Kannada NewsKarnataka NewsLatest
ಬೆಳಗಾವಿ ಹೊಟೆಲ್ ನಿಂದ ಹಿಂದೂ ಸಾಧು-ಸಂತರ ಅಪಮಾನ: ಕ್ಷಮೆ ಯಾಚನೆಗೆ 24 ಗಂಟೆ ಗಡುವು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯ ಹೊಟೆಲ್ ಒಂದರ ಜಾಹಿರಾತಿನಲ್ಲಿ ಹಿಂದೂ ಸಾಧು ಸಂತರಿಗೆ ಅಪಮಾನ ಮಾಡಲಾಗಿದ್ದು 24 ಗಂಟೆಯಲ್ಲಿ ಕ್ಷಮೆ ಕೇಳದಿದ್ದಲ್ಲಿ ಮುಂದಾಗುವ ಅನಾಹುತಕ್ಕೆ ಹೊಟೆಲ್ ನವರೇ ಹೊಣೆ ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ಎಚ್ಚರಿಸಿದೆ.
ನಿಯಾಜ್ ಹೋಟೆಲ್ ಮಾಲೀಕರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು, ಇಲ್ಲದಿದ್ದರೆ ಪರಿಸ್ಥಿತಿಗೆ ಅವರೇ ಹೊಣೆಗಾರರಾಗುತ್ತಾರೆ ಎಂದು ಪೊಲೀಸ್ ಉಪಾಯುಕ್ತರಿಗೆ ದೂರು ನೀಡಲಾಗಿದೆ.
ಬಿರಿಯಾನಿಯ ಜಾಹೀರಾತನ್ನು ನಿಯಾಜ್ ಹೋಟೆಲ್ ನಿನ್ನೆ ಬಿಡುಗಡೆ ಮಾಡಿದ್ದು, ಅದರಲ್ಲಿ ಹಿಂದೂ ಸಾಧು-ಸಂತರ ಅಪಮಾನ ಮಾಡಲಾಗಿದೆ, ಹೊಟೆಲ್ ಮಾಲಿಕನ ವಿರುದ್ಧ ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಪೊಲೀಸ್ ಸ್ಟೇಷನ್ ನಲ್ಲಿ ದೂರು ನೀಡಲಾಗಿದೆ ಎಂದು ವಿಶ್ವಹಿಂದೂ ಪರಿಷತ್, ಬಜರಂಗ ದಳ ಪ್ರಕಟಣೆಯಲ್ಲಿ ತಿಳಿಸಿದೆ.
ಭಯದಿಂದ ಹೋಟೆಲ್ ಬಂದ್ ಮಾಡಲಾಗಿದ್ದು, ಅದರ ಮಾಲಿಕನಿಗೆ ಪೊಲೀಸ್ ರಕ್ಷಣೆ ಕೊಡಲಾಗಿದೆ. ಆತನಿಗೆ ದಮ್ಮಿದ್ದರೆ ತನ್ನ ಧರ್ಮಕ್ಕೆ ಸಂಬಂಧಿಸಿದ ಯಾವುದೇ ಜಾಹೀರಾತನ್ನು ಪ್ರಕಟಿಸಬೇಕು. ಹಿಂದೂ ಸಾಧು ಸಂತರ ವಿಷಯದಲ್ಲಿ ಅವರು ಯಾವುದೇ ಅವಮಾನಕರ ಜಾಹೀರಾತುಗಳನ್ನು ಮತ್ತೆ ಪ್ರಕಟಿಸಬಾರದು. ಇದು ಮತ್ತೊಮ್ಮೆ ಸಂಭವಿಸಿದಲ್ಲಿ ಅವರಿಗೆ ನಮ್ಮ ಭಾಷೆಯಲ್ಲಿ ಉತ್ತರಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಬಜರಂಗದಳದ ಬೆಳಗಾವಿ ವಿಭಾಗ ಸಂಯೋಜಕರ ಸದಾಶಿವ ಗುದಗಗೋಳ, ಬೆಳಗಾವಿ ಜಿಲ್ಲಾ ಸಂಯೋಜಕ, ಬಾವಕಣ್ಣ ಲೋಹಾರ, ಆಧಿನಾಥ ಗಾವಡೆ, ಜಿಲ್ಲಾ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ವಿಜಯ ಜಾಧವ ಮತ್ತು ಸುನಿಲ್ ಕನೇರಿ ಮುಂತಾದವರು ಇದ್ದರು.
ಖಂಡನೆ
ನಿಯಾಜ್ ಹೊಟೆಲ್ ತಮನ್ನ ಜಾಹಿರಾತಿನಲ್ಲಿ ಹಿಂದೂ ಸಾಧು ಸಂತರಿಗೆ ಅವಮಾನ ಮಾಡಿರುವುದನ್ನು ವಿಶ್ವಹಿಂದೂ ಪರಿಷತ್ ಉತ್ತರ ಕರ್ನಾಟಕ ಕೋಶಾಧ್ಯಕ್ಷ ಕೃಷ್ಣ ಭಟ್ ಮತ್ತು ಬಿಜೆಪಿ ಜಿಲ್ಲಾ ಗ್ರಾಮೀಣ ಮಹಿಳಾ ಮೋರ್ಚಾ ಅಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ತೀವ್ರವಾಗಿ ಖಂಡಿಸಿದ್ದಾರೆ.
ಕೂಡಲೇ ಕ್ಷಮೆ ಯಾಚಿಸಬೇಕು. ಮತ್ತು ಅವರ ಹೊಟೆಲ್ ಬಹಿಷ್ಕರಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
ಕನಿಷ್ಠ 5 ಮಠಾಧೀಶರ ಕಾಲಿಗೆ ಬಿದ್ದು ಕ್ಷಮೆ ಯಾಚಿಸಬೇಕು ಎಂದು ಕೃಷ್ಣ ಭಟ್ ಆಗ್ರಹಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ