Latest

ನಂದಿನಿ ನಕಲಿ ತುಪ್ಪದ ತನಿಖೆ ಪ್ರಗತಿಯಲ್ಲಿ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ ಸುವರ್ಣಸೌಧ  –   ಮೈಸೂರು ಹೊರವಲಯದ ಚಾಮುಂಡಿ ಬೆಟ್ಟದ ತಪ್ಪಲಿನ ಹೊಸಹುಂಡಿ ಗ್ರಾಮದ ಗೋದಾಮಿನಲ್ಲಿ ನಂದಿನಿ ನಕಲಿ ತುಪ್ಪ ತಯಾರಿಸುವ ಬಗ್ಗೆ ವರದಿಯಾಗಿದ್ದು, ಡಿ.16 ರಂದು ಮೈಸೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಮತ್ತು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿರುತ್ತಾರೆ ಎಂದು ಕರ್ನಾಟಕ ಹಾಲು ಮಹಾ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
ತಕ್ಷಣ ಸಂಬಂಧಿಸಿದ ಸ್ಥಳೀಯ ಆಹಾರ ಪರೀಕ್ಷಣಾ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಮೈಸೂರು ದಕ್ಷಿಣ ಪೋಲಿಸ ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಅವರು ಸಹ ಸ್ಥಳ ಪರೀಶಿಲನೆ ಮಾಡಿ ಮಹಜರು ಮಾಡಿ ಈIಖ ಸಹ ದಾಖಲಿಸಿ ತನಿಖೆ ಪ್ರಾರಂಭಿಸಿದ್ದಾರೆ  ಹಾಗೂ ಸದರಿ ಗೋದಾಮನ್ನು ಸೀಲ್ ಮಾಡಿರುತ್ತಾರೆ ಎಂದು ತಿಳಿಸಿದ್ದಾರೆ.
ಆಹಾರ ಸುರಕ್ಷತಾ ಪ್ರಾಧಿಕಾರದ ಅಧಿಕಾರಿಗಳು ಸ್ಥಳದಲ್ಲಿದ್ದ ನಂದಿನಿ ತುಪ್ಪ ಕಲಬೆರಕೆಗೆ ಉಪಯೋಗಿಸಲಾಗುತ್ತಿದ್ದ ಡಾಲ್ಡಾ, ಪಾಮ್‍ಆಯಿಲ್, ಬಣ್ಣ ಮತ್ತು ಫ್ಲೆವರ್ ಹಾಗೂ ಪ್ಯಾಕ್ ಮಾಡಲು ಉಪಯೋಗಿಸುತ್ತಿದ್ದ ಕೌಚ್ ಪೀಲಂ, ಪ್ಯಾಕ್ ಮಾಡುತ್ತಿರುವ ಯಂತ್ರ, ನಕಲಿ ಸ್ಟಿಕರ್, ನಕಲಿ ಆಗ್‍ಮಾರ್ಕ್ ಲೇಬಲ್, ನಕಲಿ ಟಿನ್ ಕ್ಯಾಪ್, ಬಾಬ್ ಟೇಪ್, ಕಾರೋಡೆಟ್ ಬಾಕ್ಸ್ ಗಳನ್ನು ವಶಪಡಿಸಿಕೊಂಡಿರುತ್ತಾರೆ ಎಂದು ವಿವರಿಸಿದ್ದಾರೆ.
ತನಿಖೆ ಪ್ರಗತಿಯಲ್ಲಿದ್ದು ತಪ್ಪತಸ್ಥರ ಮೇಲೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ನಂದಿನಿ ನಕಲಿ ತುಪ್ಪ ಆಗದಂತೆ ಎಲ್ಲ ರೀತಿಯ ಕ್ರಮವಿಡುತ್ತಿದ್ದು, ಸಾರ್ವಜನಿಕರು ಆತಂಕ ಪಡಬೇಕಾಗಿಲ್ಲ ಎಂದು ಎಚ್ಚರಿಸಿದ್ದಾರೆ.

 

ಕರ್ನಾಟಕ ಸಹಕಾರ ಹಾಲು ಮಹಾಮಂಡಳ:

ಕರ್ನಾಟಕ ಹಾಲು ಮಹಾಮಂಡಳದ ಹಾಲು ಒಕ್ಕೂಟಗಳು ರೈತರಿಂದ ನೇರವಾಗಿ ಗುಣಮಟ್ಟದ ಹಾಲನ್ನು ಸಂಗ್ರಹಿಸಿ 14 ಹಾಲು ಒಕ್ಕೂಟಗಳಲ್ಲಿ ಹಾಗೂ 4 ಕಹಾಂ ಘಟಕಗಳಲ್ಲಿ ತುಪ್ಪವನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಪ್ರತಿನಿತ್ಯ 100 ಮೆಟ್ರಿಕ್ ಟನ್ ಶುದ್ಧ ಮತ್ತು ಸ್ವಾದವುಳ್ಳ ತುಪ್ಪವನ್ನು ಉತ್ಪಾದನೆ ಮಾಡಿ ಮಾರುಕಟ್ಟಗೆ ಸರಬರಾಜು ಮಾಡಲಾಗುತ್ತದೆ.
ನಂದಿನಿ ತುಪ್ಪವು ರಾಜ್ಯಾದ್ಯಂತ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಪಾಲು ಹೊಂದಿರುತ್ತಾರೆ. ರಾಜ್ಯಾದ್ಯಾಂತ ಸು. 600 ಡೀಲರ್‍ಗಳನ್ನು ಹೊಂದಿದ್ದು, ಮತ್ತು ಹೊರ ರಾಜ್ಯಗಳಲ್ಲಿಯೂ ಸಹ 50ಕ್ಕೂ ಹೆಚ್ಚು ವಿತರಕರ ಮೂಲಕ ಸರಬರಾಜು ಮಾಡಲಾಗುತ್ತದೆ.
ನಂದಿನಿ ತುಪ್ಪವು ಶುದ್ಧತೆಯಿಂದ ಕೂಡಿರುವುದರಿಂದ ಈ ಕೆಳಕಂಡ ಪ್ರತಿಷ್ಠಿತ ಸಂಸ್ಥೆ ಹಾಗೂ ಧಾರ್ಮಿಕ ಕೇಂದ್ರಗಳಿಗೆ ಬೇಡಿಕೆ ಅನುಸಾರ ನೀಡಲಾಗುತ್ತಿದೆ.
ಭಾರತದ ಹೆಮ್ಮೆಯ ರಕ್ಷಣಾ ಇಲಾಖೆಗೆ 1 ವರ್ಷದ ಒಪ್ಪಂದದನ್ವಯ 150 ಮೆಟ್ರಿಕ್ ಟನ್, ತಿರುಮಲ ತಿರುಪತಿ ದೇವಸ್ಥಾನಕ್ಕೆ 1 ವರ್ಷದ ಅವಧಿಗೆ 410 ಮೆಟ್ರಿಕ್ ಟನ್, ಆಯೋಧ್ಯೆಯಲ್ಲಿ ನಂದಿನಿ ತುಪ್ಪವನ್ನು ಬಳಕೆ ಮಾಡಿ ಅಖಂಡ ಜ್ಯೋತಿಯನ್ನು ವರ್ಷ ಪೂರ್ತಿ ಬೆಳಗಿಸಲಾಗುತ್ತಿದೆ. ಜೊತೆಗೆ ಮಹಾವೀರ ಮಂದಿರ ಟ್ರಸ್ಟ್‍ನವರು ನಂದಿನಿ ತುಪ್ಪವನ್ನು ಬಳಕೆ ಮಾಡಿ ಆಯೋಧ್ಯೆಯಲ್ಲಿ ಲಡ್ಡು ಪ್ರಸಾದವನ್ನು ತಯಾರಿಸಿ ಭಕ್ತಾದಿಗಳಿಗೆ ವಿತರಿಸಲಾಗುತ್ತಿದೆ, ವಿವಿಧ ದೇಶಗಳಾದ ಯು.ಎಸ್.ಎ, ಆಸ್ಟ್ರೇಲಿಯಾ, ಕತಾರ, ಸಿಂಗಾಪುರ, ದುಬೈ, ಓಮನ್, ಬಹ್ರೇನ್, ಬ್ರೂನೆಗಳಿಗೆ 1 ವರ್ಷದಲ್ಲಿ 180 ಮೆಟ್ರಿಕ್ ಟನ್‍ಗಳಷ್ಟು ಸರಬರಾಜು ಮಾಡಲಾಗಿದೆ.
ಇತ್ತೀಚೆಗೆ ಮೈಸೂರು ನಗರದಲ್ಲಿ ನಡೆದ ತುಪ್ಪ ಕಲಬೆರಕೆ ಘಟನೆಯ ಬಗ್ಗೆ ಕರ್ನಾಟಕ ಹಾಲು ಮಹಾಮಂಡಳ ತೆಗೆದುಕೊಂಡಿರುವ ಕ್ರಮಗಳು ;
ಎಲ್ಲಾ ಒಕ್ಕೂಟ ಮತ್ತು ಘಟಕಗಳ ಮುಖ್ಯಸ್ಥರೊಂದಿಗೆ ತುರ್ತು ವಿಡೀಯೋ ಸಂವಾದ ಸಭೆಯನ್ನು ಕೈಗೊಂಡು ರಾಜ್ಯಾದ್ಯಂತ ಪ್ರತಿದಿನ ಮಾರುಕಟ್ಟೆಯಲ್ಲಿ ಲಭ್ಯವಿರುವ ನಂದಿನಿ ತುಪ್ಪದ ಮಾದರಿಗಳನ್ನು ಪಡೆದು ಪರೀಕ್ಷೆಗಳನ್ನು ಕೈಗೊಳ್ಳಲು ತಿಳಿಸಿ ಕ್ರಮವಿಡಲಾಗುತ್ತಿದೆ.
ಎಲ್ಲಾ ಒಕ್ಕೂಟಗಳಲ್ಲಿ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಜಾಗೃತ ದಳ ರಚಿಸಿ ಆಯಾ ಜಿಲ್ಲಾ ಒಕ್ಕೂಟಗಳ ಮಾರುಕಟ್ಟೆ ವ್ಯಾಪ್ತಿಯಲ್ಲಿ ಪರಿಶೀಲನೆ ಮಾಡಿ ವರದಿಸಲು ಕ್ರಮವಿಡಲಾಗಿದೆ ಎಂದು ತಿಳಿಸಿದ್ದಾರೆ.
ಈ ರೀತಿಯ ಘಟನೆಗಳು ಮರುಕಳಿಸದಂತೆ ಹಾಗೂ ನಂದಿನಿ ತುಪ್ಪವನ್ನು ಡೂಪ್ಲಿಕೇಟ್ ಮಾಡದಂತೆ ತಡೆಯಲು ಎಲ್ಲಾ ನಂದಿನಿ ತುಪ್ಪದ ಪ್ಯಾಕುಗಳಿಗೆ QR Code ಮತ್ತು holo gram ಅಳವಡಿಸುವ ಕ್ರಮ ಪ್ರಗತಿಯಲ್ಲಿದೆ. ಮಾರಾಟ ದರ ಹೊರತು ಪಡಿಸಿ ಇತರ ಯಾವುದೇ ಹೆಚ್ಚಿನ ರಿಯಾಯಿತಿ ಪಡೆಯಲು ಮಾರಾಟಗಾರರ ಹತ್ತಿರ ಖಾತರಿ ಪಡಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ವ್ಯವಸ್ಥಾಪಕ ನಿರ್ದೇಶಕರು ದೂರವಾಣಿ ಸಂ.080-26096803 ಮತ್ತು ಇಮೇಲ್ ವಿಳಾಸ: [email protected] ಹಾಗೂ ಟೋಲ್‍ಫ್ರೀ ಸಂಖ್ಯೆ-18004258030, ಇಮೇಲ್ ವಿಳಾಸ: [email protected]  ನಂದಿನಿ ನೆರವು ದೂರವಾಣಿ ಸಂ.080-66660000 ಸಂಪರ್ಕಿಸಿ ಎಂದು ಕರ್ನಾಟಕ ಹಾಲು ಮಹಾಮಂಡಳಿಯ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button