ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ತಿಂಗಳುಗಟ್ಟಲೆ ಆನ್‌ಬೋರ್ಡಿಂಗ್ ಪ್ರಕ್ರಿಯೆಯನ್ನು ವಿಳಂಬಗೊಳಿಸಿದ ನಂತರ ವಿಪ್ರೋ, ಇನ್ಫೋಸಿಸ್ ಮತ್ತು ಟೆಕ್ ಮಹೀಂದ್ರಾ ಫ್ರೆಶರ್‌ಗಳಿಗೆ ನೀಡಲಾದ ಹಲವಾರು ಆಫರ್ ಲೆಟರ್‌ಗಳನ್ನು ಹಿಂತೆಗೆದುಕೊಂಡಿವೆ.
ಅಭ್ಯರ್ಥಿಗಳು ಕಂಪನಿಗಳ ಶೈಕ್ಷಣಿಕ ಅರ್ಹತಾ ಮಾನದಂಡಗಳು ಅಥವಾ ಮೌಲ್ಯಮಾಪನ ಮಾರ್ಗಸೂಚಿಗಳನ್ನು ಪೂರೈಸಿಲ್ಲ ಎಂದು ಈ ಕಂಪನಿಗಳು ಸೆ. 28 ರಂದು, ಅಂದರೆ ಆಫರ್ ಲೆಟರ್ ನೀಡಿದ ಆರೇ ತಿಂಗಳಲ್ಲಿ ಕಳುಹಿಸಿದ ಇಮೇಲ್‌ಗಳಲ್ಲಿ ಉಲ್ಲೇಖಿಸಲಾಗಿದೆ.
“ಆಫರ್ ಲೆಟರ್ ಪಡೆದಿದ್ದ ಎಲ್ಲ ಅರ್ಹ ಅಭ್ಯರ್ಥಿಗಳನ್ನು ನಾವು ಗೌರವಿಸುತ್ತೇವೆ” ಎಂದು ವಿಪ್ರೋ ಹೇಳಿಕೆಯಲ್ಲಿ ತಿಳಿಸಿದೆ.
ಭೀಕರ ಅಪಘಾತ; ಮಹಿಳಾ ವರದಿಗಾರ್ತಿ ದುರ್ಮರಣ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ