Kannada NewsKarnataka NewsLatest

*BREAKING: ಕಂಟೇನರ್ ಹಾಗೂ ಕಾರು ಭೀಕರ ಅಪಘಾತ: ನವ ವಿವಾಹಿತೆ ಸೇರಿ ಇಬ್ಬರು ಸಾವು*

ಪ್ರಗತಿವಾಹಿನಿ ಸುದ್ದಿ: ಕಂಟೇನರ್ ಗೆ ಹಿಂದಿನಿಂದ ಬಂದು ಕಾರು ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ನವ ವಿವಾಹಿತೆ ಸೇರಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶೆಟ್ಟಿಗೆರೆ ಕ್ರಾಸ್ ಬಳಿ ಈ ಅಪಘಾತ ಸಂಭವಿಸಿದೆ. ರಕ್ಷಿತಾ ರೆಡ್ಡಿ (28) ಹಾಗೂ ಆಕೆಯ ಸಂಬಂಧಿ ಪವನ್ ರೆಡ್ಡಿ (30) ಮೃತ ದುರ್ದೈವಿಗಳು. ರಕ್ಷಿತಾ ರೆಡ್ಡಿ ಪತಿ ರಾಜಶೇಖರ್ ರೆಡ್ಡಿ ಸ್ಥಿತಿ ಗಂಭೀರವಾಗಿದೆ.

Home add -Advt

ಆಂಧ್ರ ಮೂಲದವರಾದ ರಕ್ಷಿತಾ ರೆಡ್ಡಿ ಹಾಗೂ ರಾಜಶೇಖರ್ ರೆಡ್ಡಿ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದರು. 5 ತಿಂಗಳ ಹಿಂದೆ ಮದುವೆಯಾಗಿದ್ದರು. ಇಂದು ಸ್ವಗ್ರಾಮ ಆಂಧ್ರಪ್ರದೇಶದ ಅನಂತಪುರಂನ ಅವಳಿಗಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದ್ದು, ರಕ್ಷಿತಾ ರೆಡ್ಡಿ ಹಾಗೂ ಆಕೆಯ ಸಂಬಂಧಿ ಸಾವನ್ನಪ್ಪಿದ್ದಾರೆ. ಪತಿ ರಾಜಶೇಖರ್ ಸ್ಥಿತಿ ತೀವ್ರ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೇರಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

https://pragativahini.com/congress-leaderdead-body-foundchitradurga

Related Articles

Back to top button