿಯೊಳಗಾಗಿ ಭರಿಸಬೇಕು, ಒಂದು ವೇಳೆ ಭರಿಸದೇ ಇದ್ದಲ್ಲಿ ಯಾವ್ಯದೇ ಯಾವುದೇ ಸೂಚನೆ ಇಲ್ಲದೆ ನಳದ ಜೋಡಣೆ ಕಡಿತಗೊಳಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಗ್ರಾಹಕರ ಸೇವಾ ಕೇಂದ್ರ ಟೋಲ್ ಪ್ರೀ ಸಂಖ್ಯೆ: ೧೮೦೦೪೨೫೫೬೫೬ಗೆ ಸಂಪರ್ಕಿಸುವುದು ಅಥವಾ ಈ ಮೇ/. ಎಲ್ & ಟಿ ಪ್ರೈ ಲಿ ಬೆಳಗಾವಿ, ಗ್ರಾಹಕರ ಸೇವಾ ಕೇಂದ್ರದ ವಿಳಾಸಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಜಿಲ್ಲೆಯ ವೈದ್ಯಾಧಿಕಾರಿಗಳಿಗೆ ರೇಬಿಸ್ ಮತ್ತು ಇಲಿ ಜ್ವರದ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕುರಿತು ತರಬೇತಿ

ಬೆಳಗಾವಿ : ರೇಬಿಸ್ ಸಸ್ತನಿ, ಸಾಕು ಪ್ರಾಣಿ ಹಾಗೂ ಕಾಡು ಪ್ರಾಣಿಗಳಿಂದ ಬರತ್ತದೆ. ಪ್ರಾಣಿ ಕಚ್ಚುವಿಕೆ ಚೂರುವುದು ಆದಾಗ ತಕ್ಷಣ ಚಿಕಿತ್ಸೆಗೆ ಬರಲು ಸಮುದಾಯಕ್ಕೆ ತಿಳಿಸುವುದು ಹಾಗೂ ಆದಷ್ಟು ಬೇಗ ಗಾಯವನ್ನು ಸಾಬೂನಿನ ಮೂಲಕ ನೀರಿನಿಂದ ಸ್ವಚ್ಚಗೊಳಿಸಬೇಕು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ. ಸಂಜಯ ಎಸ್. ದೊಡ್ಡಮನಿ ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಅಕ್ಟೋಬರ್ ೧೩, ೨೦೨೩ ರಂದು ಜಿಲ್ಲೆಯ ವೈದ್ಯಾಧಿಕಾರಿಗಳಿಗೆ ರೇಬಿಸ್ ಮತ್ತು ಇಲಿ ಜ್ವರದ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕುರಿತು ತರಬೇತಿಯನ್ನು ಜಿಲ್ಲಾ ಪಂಚಾಯತ ಜಿಲ್ಲಾ ಆಡಳಿತ ಮತ್ತು ಆರೋಗ್ಯ ಇಲಾಖೆಯಿಂದ ಆಯೋಜಿಸಲಾಗಿತ್ತು.
ತರಬೇತಿ ಕಾರ್ಯಾಗಾರವನ್ನು ಬೆಳಗಾವಿ ವೈದ್ಯಕೀಯ ವಿಜ್ಙಾನ ಸಂಸ್ಥೆ ಬೆಳಗಾವಿಯ ಸಮುದಾಯ ಆರೋಗ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಆರ್. ಈ. ವಿವೇಕಿ ರವರು ಉದ್ಘಾಟಿಸಿ ರೋಗದ ಕುರಿತು ಆಸ್ಪತ್ರೆಗಳಿಗೆ ಬಂದ ರೋಗಿಗಳಿಗೆ ಚಿಕಿತ್ಸಾ ವಿಧಾನದ ಕುರಿತು ತಿಳಿಸಿದರು.
ಪ್ರ. ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ. ರಮೇಶ ದಂಡಗಿ, ಜಿಲ್ಲಾ ಎಪಿಡೆಮಿಯಾಲಾಜಿಸ್ಟ್ ಡಾ. ಬಿ. ಹೆಚ್. ಪಾಟೀಲ್ , ಜಿಲ್ಲಾ ಡಾಟಾ ಮ್ಯಾನೇಜರ ರಾಘವೇಂದ್ರ. ಡಿ, ಆಡಳಿತ ಸಹಾಯಕರಾದ ಜಾಫರಸಾದಿಕ್ ಬಿ. ನದಾಫ, ಕು. ಮಲ್ಲಿಕಾರ್ಜುನ ಎಸ್. ಬಡಿಗೇರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ವೈದ್ಯಕೀಯ ವಿಜ್ಙಾನ ಸಂಸ್ಥೆಯ ಸಮುದಾಯ ಆರೋಗ್ಯ ಶಾಸ್ತ್ರ ವಿಭಾಗದ ಪ್ರಾದ್ಯಾಪಕರಾದ ಡಾ. ಶೋಭಾ ಕರಿಕಟ್ಟಿ ಅವರು ಉಪನ್ಯಾಸ ನೀಡಿದರು. ಕ್ಷೇತ್ರ ಆರೊಗ್ಯ ಶಿಕ್ಷಣಾಧಿಕಾರಿಗಳಾದ ಬಸವರಾಜ ಪಿ. ಯಲಿಗಾರ ಸ್ವಾಗತಿಸಿ ನಿರೂಪಿಸಿದರು. ಜಿಲ್ಲಾ ಸಮಗ್ರ ರೋಗಗಳ ಕಣ್ಗಾವಲು ಕಾರ್ಯಕ್ರಮದ ವತಿಯಿಂದ ತರಬೇತಿ ಆಯೋಜಿಸಲಾಗಿತ್ತು.


Bottom Add3
Bottom Ad 2

You cannot copy content of this page