ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ರೋಟರಿ ಸಂಸ್ಥೆ ಬೆಳಗಾವಿ ದಕ್ಷಿಣ ಇದರ ೨೦೧೯-೨೦ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶಾಂತಾಯಿ ವೃದ್ಧಾಶ್ರಮದಲ್ಲಿ ಜರುಗಿತು.
ಸಂಸ್ಥೆಯ ನೂತನ ಅಧ್ಯಕ್ಷರಾಗಿ ಡಾ. ಬಿ. ಜಯಸಿಂಹ, ಕಾರ್ಯದರ್ಶಿಯಾಗಿ, ಎಸ್.ಡಿ. ಸಾಯಗಂಚ ಖಜಾಂಚಿಯಾಗಿ, ಆನಂದ ಆರ್. ಬುಖೆಬಾಗ್ ಮತ್ತು ಇತರ ನಿರ್ದೇಶಕರು ಹಾಗೂ ವಿವಿಧ ಸಮೀತಿಗಳ ಅಧ್ಯಕ್ಷರು ಅಧಿಕಾರ ವಹಿಸಿಕೊಂಡರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ರೋಟರಿ ಜಿಲ್ಲೆ ೩೧೭೦ ನಿಕಟ ಪೂರ್ವ ಪ್ರಾಂತಪಾಲ ಹಾಗೂ ಪ್ರಸ್ತುತ ರೋಟರಿ ಫೌಂಡೆಶನ್ ಪ್ರಾಂತೀಯ ಸಂಚಾಲಕ ಅವಿನಾಶ ಪೊತದಾರ ಪಾಲ್ಗೊಂಡು ೧೧೪ ವರ್ಷದ ಇತಿಹಾಸ ಹೊಂದಿರುವಂತಹ ರೋಟರಿ ಸಂಸ್ಥೆಯು ಪ್ರತಿಯೊಬ್ಬ ವ್ಯಕ್ತಿಗೂ ಸಮಾಜದ ಏಳಿಗೆಗಾಗಿ ತನ್ನನ್ನು ತೊಡಗಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಿಕೊಡುತ್ತದೆ.
ವ್ಯಕ್ತಿಯೂ ಸಮಾಜದ ಜೊತೆ ಭಾವನಾತ್ಮಕವಾಗಿ ಬೆರೆತಾಗ ಮಾತ್ರ ಸಮಾಜದ ಏಳಿಗೆಗಾಗಿ ಕೆಲಸ ಮಾಡುವುದಕ್ಕೆ ಸಾಧ್ಯವಾಗುತ್ತದೆ. ರೋಟರಿ ಸಂಸ್ಥೆಯು ಇಂದು ಇಡೀ ವಿಶ್ವವನ್ನು ಪೋಲಿಯೊ ಮುಕ್ತ ವಾಗಿಸಿರುವ ಗೌರವಕ್ಕೆ ಪಾತ್ರವಾಗಿರುತ್ತದೆ ಎಂದರು.
ಉಪ ಪ್ರಾಂತಪಾಲರಾದ ಡಾ. ಸತೀಶ ಧಾಮನಕರ ಸಂಸ್ಥೆಯ ಹಿಂದಿನ ವರ್ಷದ ಕಾರ‍್ಯಗಳನ್ನು ಶ್ಲಾಘಿಸಿದರು. ಅಧಿಕಾರ ಹಸ್ತಾಂತರಿಸಿ ಮಾತನಾಡಿದ ಹಿಂದಿನ ಅಧ್ಯಕ್ಷ ಉದಯ ಜೋಶಿ ತಮಗೆ ಸಹಕರಿಸಿದ ಎಲ್ಲ ಸದಸ್ಯರಿಗೆ ಧನ್ಯವಾದ ಅರ್ಪಿಸಿದರು.
ಕಾರ್ಯದರ್ಶಿ ನಿಲೇಶ ಪಾಟೀಲ ವರದಿ ವಾಚನ ಮಾಡಿದರು. ಇದೇ ಸಂದರ್ಭದಲ್ಲಿ ಶಾಂತಾಯಿ ವೃದ್ಧಾಶ್ರಮಕ್ಕೆ ೫೦ ಬೆಡ್ ಶೀಟ್‌ಗಳನ್ನು ನೀಡಿ ಮತ್ತು ಅಲ್ಲಿ ಸೇವೆಸಲ್ಲಿಸುತ್ತಿರುವ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಸಮಾರಂಭದ ಆರಂಭದಲ್ಲಿ ನಯನಾ ಗಿರಿಗೌಡರ ಹಾಗೂ ತಂಡದವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಚೈತನ್ಯ ಕುಲಕರ್ಣಿ ಹಾಗೂ ಡಾ. ಮನೋಜ ಸುತಾರ ಪರಿಚಯಿಸಿದರು. ರಮೇಶ ರಾಮಗುರವಾಡಿ ವಂದಿಸಿದರು. ಸತೀಶ ಕುಲಕರ್ಣಿ ಹಾಗೂ ಮಾಂಜರಿ ಪಾಟೀಲ ಕಾರ್ಯಕ್ರಮವನ್ನು ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ