“ಗುಣಾತ್ಮಕ ಸಂಶೋಧನಾ ವಿಧಾನ” ಕುರಿತು ಅಂತರರಾಷ್ಟ್ರೀಯ ಕಾರ್ಯಾಗಾರ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಬೆಳಗಾವಿಯ ಕಾಹೆರ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಮತ್ತು ಅಮೆರಿಕದ ಫಿಲಡೆಲ್ಫಿಯಾದ ಥಾಮಸ್ ಜೆಫರ್ಸನ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ “ಗುಣಾತ್ಮಕ ಸಂಶೋಧನಾ ವಿಧಾನ” ಕುರಿತ ಅಂತರರಾಷ್ಟ್ರೀಯ ಕಾರ್ಯಾಗಾರವನ್ನು ಕೆಎಲ್ಇ ಶತಮಾನೋತ್ಸವ ಸಭಾಗೃಹದಲ್ಲಿ ಸೋಮವಾರ 19 ಅಗಷ್ಟ್ 2019 ರಂದು ನಡೆಸಲಾಯಿತು.
ಕ್ಯಾನ್ಸಾಸ್ ಮಿಸ್ಸೌರಿ ವಿಶ್ವವಿದ್ಯಾಲದ ಸಂಶೋಧನಾ ಮುಖ್ಯಸ್ಥೆ ಮತ್ತು ಹೆಸರಾಂತ ಭಾಷಣಕಾರು ಆಗಿರುವ ಪ್ರೋ. ಪೆಟ್ರೀಷಿಯಾ ಕೆಲ್ಲಿ, ಮತ್ತು ಜೆಫರ್ಸನ್ ಕಾಲೇಜ್ ಆಫ್ ನರ್ಸಿಂಗ್, ಥಾಮಸ್ ಜೆಫರ್ಸನ್ ಯೂನಿವರ್ಸಿಟಿ ಫಿಲಡೆಲ್ಫಿಯಾದ ಸಹಾಯಕ ಪ್ರ್ರಾಧ್ಯಾಪಕರು ಆಮಿ ಸ್ಜಜ್ನಾ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು, ಕೆಎಲ್ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್, ಬೆಳಗಾವಿ ಮತ್ತು ಥಾಮಸ್ ಜೆಫರ್ಸನ್ ವಿಶ್ವವಿದ್ಯಾಲಯ, ಫಿಲಡೆಲ್ಫಿಯಾ, ಯುಎಸ್ಎ ನಡುವೆ ಸಹಯೋಗವಿದಲ್ಲಿ ತಾಯಿಯ ಮತ್ತು ಮಕ್ಕಳ ಆರೋಗ್ಯ, ಮೂತ್ರಶಾಸ್ತ್ರ, ಔಷದಿ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಬೆಳಕು ಚೆಲ್ಲಿದ ಕಾರ್ಯಾಗಾರವು ಆರೋಗ್ಯ ಮತ್ತು ವಿವಿಧ ಗುಣಾತ್ಮಕ ಸಂಶೋಧನಾ ವಿಧಾನಗಳ ಮೇಲೆ ವಿಶೇಷವಾಗಿ ಕೇಂದ್ರಿಕರಿಸಲಾಗಿತ್ತು.
ಬೆಳಗಾವಿಯ ಕಾಹೆರ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ನ ಡೀನ್ ಮತ್ತು ಪ್ರಾಂಶುಪಾಲ ಪ್ರೊ. (ಡಾ) ಸುಧಾ ಎ.ರಡ್ಡಿ ಅವರು ಸ್ವಾಗತ ಕೋರಿದರು. ಕಾರ್ಯಾಗಾರದ ಅಧ್ಯಕ್ಷತೆಯನ್ನು ಜೆಎನ್ಎಂಸಿ ಪ್ರಾಂಶುಪಾಲರಾದ ಡಾ.ಎನ್.ಎಸ್.ಮಹಾಂತಶೆಟ್ಟಿ ವಹಿಸಿದ್ದರು.
ಮುಖ್ಯ ಅತಿಥಿ ಪೆಟ್ರೀಷಿಯಾ ಕೆಲ್ಲಿ ಅವರು ಶುಶ್ರೂಷೆಯಲ್ಲಿ ಸಂಶೋಧನೆಯ ಮಹತ್ವದ ಬಗ್ಗೆ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪ್ರೋ. ಆಮಿ ಅವರು ನರ್ಸಿಂಗ್ ಕ್ಷೇತ್ರದಲ್ಲಿ ಗುಣಾತ್ಮಕ ವಿಧಾನಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಕಾರ್ಯಾಗಾರದಲ್ಲಿ ವಿವಿಧ ವಿಭಾಗಗಳ ಒಟ್ಟು 91 ಪ್ರತಿನಿಧಿಗಳು ಭಾಗವಹಿಸಿದ್ದರು. ಕಾಹೆರ್ ನರ್ಸಿಂಗ್ ಕಾಲೇಜಿನ ಮಾನಸಿಕ ಆರೋಗ್ಯ ವಿಭಾಗದ ಮುಖ್ಯಸ್ಥ ಶ್ರೀ ಗುರುರಾಜ್ ಉಡಪಿ ಅವರು ವಂದಿಸಿದರು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ